ಕನ್ನಡದ ದಿನಪತ್ರಿಕೆಗಳಲ್ಲಿ, ಬ್ಲಾಗ್‌ಗಳಲ್ಲಿ ಪ್ರಕಟವಾಗುವ ವಿಶೇಷ, ಉಪಯುಕ್ತ ಲೇಖನ, ವರದಿ ಹಾಗೂ ಸುದ್ದಿಗಳನ್ನು ಈಗ ಡಿಂಡಿಮದಲ್ಲಿ ಓದಬಹುದು. ಸಮಾಜದಲ್ಲಿ ನಡೆಯುವ ಕೊಲೆ, ಸುಲಿಗೆ, ಅನಾಚಾರಗಳನ್ನು ಬಿತ್ತರಿಸದೆ, ಕೇವಲ ಸದ್ವಿಚಾರಗಳುಳ್ಳ ಲೇಖನಗಳನ್ನು ಡಿಂಡಿಮ ಪ್ರಕಟಿಸುತ್ತಿದೆ. ವಿಜ್ಞಾನ, ತಂತ್ರಜ್ಞಾನ, ಕಲೆ, ಕೃಷಿ, ಚಿತ್ರೋದ್ಯಮ, ರಾಜಕೀಯ, ಆರೋಗ್ಯ, ಹಣಕಾಸು, ಕಥೆ, ನುಡಿಚಿತ್ರ ಕುರಿತಾದ ಅಂಕಣಗಳನ್ನು ಇಲ್ಲಿ ಓದಬಹುದಾಗಿದೆ. ನಿತ್ಯ ಜೀವನದ ಜಂಜಡದಲ್ಲಿ ಬೇಸತ್ತವರಿಗೆ ಈ ಆಪ್‌ನಲ್ಲಿರುವ ಲೇಖನಗಳು ಖುಷಿ ನೀಡುತ್ತವೆ. 

- ನಿತೀಶಡಂಬಳ
ಇದು ಆ್ಯಂಡ್ರಾಯ್ಡ್‌ ಯುಗ. ಮಾನವನ ಆಸಕ್ತಿಗನುಗುಣವಾಗಿ ನಾನಾ ರೀತಿಯ ಅಪ್ಲಿಕೇಷನ್‌ಗಳು ಪ್ಲೇಸ್ಟೋರ್‌ನಲ್ಲಿ ಲಭ್ಯ. ಕನ್ನಡ ಭಾಷೆಯಲ್ಲಿ ಇತಿಹಾಸ, ರಸಪ್ರಶ್ನೆ, ಭಾಷಾ ಕಲಿಕೆಯ ಅನೇಕ ಆಪ್‌ಗಳು ಪ್ಲೇಸ್ಟೋರ್‌ನಲ್ಲಿ ಕಾಣಸಿಗುತ್ತವೆ. ಇದೇ ನಿಟ್ಟಿನಲ್ಲಿ ಕನ್ನಡದಲ್ಲಿನ ಉಪಯುಕ್ತ ಲೇಖನಗಳನ್ನು ವಾಚಕರಿಗೆ ನೀಡುವ ಆಪ್‌ಗಳಲ್ಲಿ ‘ಡಿಂಡಿಮ' ಆಪ್‌ ಮುಂಚೂಣಿಯಲ್ಲಿದೆ.
ಡಿಂಡಿಮ ಈಗಾಗಲೇ ಅನೇಕರನ್ನು ತಲುಪಿದ್ದು, ನಾಲ್ಕು ತಿಂಗಳಲ್ಲಿ 5 ಸಾವಿರಕ್ಕೂ ಹೆಚ್ಚು ಜನ ಆ ಆಪ್‌ನ್ನು ಡೌನ್‌ಲೋಡ್‌ ಮಾಡಿದ್ದಾರೆ. ಕನ್ನಡದ ದಿನಪತ್ರಿಕೆಗಳಲ್ಲಿ, ಬ್ಲಾಗ್‌ಗಳಲ್ಲಿ ಪ್ರಕಟವಾಗುವ ವಿಶೇಷ, ಉಪಯುಕ್ತ ಲೇಖನ, ವರದಿ ಹಾಗೂ ಸುದ್ದಿಗಳನ್ನು ಈಗ ಡಿಂಡಿಮದಲ್ಲಿ ಓದಬಹುದು. ಸಮಾಜದಲ್ಲಿ ನಡೆಯುವ ಕೊಲೆ, ಸುಲಿಗೆ, ಅನಾಚಾರಗಳನ್ನು ಬಿತ್ತರಿಸದೆ, ಕೇವಲ ಸದ್ವಿಚಾರಗಳುಳ್ಳ ಲೇಖನಗಳನ್ನು ಡಿಂಡಿಮ ಪ್ರಕಟಿಸುತ್ತಿದೆ. ವಿಜ್ಞಾನ, ತಂತ್ರಜ್ಞಾನ, ಕಲೆ, ಕೃಷಿ, ಚಿತ್ರೋದ್ಯಮ, ರಾಜಕೀಯ, ಆರೋಗ್ಯ, ಹಣಕಾಸು, ಕಥೆ, ನುಡಿಚಿತ್ರ ಕುರಿತಾದ ಅಂಕಣಗಳನ್ನು ಇಲ್ಲಿ ಓದಬಹುದಾಗಿದೆ. ನಿತ್ಯ ಜೀವನದ ಜಂಜಡದಲ್ಲಿ ಬೇಸತ್ತವರಿಗೆ ಈ ಆಪ್‌ನಲ್ಲಿರುವ ಲೇಖನಗಳು ಖುಷಿ ನೀಡುತ್ತವೆ.
ಸ್ನೇಹಿತರ ಗುಂಪು

