ನವದೆಹಲಿ[ಜು.07]: ದೇಶದ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ ದಾವೂದ್‌ ಇಬ್ರಾಹಿಂ ಈಗ ಯಾವ ರೀತಿ ಇದ್ದಾನೆ ಎಂಬುದರ ಹೊಸ ಫೋಟೋವೊಂದು ಲಭ್ಯವಾಗಿದೆ.

ಕ್ಲೀನ್‌ ಆಗಿ ಶೇವ್‌ ಮಾಡಿರುವ ದಾವೂದ್‌ ತನ್ನ ನಂಬಿಕಸ್ಥ ಬಂಟ ಜಬೀರ್‌ ಮೋತಿವಾಲಾ ಜತೆಗೆ ಮಾತನಾಡುತ್ತಿರುವ ಈ ಫೋಟೋವನ್ನು ಖಾಸಗಿ ಸುದ್ದಿವಾಹಿನಿಯೊಂದು ಪ್ರಸಾರ ಮಾಡಿದೆ. ದಾವೂದ್‌ಗೆ ಮಂಡಿ ನೋವು ಸೇರಿದಂತೆ ಹಲವು ಸಮಸ್ಯೆಗಳು ಇವೆ ಎಂದು ಈ ಹಿಂದೆ ವರದಿಯಾಗಿತ್ತು.

ಆದರೆ ಫೋಟೋದಲ್ಲಿ ದಾವೂದ್‌ ಆರೋಗ್ಯವಂತನಾಗಿಯೇ ಕಾಣುತ್ತಾನೆ. ಜಬೀರ್‌ ಮೋತಿವಾಲಾನನ್ನು 2018ರ ಆ.17ರಂದು ಬ್ರಿಟನ್‌ ಪೊಲೀಸರು ಬಂಧಿಸಿದ್ದಾರೆ. ಆತನನ್ನು ತನಗೆ ಗಡೀಪಾರು ಮಾಡುವಂತೆ ಬ್ರಿಟನ್‌ ನ್ಯಾಯಾಲಯದಲ್ಲಿ ಅಮೆರಿಕ ಕೋರಿಕೆ ಸಲ್ಲಿಸಿದೆ. ಇದರ ವಿಚಾರಣೆ ವೇಳೆ, ದಾವೂದ್‌ ಪಾಕಿಸ್ತಾನದ ಕರಾಚಿಯಲ್ಲಿದ್ದಾನೆ ಎಂದು ಅಮೆರಿಕ ವಾದಿಸಿತ್ತು.