ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಓಶೋ ಆಗ್ತಿದ್ದಾರಾ? ಅವರ ಟ್ವೀಟೊಂದು ಈ ಅನುಮಾನ ಹುಟ್ಟುಹಾಕಿದೆ. ಓಶೋ ಅವತಾರದಲ್ಲಿರುವ ಅವರ ಫೋಟೋವನ್ನು ಪೋಸ್ಟ್ ಮಾಡಿ, ಡಿಫರೆಂಟ್ ಕ್ಯಾಪ್ಷನ್ ನೀಡಿದ್ದಾರೆ. ಮೋಹನ್‌ಲಾಲ್ ಯಶಸ್ಸು ಕಾಣಲು ಸಾಹಸಪಡುತ್ತಿದ್ದಾರೆ. ಆದರೆ, ಇತ್ತೀಚೆಗಿನ ‘ಒಪ್ಪಮ್’ ಅವರಿಗೆ ತಕ್ಕಮಟ್ಟಿಗೆ ಬ್ರೇಕ್ ಕೊಟ್ಟಿದ್ದ ಸಿನಿಮಾ. ಈಗ ಓಶೋ ಅವತಾರ ಎತ್ತುವ ಮೂಲಕ ಸಿನಿರಸಿಕರನ್ನು ಸೆಳೆಯಲು ಯತ್ನಿಸುತ್ತಿದ್ದಾರಾ? ಇದು ಓಶೋ ಬಯೋಪಿಕ್ ನಿಜಕ್ಕೂ ಹೌದಾ? ಇಡೀ ಮಾಲಿವುಡ್‌ನಲ್ಲಿ ಅಂತೆಕಂತೆಗಳೇ ಜಾಸ್ತಿ ಆಗುತ್ತಿವೆ. ಇದರಲ್ಲಿ ಯಾವುದು ಸತ್ಯ?