ಈ ಬಾರಿ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆ ಹೊಸ ದಾಖಲೆಗೆ ಪಾತ್ರವಾಗಿದೆ.. ಇನ್ನು ಇಲ್ಲಿ ಕೈ ತೊಳೆಯಲು ನೀರನ್ನು ಬಳಸಿಲ್ಲ.

ಉಡುಪಿ(ಅ.18): ಅಂತಾರಾಷ್ಟ್ರೀಯ ಭೂಪಟದಲ್ಲಿ ತನ್ನ ಶೈಕ್ಷಣಿಕ ಸಾಧನೆಗಳಿಂದ ಮಾನ್ಯತೆ ಪಡೆದಿರುವ ಉಡುಪಿಯ ಮಣಿಪಾಲ ವಿವಿ ಹೊಸತೊಂದು ದಾಖಲೆಗೆ ಪಾತ್ರವಾಗಿದೆ. ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆ ಯ ವೈದ್ಯಕೀಯ ಸಿಬಂದಿಗಳು ಸಾಮೂಹಿಕವಾಗಿ ಕೈ ತೊಳೆಯುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಈವರೆಗೆ ದೆಹಲಿ ಅಪೋಲೋ ಆಸ್ಪತ್ರೆಯಲ್ಲಿ 1711 ಮಂದಿ ಕೈ ತೊಳೆದು ದಾಖಲೆ ನಿರ್ಮಿಸಿದ್ದರು. ಈ ಬಾರಿ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆ ಹೊಸ ದಾಖಲೆಗೆ ಪಾತ್ರವಾಗಿದೆ.. ಇನ್ನು ಇಲ್ಲಿ ಕೈ ತೊಳೆಯಲು ನೀರನ್ನು ಬಳಸಿಲ್ಲ. ಬದಲಿಗೆ ಲಿಕ್ವಿಡ್ ಬಳಸಿದ್ದಾರೆ.. ಈಗಾಗಲೇ ದಾಖಲೆ ಪೂರ್ಣಗೊಂಡಿದ್ದು, ಅಧಿಕೃತ ಪ್ರಮಾಣಪತ್ರ ಬರೋದೊಂದೆ ಬಾಕಿಯಿದೆ.