ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿರುವ ಅಸಮಾಧಾನ ಶಮನ ಮಾಡುವ ಹೊಣೆಗಾರಿಕೆಯನ್ನು ಹಿರಿಯ ಮುಖಂಡರಾದ ಆರ್.ವಿ. ದೇಶ ಪಾಂಡೆ, ಕೆ.ಜೆ. ಜಾರ್ಜ್ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ವಹಿಸಲಾಗಿದೆ. 

ಬೆಂಗಳೂರು : ಕಾಂಗ್ರೆಸ್‌ನಲ್ಲಿ ಭುಗಿಲೆದ್ದಿರುವ ಅಸಮಾಧಾನ ಶಮನ ಮಾಡುವ ಹೊಣೆಗಾರಿಕೆಯನ್ನು ಹಿರಿಯ ಮುಖಂಡರಾದ ಆರ್.ವಿ. ದೇಶ ಪಾಂಡೆ, ಕೆ.ಜೆ. ಜಾರ್ಜ್ ಮತ್ತು ಡಿ.ಕೆ. ಶಿವಕುಮಾರ್ ಅವರಿಗೆ ವಹಿಸಲಾಗಿದೆ. 

ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ನಿವಾಸದಲ್ಲಿ ನಡೆದ ಹಿರಿಯ ಸಚಿವರು ಹಾಗೂ ಮುಖಂಡರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. 

ಅಲ್ಲದೆ, ಕಾಂಗ್ರೆಸ್‌ನ ಘಟಾನುಘಟಿ ನಾಯಕರೇ ಈ ಅತೃಪ್ತರ ನಾಯಕತ್ವ ವಹಿಸುತ್ತಿರುವುದರಿಂದ ಖಾಲಿ ಇರುವ ಆರು ಸ್ಥಾನಗಳನ್ನು ಶೀಘ್ರ ಭರ್ತಿ ಮಾಡುವಂತೆ ಹೈಕಮಾಂಡನ್ನು ಕೋರಲು ಈ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು ಎಂದು ಮೂಲಗಳು ತಿಳಿಸಿವೆ.