ಭಾಗಶಃ ಪಿಎಫ್ ಹಿಂತೆಗೆತಕ್ಕೆ ಬಡ್ಡಿ ವಿಧಿಸದೇ ಇರುವ ಮಹತ್ವದ ತೀರ್ಮಾನವನ್ನು ಕೈಗೊಳ್ಳುವ ನಿರೀಕ್ಷೆಯಿದೆ. ಇದರಿಂದಾಗಿ ಇನ್ನೂ ಕರ್ತವ್ಯದ ಅವಧಿಯಲ್ಲಿದ್ದಾಗಲೇ ಕೆಲಸ ಕಳೆದುಕೊಂಡವರಿಗೆ ಅನುಕೂಲವಾಗಲಿದೆ.
ನವದೆಹಲಿ : ಭಾಗಶಃ ಪಿಎಫ್ ಹಿಂತೆಗೆತಕ್ಕೆ ಬಡ್ಡಿ ವಿಧಿಸದೇ ಇರುವ ಮಹತ್ವದ ತೀರ್ಮಾನವನ್ನು ಕೈಗೊಳ್ಳುವ ನಿರೀಕ್ಷೆಯಿದೆ. ಇದರಿಂದಾಗಿ ಇನ್ನೂ ಕರ್ತವ್ಯದ ಅವಧಿಯಲ್ಲಿದ್ದಾಗಲೇ ಕೆಲಸ ಕಳೆದುಕೊಂಡವರಿಗೆ ಅನುಕೂಲವಾಗಲಿದೆ.
ಏಪ್ರಿಲ್ 13ರಂದು ನೌಕರರ ಭವಿಷ್ಯ ನಿಧಿ ಮಂಡಳಿಯ ಕೇಂದ್ರೀಯ ಟ್ರಸ್ಟಿಗಳ ಮಂಡಳಿ ಸಭೆ ನಡೆಯಲಿದೆ. ಅಲ್ಲಿ ಈ ಕುರಿತ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.
ನೌಕರರು ಒಂದು ಕಂಪನಿಯಲ್ಲಿ ಕೆಲಸ ಬಿಟ್ಟಬಳಿಕ ಎರಡು ತಿಂಗಳಾದರೂ ಇನ್ನೊಂದು ಕಡೆ ಕೆಲಸ ಸಿಕ್ಕದೇ ಹೋದರೆ ಅಂಥವರಿಗೆ ಭಾಗಶಃ ಪಿಎಫ್ ಹಿಂತೆಗೆತಕ್ಕೆ ಬಡ್ಡಿರಹಿತವಾಗಿ ಅವಕಾಶ ಮಾಡಿಕೊಡಲಾಗುತ್ತದೆ. ಒಂದು ಬಾರಿ ಮಾತ್ರ ಹಿಂತೆಗೆತಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಉಳಿದ ಪಿಎಫ್ ಹಣ ಅವರ ಖಾತೆಯಲ್ಲೇ ಉಳಿಯಲಿದ್ದು, ಅದನ್ನು ಫೈನಲ್ ಸೆಟ್‌್ಲ ಮೆಂಟ್ ವೇಳೆ ನೀಡಲಾಗುತ್ತದೆ.

Last Updated 14, Apr 2018, 1:13 PM IST