ರೈಲು ಪ್ರಯಾಣಕ್ಕೆ ದಾಖಲಾತಿ ಹೊತ್ತೊಯ್ಯುವ ತಾಪತ್ರಯವಿಲ್ಲ

New rail travel ID proof: Aadhaar, DL in DigiLocker
Highlights

ಇನ್ನು ಮುಂದೆ ಭಾರತೀಯ ರೈಲ್ವೆಯಲ್ಲಿ ಪ್ರಯಾಣ ಮಾಡಬೇಕಾದವರು ಮತ್ತಷ್ಟು ನಿರಾಳರಾಗಬಹುದು. ವಿಳಾಸ ದಾಖಲೆಯ ಹೊರೆಯನ್ನು ರೈಲ್ವೆ ಕಡಿಮೆ ಮಾಡಿದೆ. ಹೇಗೆ ಅಂತೀರಾ ಮುಂದೆ ಓದಿ..

ನವದೆಹಲಿ[ಜು.6] ಡಿಜಿ ಲಾಕರ್ ನಲ್ಲಿ ಭದ್ರವಾಗಿರುವ ಆಧಾರ್ ಸೇರಿದಂತೆ ವಿವಿಧ ವಿಳಾಸ ದಾಖಲೆಗಳನ್ನು ಪ್ರಯಾಣದ ಸಂದರ್ಭ ಬಳಸಿಕೊಳ್ಳಲು ಭಾರತೀಯ ರೈಲ್ವೆ ಒಪ್ಪಿಗೆ ನೀಡಿದೆ.

ಇಷ್ಟು ದಿನ ರೈಲ್ವೆ ಇಲಾಖೆ ಸಿಬ್ಬಂದಿಗೆ ವಿಳಾಸ ಗುರುತಿಗಾಗಿ ನಿಗದಿಪಡಿಸಿದ ದಾಖಲೆಯನ್ನು ನೀಡಬೇಕಾಗಿತ್ತು. ಆದರೆ ಡಿಜಿ ಲಾಕರ್ ನಲ್ಲಿ ನಿಮ್ಮ ಆಧಾರ್ ಕಾರ್ಡ್ ಭದ್ರವಾಗಿದ್ದರೆ ಮೊಬೈಲ್ ನಲ್ಲಿ ಅದನ್ನೇ ತೋರಿಸಿದರೆ  ಇನ್ನು ಮುಂದೆ ನಿಶ್ಚಿಂತೆಯಿಂದ ಪ್ರಯಾಣ ಮಾಡಬಹುದು.

ಪ್ರತಿ ದಿನ ಆಧುನಿಕತೆಗೆ ತೆರೆದುಕೊಳ್ಳುತ್ತಿರುವ ಭಾರತೀಯ ರೈಲ್ವೆ ಡಿಜಿಟಲ್ ಪದ್ಧತಿ ಅಳವಡಿಕೆಗೆ ಮುಂದಾಗಿದೆ. ಜತೆಗೆ ಪ್ರಯಾಣಿಕರೊಂದಿಗೆ ಸಿಬ್ಬಂದಿ ಹೇಗೆ ವರ್ತಿಸಬೇಕು ಎಂಬ ಪಾಠವನ್ನು ಮಾಡಲಿದೆ. ಸೌಹಾರ್ದಯುತ ವರ್ತನೆಗೆ ಮೊದಲ ಆದ್ಯತೆ ಎಂದು ಪ್ರಕಟಣೆಯಲ್ಲಿ ಹೇಳಿದೆ.

loader