ಮನೆಯಲ್ಲಿ ಐವರಿಗಿಂತ ಹೆಚ್ಚು ಜನರಿದ್ದರೆ, ಹೆಚ್ಚುವರಿ ಕುಟುಂಬ ಸದಸ್ಯರ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಇದು ಅಕ್ರಮ ತೆರಿಗೆ. ಇದರಿಂದ ತೀವ್ರ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿ ಬೀದಿಗೆ ಇಳಿದಿದ್ದಾರೆ. ಇದಕ್ಕೆ ವ್ಯಾಪಾರಿಗಳು ಸಾಥ್ ನೀಡಿದ್ದು, ವ್ಯಾಪಾರ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿವೆ.
ಗಿಲ್ಗಿಟ್ (ನ.19) ಇತ್ತೀಚೆಗಷ್ಟೇ ಭಾರತದ ಪಂಜಾಬ್ ರಾಜ್ಯದಲ್ಲಿ ಹಸು,ಕುದುರೆ ಸೇರಿ ಸಾಕುಪ್ರಾಣಿಗಳ ಮೇಲೂ ತೆರಿಗೆ ಹಾಕುವ ಪ್ರಸ್ತಾಪವೊಂದನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ವರದಿಯಾಗಿತ್ತು. ಇಂಥದ್ದೇ ಘಟನೆಯೊಂದು ಇದೀಗ ಪಾಕಿಸ್ತಾನದ ವಿವಾದಿತ ಪ್ರದೇಶ ಗಿಲ್ಗಿಟ್ ಬಾಲ್ಟಿಸ್ತಾನದಲ್ಲಿ ನಡೆದಿದೆ.
ಹಾಗಾಗಿ ಅಲ್ಲಿ ಪಾಕ್ ವಿರೋಧಿ ಧರಣಿಗಳು ಆರಂಭವಾಗಿವೆ. ಮನೆಯಲ್ಲಿ ಕೋಳಿ, ಹಸು ಸಾಕಿದರೆ ತೆರಿಗೆ ಹಾಕಲಾಗುತ್ತಿದೆ. ಮನೆಯಲ್ಲಿ ಐವರಿಗಿಂತ ಹೆಚ್ಚು ಜನರಿದ್ದರೆ, ಹೆಚ್ಚುವರಿ ಕುಟುಂಬ ಸದಸ್ಯರ ಮೇಲೆ ತೆರಿಗೆ ವಿಧಿಸಲಾಗುತ್ತಿದೆ. ಇದು ಅಕ್ರಮ ತೆರಿಗೆ. ಇದರಿಂದ ತೀವ್ರ ತೊಂದರೆಯಾಗುತ್ತಿದೆ ಎಂದು ಸ್ಥಳೀಯರು ಆರೋಪಿಸಿ ಬೀದಿಗೆ ಇಳಿದಿದ್ದಾರೆ. ಇದಕ್ಕೆ ವ್ಯಾಪಾರಿಗಳು ಸಾಥ್ ನೀಡಿದ್ದು, ವ್ಯಾಪಾರ ಚಟುವಟಿಕೆಗಳು ಸಂಪೂರ್ಣ ಸ್ತಬ್ಧವಾಗಿವೆ.
ಹಾಗಂತ ಪಡೆದ ತೆರಿಗೆಯನ್ನು ಅಭಿವೃದ್ಧಿ ಕಾರ್ಯಕ್ಕೂ ಬಳಸುತ್ತಿಲ್ಲ. ಸುಗ್ರೀವಾಜ್ಞೆ ಮೂಲಕ ಅಕ್ರಮ ತೆರಿಗೆ ಹಾಕಿ ಇಸ್ಲಾಂ ವಿರೋಧಿ ನಡೆಯನ್ನು ಅನುಸರಿಸಲಾಗುತ್ತಿದೆ ಎಂದು ಅವರು ಆರೋಪಿಸುತ್ತಿದ್ದಾರೆ.
