ನಿಷೇಧಿತ 500 ಹಾಗೂ 1000 ರೂ ಮುಖಬೆಲೆಯ 10ಕ್ಕಿಂತ ಹೆಚ್ಚು ನಿಷೇಧಿತ ನೋಟುಗಳನ್ನು ಹೊಂದಿದ್ದರೆ ಕ್ರಿಮಿನಲ್ ಅಪರಾಧವಾಗಲಿದೆ. ಕೇಂದ್ರ ಸಚಿವ ಸಂಪುಟವು ಇಂತದ್ದೊಂದು ಹೊಸ ಕಾನೂನಿಗೆ ಒಪ್ಪಿಗೆ ಸೂಚಿಸಿದೆ.
ನವದೆಹಲಿ (ಡಿ.28): ನಿಷೇಧಿತ 500 ಹಾಗೂ 1000 ರೂ ಮುಖಬೆಲೆಯ 10ಕ್ಕಿಂತ ಹೆಚ್ಚು ನಿಷೇಧಿತ ನೋಟುಗಳನ್ನು ಹೊಂದಿದ್ದರೆ ಕ್ರಿಮಿನಲ್ ಅಪರಾಧವಾಗಲಿದೆ. ಕೇಂದ್ರ ಸಚಿವ ಸಂಪುಟವು ಇಂತದ್ದೊಂದು ಹೊಸ ಕಾನೂನಿಗೆ ಒಪ್ಪಿಗೆ ಸೂಚಿಸಿದೆ.
ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ರಾಷ್ಟ್ರಪತಿ ಅನುಮೋದನೆಗೆ ಇದನ್ನು ಶೀಘ್ರದಲ್ಲಿಯೇ ಕಳುಹಿಸಕೊಡಲಾಗುತ್ತದೆ.
ಈ ನಿಯಮದ ಪ್ರಕಾರ ಒಬ್ಬ ವ್ಯಕ್ತಿ 10 ಕ್ಕಿಂತ ಹೆಚ್ಚು ನಿಷೇಧಿತ ನೋಟುಗಳನ್ನು ಇಟ್ಟುಕೊಳ್ಳುವಂತಿಲ್ಲ. ವಿಶೇಷ ಸಂದರ್ಭವನ್ನು ಹೊರತುಪಡಿಸಲಾಗಿದೆ.
ಜೈಲು ಶಿಕ್ಷೆ ಬಗ್ಗೆ ಅಧಿಕೃತಗೊಳಿಸಿಲ್ಲ. 50 ಸಾವಿರ ರೂ. ದಂಡ ವಿಧಿಸುವ ಸಾಧ್ಯತೆಯಿದೆ. ಇದರ ಬಗ್ಗೆ ವಿಚಾರಣೆಯನ್ನು ಜಿಲ್ಲಾ ನ್ಯಾಯಾಧೀಶರು ನಡೆಸಲಿದ್ದಾರೆ.
