ಈಗ ನಗದು ರಹಿತ ವ್ಯಾಪಾರಕ್ಕೂ ಕೇಂದ್ರ ಸರ್ಕಾರ ಪ್ಲಾನ್ ಮಾಡಿಕೊಂಡಿದೆ.
ಕೇಂದ್ರ ಸರ್ಕಾರ ಭ್ರಷ್ಟಾಚಾರ, ಭಯೋತ್ಪಾದನೆ ಹಾಗೂ ಕಪ್ಪು ಹಣ ತಡೆಯಲು 500 , 1000 ರೂಪಾಯಿ ನೋಟ್ ಬ್ಯಾನ್ ಮಾಡಿದೆ. ಈಗ ನಗದು ರಹಿತ ವ್ಯಾಪಾರಕ್ಕೂ ಕೇಂದ್ರ ಸರ್ಕಾರ ಪ್ಲಾನ್ ಮಾಡಿಕೊಂಡಿದೆ. ಕೇಂದ್ರ ಸರ್ಕಾರದ ಕನಸು ಗೋವಾ ಮಾಡಲು ಮುಂದಾಗಿದೆ. ಅದ್ ಹೇಗೆ ಅನ್ನೋದ್ರ ರಿಪೋರ್ಟ್ ಇಲ್ಲಿದೆ.
500 , 1000 ರೂ. ನೋಟ್ ಬ್ಯಾನ್ ಮಾಡಿದ ಮೋದಿ ಕನಸು ನನಸು ಮಾಡಲು ಗೋವಾ ಸರ್ಕಾರ ಮುಂದಾಗಿದೆ. ಗೋವಾದಲ್ಲಿ ಹೊಸ ವರ್ಷದಿಂದ ಎಲ್ಲಾ ವ್ಯವಹಾರಗಳು ಕ್ಯಾಶ್ ಲೆಸ್ ಆಗಲಿವೆ ಅಂತ ಗೋವಾ ಸರ್ಕಾರ ತಿಳಿಸಿದೆ. ಒಂದು ವೇಳೆ ಈ ಕಾರ್ಯದಲ್ಲಿ ಗೋವಾ ಸರ್ಕಾರ ಸಕ್ಸಸ್ ಆದ್ರೆ ದೇಶದ ಮೊದಲ ನಗದು ರಹಿತ ರಾಜ್ಯ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ.
ಗೋವಾ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಎಂಟಿಎಂ ಹಾಗೂ ಕ್ರೆಡಿಟ್ ಕಾರ್ಡ್ ಬಳಸ್ತಿರೋ ಕಾರಣ ಕ್ಯಾಶ್‍ಲೆಸ್ ಸೊಟೈಟಿಯ ಮೊದಲ ರಾಜ್ಯವಾಗಲಿದೆ. ಗೋವಾ ಸರ್ಕಾರ ದಯಾನಂದ್ ಸೋಶಿಯಲ್ ಸೆಕ್ಯೂರಿಟಿ ಸ್ಕೀಮ್- ಪಿಂಚಣಿ ಯೋಜನೆಯಡಿ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಪಾವತಿಸುವುದನ್ನು ಶುರು ಮಾಡಿದೆ. ಸದ್ಯಕ್ಕೆ ರಾಜ್ಯದ ಯಾವುದೇ ಹಣ ಪಾವತಿ ಚೆಕ್ ಮೂಲಕ ಆಗುತ್ತಿಲ್ಲ. ಎಲೆಕ್ಟ್ರಾನಿಕ್ ವರ್ಗಾವಣೆ ಮೂಲಕವೇ ಎಲ್ಲಾ ಪಾವತಿಗಳು ಆಗುತ್ತಿವೆ.
ನಗದು ರಹಿತ ವ್ಯಾಪಾರಕ್ಕೆ ಸ್ಮಾಟ್ಫೋನ್ ಇರಬೇಕೆಂದೇನೂ ಇಲ್ಲ. ಗ್ರಾಹಕರು ಬೇಕಾದ ವಸ್ತುಗಳು ಖರೀದಿಸಿದ ನಂತರ ವ್ಯಾಪಾರಿ ಮೊಬೈಲ್ನಲ್ಲಿ *99# ಅನ್ನು ಡಯಲ್ ಮಾಡಬೇಕು. ಆ ನಂತರ ಖಾತೆ ಸೂಚಿಸುವ ಸೂಚನೆಗಳು ಪಾಲಿಸಿಕೊಂಡು ಹೋಗಬೇಕು. ಆಗ ಇಡೀ ವ್ಯಾಪಾರ ವಹಿವಾಟು ಪೂರ್ಣಗೊಳ್ಳುತ್ತೆ. ತಕ್ಷಣವೇ ವ್ಯಾಪಾರಿಯ ಖಾತೆಗೆ ನಿಮ್ಮ ಖಾತೆಯಲ್ಲಿರೋ ಹಣ ಜಮೆ ಆಗುತ್ತೆ.
ಇನ್ನು ಈಗಾಗ್ಲೇ ನೋಂದಾಯಿತ 26 ಸಾವಿರ ವ್ಯಾಪಾರಿಗಳ ಜೊತೆ 10 ಸಾವಿರ ವೈನ್ ಶಾಪ್ಗಳಿಗೂ ಸಂದೇಶ ರವಾನೆಯಾಗಿದೆ. ಈ ಎಲ್ಲಾ ವ್ಯವಹಾರಗಳು ಇನ್ಮುಂದೆ ನಗದು ರಹಿತವಾಗಿ ನಡೆಯಲಿದೆ. ಒಟ್ಟಿನಲ್ಲಿ ಗೋವಾ ನಗದು ರಹಿತ ವ್ಯಾಪಾರಕ್ಕೆ ಸಕಲ ರೀತಿಯಲ್ಲಿ ತಯಾರಿ ನಡೆಸಿದೆ. ಡಿಸೆಂಬರ್ 31 ರ ನಂತ್ರ ಅಂದ್ರೆ ಹೊಸ ವರ್ಷದ ಬಳಿಕ ಇಡೀ ಗೋವಾದ ಎಲ್ಲಾ ವ್ಯವಹಾರಗಳು ನಗದುರಹಿತ ಆಗಲಿವೆ ಅಂತ ಗೋವಾ ಸರ್ಕಾರ ಸ್ಪಷ್ಟಪಡಿಸಿದೆ.
ವರದಿ: ಜೆ. ಎಸ್. ಪೂಜಾರ್, ನ್ಯೂಸ್ ಡೆಸ್ಕ್ , ಸುವರ್ಣನ್ಯೂಸ್