ಸ್ನೇಹಿತರ ಗುಂಪೊಂದು ಈ ಅಪ್ಲಿಕೇಷನ್‌ ಸೃಷ್ಟಿಸಿದೆ. ಮಹಾಬಲೇಶ್ವರ ಭಟ್‌, ಹರ್ಷ ಭಟ್‌, ಮಂಜುನಾಥ ಭಟ್‌, ಶರತ್‌ ಹೆಗ್ಡೆ, ವರುಣ ಕುಂಭೇಶ್ವರ, ರಂಗನಾಥ, ಸ್ನೇಹಾ, ದಿವ್ಯಾ ಪುರಾಣಿಕ, ದರ್ಶನ ಡಿಂಡಿಮದ ಸೃಷ್ಟಿಕರ್ತರು. ಮೂಲತಃ ಇವರೆಲ್ಲ ಶಿರಸಿಯವರು. ಸದ್ಯ ಬಹುತೇಕರು ಬೆಂಗಳೂರಿನಲ್ಲಿ ವಿವಿಧೆಡೆ ಕೆಲಸ ಮಾಡುತ್ತ, ಡಿಂಡಿಮವನ್ನು ಜನಕ್ಕೆ ಪರಿಚಯಿಸಿದ್ದಾರೆ. ಆಗಸ್ಟ್‌ 2016ರಲ್ಲಿ ಹುಟ್ಟುಕೊಂಡ ಡಿಂಡಿಮ ಕಡಿಮೆ ಅವಧಿಯಲ್ಲಿ ಬಹು ಜನಪ್ರಿಯವಾಗಿದೆ.ಸದ್ಯಕ್ಕೆ ಈ ತಂಡದಲ್ಲಿ 9 ಸ್ನೇಹಿತರಿದ್ದು, ಇದಲ್ಲದೆ ಗೃಹಿಣಿಯರು, ಉದ್ಯೋಗಸ್ಥರು ಸೇರಿದಂತೆ ಅನೇಕರು ಡಿಂಡಿಮಕ್ಕೆ ಲೇಖನಗಳನ್ನು ಕಳುಹಿಸುತ್ತಾರೆ. ಬರವಣಿಗೆಯ ಆಸಕ್ತಿಯುಳ್ಳ ಅನೇಕ ಲೇಖಕರು ಸಹ ಡಿಂಡಿಮಕ್ಕೆ ಲೇಖನಗಳನ್ನು ಕಳುಹಿಸಬಹುದಾಗಿದೆ.
70 ಪದಗಳ ಮಿತಿ

