Asianet Suvarna News Asianet Suvarna News

ಜಮ್ಮ ಕಾಶ್ಮೀರ ಸೇರಿ 7 ರಾಜ್ಯಗಳಿಗೆ ನೂತನ ರಾಜ್ಯಪಾಲರ ನೇಮಕ

ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರ ಒಳಗೊಂಡು 7 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿದೆ. 

New Governors For Jammu & Kashmir, Bihar, Haryana, Uttarakhand, Tripura, Sikkim and Meghalaya Appointed by Centre
Author
Bengaluru, First Published Aug 21, 2018, 8:37 PM IST

ನವದೆಹಲಿ[ಆ.21]: ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರ ಒಳಗೊಂಡು 7 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿದೆ. 

ಜಮ್ಮು-ಕಾಶ್ಮೀರ : ಸತ್ಯಪಾಲ್ ಮಲಿಕ್ ನೂತನ ರಾಜ್ಯಪಾಲರಾಗಿ ನೇಮಕ ಮಾಡಿದ್ದು  ಇವರು ಬಿಹಾರದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದರು. ಹಾಲಿ
ರಾಜ್ಯಪಾಲರಾಗಿದ್ದ ಎನ್ ಎನ್ ವ್ರೋಹ್ರ 2008ರಿಂದ ರಾಜ್ಯಪಾಲರಾಗಿ ಸೇವೆ ಸಲ್ಲಿಸುತ್ತಿದ್ದರು.

ಉತ್ತರಾಖಂಡ್ : ಉತ್ತರ ಪ್ರದೇಶದ ಹಿರಿಯ ರಾಜಕಾರಣಿ ಬೇಬಿರಾಣಿ ಮೌರ್ಯ ಅವರನ್ನು ನೇಮಕ ಮಾಡಲಾಗಿದೆ.

ಹರಿಯಾಣ:  ಬಿಹಾರದ ಮಾಜಿ ಸಚಿವ ಎಸ್.ಎನ್.ಆರ್ಯ ಅವರ ನೇಮಕ

ಮೇಘಾಲಯ:  ತ್ರಿಪುರದ ರಾಜ್ಯಪಾಲರಾದ ತಥಾಗತ್ ರಾಯ್ ಮೇಘಾಲಯದ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. 

ಬಿಹಾರ:   ಲಾಲಾಜಿ ಟಂಡನ್ ಅವರನ್ನು ನೇಮಿಸಲಾಗಿದ್ದು, ಇಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸತ್ಯಪಾಲ್ ಮಲ್ಲಿಕ್ ಅವರನ್ನು ಜಮ್ಮು ಕಾಶ್ಮೀರಕ್ಕೆ
ವರ್ಗಾಯಿಸಲಾಗಿದೆ.

ಸಿಕ್ಕಿಂ: ಮೇಘಾಲಯದ ರಾಜ್ಯಪಾಲರಾದ ಗಂಗಾಪ್ರಸಾದ್ ಅವರನ್ನು ನೇಮಿಸಲಾಗಿದೆ. ಹಾಲಿ ರಾಜ್ಯಪಾಲ ಶ್ರೀನಿವಾಸ್ ಪಾಟೀಲ್ ಅವಧಿ ಅಂತ್ಯಗೊಂಡ
ಹಿನ್ನಲೆಯಲ್ಲಿ ನೇಮಕ ಮಾಡಲಾಗಿದೆ.

ತ್ರಿಪುರಾ: ಮೇಘಾಲಯದ ರಾಜ್ಯಪಾಲರಾದ ಕ್ಯಾಪ್ಟನ್ ಸಿಂಗ್ ಸೋಲಂಕಿ ಅವರನ್ನು ತ್ರಿಪುರಾಕ್ಕೆ ನೇಮಿಸಲಾಗಿದೆ.  ಮೇಘಾಲಯಕ್ಕೆ ತಥಾಗತ್ ರಾಯ್
ಅವರನ್ನು ವರ್ಗಾಯಿಸಲಾಗಿದೆ.
 

Follow Us:
Download App:
  • android
  • ios