ಆಹಾರ ವಿತರಣೆಯಲ್ಲಿ ಪಾರದರ್ಶಕತೆಯೊಂದಿಗೆ ಎಷ್ಟು ಜನರಿಗೆ ಆಹಾರ ಲಭ್ಯವಿದೆ ಎಂಬ ಮಾಹಿತಿ ನೀಡುವ "ಟಿಕ್ಕರ್‌ ಮೆಷಿನ್‌'ಗಳನ್ನು ಅಳವಡಿಸಲಾಗಿದೆ. ಬೆಂಗಳೂರಿನಾದ್ಯಂತ ಇರುವ 151 ಕ್ಯಾಂಟೀನ್‌ ಗಳಲ್ಲಿಯೂ "ಟಿಕ್ಕರ್‌ ಮೆಷಿನ್‌' ಕಾರ್ಯನಿರ್ವಹಿಸುತ್ತಿವೆ.
ಇಂದಿರಾ ಕ್ಯಾಂಟೀನ್ಗಳಲ್ಲಿ ಸಾರ್ವಜನಿಕರಿಗೆ ಸಮರ್ಪಕವಾಗಿ ಆಹಾರ ಸಿಗುತ್ತಿಲ್ಲ.. ಜತೆಗೆ ಕೆಲವು ಜನರಿಗೆ ಮಾತ್ರ ತಿಂಡಿ-ಊಟ ವಿತರಿಸಲಾಗುತ್ತಿದೆ ಎಂಬ ದೂರುಗಳು ಕೇಳಿಬರ್ತೀವೆ. ಹಾಗಾಗಿ ಪಾಲಿಕೆ ಇದೇ ಮೊದಲ ಬಾರಿಗೆ ಜಿಯೋ ಸ್ಪೇಷಿಯಲ್ ಕ್ವಾಲಿಟಿ ಮಾನಿಟರಿಂಗ್ ಸಿಸ್ಟಮ್ ( GQMS ) ಅಳವಡಿಕೆ ಮಾಡ್ತಿದೆ.
ಬಡವರ ಹಸಿರು ಮುಕ್ತ ಯೋಜನೆ ಇಂದಿರಾ ಕ್ಯಾಂಟೀನ್ ಯೋಜನೆ. ಆದ್ರೆ, ಕ್ಯಾಂಟೀನ್ನಲ್ಲಿ ಆಹಾರ ಪೊರೈಕೆಯಲ್ಲಿ ವ್ಯತ್ಯಯವಾಗುತ್ತಿದೆ ಅನ್ನೋ ಆರೋಪ ಇದೆ. ಈ ಕಳಂಕದಿಂದ ಮುಕ್ತಿ ಪಡೆಯಲು ಪಾಲಿಕೆ ಮಾಸ್ಟರ್ ಪ್ಲಾನ್ ಮಾಡಿದೆ. ಈ ವಿಚಾರದಲ್ಲಿ ಪಾರದರ್ಶಕತೆ ತರಲು ಜಿಯೋ ಸ್ಪೇಷಿಯಲ್ ಕ್ವಾಲಿಟಿ ಮಾನಿಟರಿಂಗ್ ಸಿಸ್ಟಮ್ ಜಾರಿಗೆ ಮುಂದಾಗಿದೆ. ಇದು ಮೊಬೈಲ್ ಅಪ್ಲಿಕೇಷನ್... ಕ್ಯಾಟರಿಂಗ್ ನಿಂದ ಸರಬರಾಜಾಗುವ ಆಹಾರ ಕ್ಯಾಂಟೀನ್ ತಲುಪುವರೆಗೂ, ಅದರ ತೂಕವನ್ನೂ ಒಳಗೊಂಡಂತೆ ಫೋಟೋ ತೆಗೆದು ಈ ಅಪ್ಲಿಕೇಷನ್ ಗೆ ಅಪ್ ಲೋಡ್ ಮಾಡಬೇಕು.
ಪಾಲಿಕೆ 198 ವಾರ್ಡ್ ಗಳಿಗೂ ಇದು ಕಡ್ಡಾಯ.. ಇದರಿಂದ ಎಷ್ಟೆಷ್ಟು ತೂಕದ ಆಹಾರ ಸರಬರಾಜು ಆಗಿದೆ ಎಂಬುದು ಕುಳಿತಲ್ಲೇ ಸಿಗಲಿದೆ. ಇದರ ಮಧ್ಯೆ ಆಹಾರ ವಿತರಣೆಯಲ್ಲಿ ಪಾರದರ್ಶಕತೆಯೊಂದಿಗೆ ಎಷ್ಟು ಜನರಿಗೆ ಆಹಾರ ಲಭ್ಯವಿದೆ ಎಂಬ ಮಾಹಿತಿ ನೀಡುವ "ಟಿಕ್ಕರ್ ಮೆಷಿನ್'ಗಳನ್ನು ಅಳವಡಿಸಲಾಗಿದೆ. ಬೆಂಗಳೂರಿನಾದ್ಯಂತ ಇರುವ 151 ಕ್ಯಾಂಟೀನ್ ಗಳಲ್ಲಿಯೂ "ಟಿಕ್ಕರ್ ಮೆಷಿನ್' ಕಾರ್ಯನಿರ್ವಹಿಸುತ್ತಿವೆ.
ಪಾಲಿಕೆಯ 98 ವಾರ್ಡ್ ಗಳ ಪೈಕಿ 24 ಕಡೆಯಲ್ಲಿ ಮೊಬೈಲ್ ಕ್ಯಾಂಟೀನ್ ತೆರೆಯಲಾಗುತ್ತಿದೆ. ಇದರ ಮಧ್ಯೆ ಇರುವ ಕ್ಯಾಂಟೀನ್'ಗಳ ಪಾರದರ್ಶಕತೆಗೆ ಪಾಲಿಕೆ ಹೊಸ ಹೆಜ್ಜೆ ಇರಿಸಿ ಜನರ ವಿಶ್ವಾಸ ಗಳಿಸಲು ಮುಂದಾಗಿದೆ.