ಈ ತಂಡ, ಕೇವಲ 70 ಪದಗಳ ಮಿತಿಯುಳ್ಳ ಪರಿಚ್ಛೇದವನ್ನು ಲೇಖನಕ್ಕೆ ಪೀಠಿಕೆಯಾಗಿ ನೀಡುತ್ತಿದೆ. ಆಸಕ್ತಿಯುಳ್ಳವರು ಪರಿಚ್ಛೇದದ ಕೆಳಗೆ ಸೂಚಿಸಿದ ಲಿಂಕ್‌ ಮುಖಾಂತರ ಸಂಪೂರ್ಣ ಲೇಖನವನ್ನು ಓದಬಹುದು. ಇದರಿಂದಾಗಿ ಜನರು ತಮ್ಮ ಅಭಿರುಚಿ ಹೆಚ್ಚಿದೆ. ಪತ್ರಿಕೆಗಳಲ್ಲಿನ ವರದಿ, ಲೇಖನ ಓದಲು ಎಲ್ಲರಿಗೂ ಅಸಾಧ್ಯ. ಪರಿಚ್ಛೇದದ ಕೆಳಗೆ ಕೊಟ್ಟಿರುವ ಲಿಂಕ್‌ ಮುಖಾಂತರ ನಿರ್ದಿಷ್ಟಲೇಖನ ಯಾವ ಪತ್ರಿಕೆ, ಬ್ಲಾಗ್‌ನಲ್ಲಿ ಪ್ರಕಟವಾಗಿದೆ ಎಂದು ತಿಳಿಯಬಹುದು.

ಇದಲ್ಲದೆ, ವಿವಿಧ ಭಾಷೆಗಳಲ್ಲಿ ಪ್ರಕಟವಾದ ಸಕಾರಾತ್ಮಕ ಲೇಖನಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಓದುಗರಿಗೆ ನೀಡುತ್ತಾರೆ. ಇದರಿಂದಾಗಿ ಅನ್ಯ ಭಾಷೆ ಬರದಿದ್ದವರೂ ಸಹ ಓದಿ ವಿಷಯ ತಿಳಿಯಬಹುದು. ಈ ಅಪ್ಲಿಕೇಷನ್‌ ಸಂಪೂರ್ಣ ಜಾಹಿರಾತುಗಳಿಂದ ಮುಕ್ತವಾಗಿರುವುದು ವಿಶೇಷ. ಡಿಂಡಿಮ ಡೌನ್‌ಲೋಡ್‌ ಮಾಡಲು www.dindima.in ವೆಬ್‌ಸೈಟ್‌ಗೆ ಲಾಗಿನ್‌ ಆಗಿ. ಡಿಂಡಿಮಕ್ಕೆ ಲೇಖನಗಳನ್ನು darisukannadadindima@gmail.com ಮೇಲ್‌ ವಿಳಾಸಕ್ಕೆ ಕಳುಹಿಸಬಹುದು.
ವಿಜ್ಞಾನ, ತಂತ್ರಜ್ಞಾನ, ಕಲೆ, ಕೃಷಿ, ಚಿತ್ರೋದ್ಯಮ, ರಾಜಕೀಯ, ಆರೋಗ್ಯ, ಹಣಕಾಸು, ಕಥೆ, ನುಡಿಚಿತ್ರ ಕುರಿತಾದ ಅಂಕಣಗಳನ್ನು ಇಲ್ಲಿ ಓದಬಹುದಾಗಿದೆ. ನಿತ್ಯ ಜೀವನದ ಜಂಜಡದಲ್ಲಿ ಬೇಸತ್ತವರಿಗೆ ಈ ಆಪ್‌ನಲ್ಲಿರುವ ಲೇಖನಗಳು ಖುಷಿ ನೀಡುತ್ತವೆ

(ಕನ್ನಡಪ್ರಭ ವಾರ್ತೆ)