ನೂತನ ಗೃಹ ಸಚಿವ ರಾಮಲಿಂಗಾರೆಡ್ಡಿ ಕೆಂಪಯ್ಯರನ್ನ ಹೊರಗಿಟ್ಟು ಮೊದಲ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ವಿಕಾಸಸೌಧದ ತಮ್ಮ ಕೊಠಡಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಬೆಂಗಳೂರು (ಸೆ.04): ನೂತನ ಗೃಹ ಸಚಿವ ರಾಮಲಿಂಗಾರೆಡ್ಡಿ ಕೆಂಪಯ್ಯರನ್ನ ಹೊರಗಿಟ್ಟು ಮೊದಲ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ್ದಾರೆ. ವಿಕಾಸಸೌಧದ ತಮ್ಮ ಕೊಠಡಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು.
ಆದರೆ ಈ ಸಭೆಗೆ ಗೃಹ ಇಲಾಖೆ ಆಪ್ತ ಸಲಹೆಗಾರ ಕೆಂಪಯ್ಯ ಗೈರು ಹಾಜರಾಗಿದ್ದರು. ಕೆಂಪಯ್ಯ ಬಗ್ಗೆ ಸಾಕಷ್ಟು ವಿರೋಧ ವ್ಯಕ್ತವಾಗುತ್ತಲೇ ಇದ್ದರೂ, ಹಿಂದಿನ ಗೃಹ ಸಚಿವರಾದ ಜಾರ್ಜ್ ಮತ್ತು ಪರಮೇಶ್ವರ್ ಅವರನ್ನ ದೂರ ಇಡುವ ಪ್ರಯತ್ನ ಮಾಡಿರಲಿಲ್ಲ. ಇದೀಗ ಇಂತಹ ಪ್ರಯತ್ನವನ್ನ ಮೊದಲ ಹೆಜ್ಜೆಯಲ್ಲೇ ಇಟ್ಟು ರಾಮಲಿಂಗಾರೆಡ್ಡಿ ಅಚ್ಚರಿ ಮೂಡಿಸಿದ್ದಾರೆ. ಈ ಬಗ್ಗೆ ಸಚಿವರಿಗೆ ಕೇಳಿದರೆ, ಈ ಸಭೆ ಅನಿರೀಕ್ಷಿತವಾಗಿ ನಡೆಯಿತು. ಹಾಗಾಗಿ ಅವರು ಬಂದಿಲ್ಲ ಅಂತಾ ಹೇಳಿದರು. ಬಿಜೆಪಿ ರ್ಯಾಲಿಗಳ ಬಗ್ಗೆ ಹಿರಿಯ ಅಧಿಕಾರಿಗಳ ಸಲಹೆ ಪಡೆದು ಮಾಹಿತಿ ನೀಡುವಂತೆ ಸಿದ್ದರಾಮಯ್ಯ , ರಾಮಲಿಂಗಾರೆಡ್ಡಿಗೆ ಸೂಚನೆ ನೀಡಿದ್ದರು. ಆ ಹಿನ್ನಲೆಯಲ್ಲಿ ರಾಮಲಿಂಗಾರೆಡ್ಡಿ ಅಧಿಕಾರಿಗಳ ತುರ್ತು ಸಭೆ ನಡೆಸಿದರು.
