ಬೆಂಗಳೂರು(ಅ.15): ಇನ್ನು ಮುಂದೆ ಹೈಸ್ಕೂಲಿನ ಹೆಣ್ಣು ಮಕ್ಕಳು ಸಮವಸ ಬದಲಾಗಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಇವರು ಚೂಡಿದಾರ್‌ನ್ನು ಸಮವಸವಾಗಿ ಪಡೆಯಲಿದ್ದಾರೆ. ಶುಕ್ರವಾರ ಸಿಎಂ ಸಿದ್ದರಾಮಯ್ಯ ನಡೆಸಿದ ಪ್ರಾಥಮಿಕ-ಪ್ರೌಢಶಾಲೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬದಲಾವಣೆಗೆ ಸಮ್ಮತಿಸಿದ್ದಾರೆ.
ಬೆಂಗಳೂರು(ಅ.15): ಇನ್ನು ಮುಂದೆ ಹೈಸ್ಕೂಲಿನ ಹೆಣ್ಣು ಮಕ್ಕಳು ಸಮವಸ ಬದಲಾಗಲಿದೆ. ಮುಂದಿನ ಶೈಕ್ಷಣಿಕ ವರ್ಷದಿಂದಲೇ ಇವರು ಚೂಡಿದಾರ್ನ್ನು ಸಮವಸವಾಗಿ ಪಡೆಯಲಿದ್ದಾರೆ. ಶುಕ್ರವಾರ ಸಿಎಂ ಸಿದ್ದರಾಮಯ್ಯ ನಡೆಸಿದ ಪ್ರಾಥಮಿಕ-ಪ್ರೌಢಶಾಲೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಬದಲಾವಣೆಗೆ ಸಮ್ಮತಿಸಿದ್ದಾರೆ. ಈ ಮೊದಲು ಹೈಸ್ಕೂಲು ಹೆಣ್ಮಕ್ಕಳಿಗೆ ಸ್ಕರ್ಟ್ ಮತ್ತು ಅಂಗಿ ನೀಡಲಾಗುತ್ತಿತ್ತು. ಸೈಕಲ್ ತುಳಿದುಕೊಂಡು ಶಾಲೆಗೆ ಬರುವ ಹೆಣ್ಮಕ್ಕಳಿಗೆ ಈ ಸಮವಸ ಸರಿಹೊಂದುತ್ತಿರಲಿಲ್ಲ. ಮಾತ್ರವಲ್ಲ ಸುರಕ್ಷತೆ ದೃಷ್ಟಿಯಿಂದಲೂ ಈ ಬದಲಾವಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ಸುದ್ದಿಗಾರರಿಗೆ ತಿಳಿಸಿದರು.
ಸಮವಸ ವಿತರಣೆ ಜತೆಗೆ ಸೈಕಲ್, ಶೂ, ಪಠ್ಯಪುಸ್ತಕಗಳ ವಿತರಣೆ ವಿಳಂಬವಾಗುತ್ತಿರುವ ಕುರಿತು ಸಿಎಂ ಸಿದ್ದರಾಮಯ್ಯ ಪ್ರಗತಿ ಪರಿಶೀಲನೆ ವೇಳೆ ತೀವ್ರ ಅಸಮಾಧಾನ ವ್ಯಕ್ತಮಾಡಿದರೆಂದು ತಿಳಿದುಬಂದಿದೆ. ಮುಂದಿನ ವರ್ಷದಿಂದ ಶಾಲೆಗಳು ಆರಂಭವಾಗುವ ದಿನವೇ ಈ ಎಲ್ಲವನ್ನೂ ಉಚಿತವಾಗಿ ಮಕ್ಕಳಿಗೆ ವಿತರಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಮಾತ್ರವಲ್ಲ ಸಮವಸ ಖರೀದಿ ಮಾಡಲಾಗುತ್ತಿದ್ದ ಕೈಮಗ್ಗ ಮತ್ತು ಪವರ್ಲೂಮ್ ಕಾರ್ಪರೇಶನ್ನ ವಿತರಣಾ ಸಾಮರ್ಥ್ಯ ಪರಿಶೀಲಿಸಿ ಸಮಯಕ್ಕೆ ಸರಿಯಾಗಿ ಒದಗಿಸಲು ಸಾಧ್ಯವೇ ಎಂಬುದನ್ನು ಖಾತರಿ ಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಈ ನಿಟ್ಟಿನಲ್ಲಿ ಸಿಎಂ ಕೈಮಗ್ಗ ಮತ್ತು ಪವರ್ಕಾರ್ಪರೇಶನ್ ಅಕಾರಿಗಳೊಂದಿಗೆ ಪ್ರತ್ಯೇಕ ಮಾತುಕತೆ ನಡೆಸಲಿದ್ದಾರೆ. ಸೈಕಲ್, ಶೂ, ಪಠ್ಯಪುಸ್ತಕ ಎಲ್ಲವನ್ನು ನವೆಂಬರ್ ತಿಂಗಳಿಗೆ ಮುನ್ನವೇ ಟೆಂಡರ್ ಕರೆದು ಅಂತಿಮಗೊಳಿಸಲಾಗುವುದು. ಶೂ, ಸಾಕ್ಸ್ ವಿತರಣೆಯನ್ನು ಶಾಲಾಭಿವೃದ್ಧಿ ಮಂಡಳಿಗೆ ನಿಡಿದ್ದರಿಂದ ಗೊಂದಲಗಳಾಗಿದ್ದು ಇನ್ನುಮುಂದೆ ರಾಜ್ಯಮಟ್ಟದಲ್ಲಿ ಟೆಂಡರ್ ಕರೆಯಲಾಗುವುದು. ಶೂ/ಸಾಕ್ಸ್, ಸೈಕಲ್ಗಳಿಗೆ ಒಂದು ವರ್ಷದ ಗ್ಯಾರಂಟಿ ನೀಡುವ ಸಂಸ್ಥ್ತೆಗಳಿಂದಲೇ ಸರಬರಾಜು ಮಾಡಿಸಲಾಗುವುದು ಎಂದು ತನ್ವೀರ್ಸೇಠ್ ವಿವರಿಸಿದರು.
1ನೇ ತರಗತಿಯಿಂದ ಇಂಗ್ಲಿಷ್ ಬೋಧನೆಗೆ ಆದೇಶ ಮಾಡಿದ್ದರೂ ಮಕ್ಕಳ ಸಾಮರ್ಥ್ಯ ವೃದ್ಧಿ ಜತೆಗೆ ನಗರಗಳ ಮಕ್ಕಳ ಗುಣಮಟ್ಟದೊಂದಿಗೆ ಸ್ಪರ್ಧೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಂದಿನ ವರ್ಷದಿಂದ ಮೊದಲನೆ ತರಗತಿಯಿಂದಲೇ ಗಣಿತ ಮತ್ತು ವಿಜ್ಞಾನ ಬೋಧನೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಬಿಸಿಊಟದ ಗುಣಮಟ್ಟ ಪರೀಕ್ಷೆಗೆ ಕ್ಲಸ್ಟರ್ ಮಟ್ಟದಲ್ಲಿ ಪ್ರಯೋಗಾಲಯಗಳನ್ನು ತೆರೆದು ಎಲ್ಲ ಶಾಲೆಗಳ ಬಿಸಿಯೂಟದ ಗುಣಮಟ್ಟವನ್ನು ಪ್ರತಿದಿನ ಪರಿಶೀಲಿಸಿ ಪೌಷ್ಠಿಕಾಂಶ, ನೀರಿನ ಅಂಶ ಮೊದಲಾದುವುಗಳ ವರದಿ ಸಿದ್ದಪಡಿಸಲಾಗುವುದು. ಮಂಡ್ಯ, ರಾಮನಗರ ಹಾಗೂ ಮೈಸೂರುಗಳಲ್ಲಿ ಮೊದಲಿಗೆ ಈ ಪ್ರಯೋಗಾಲಯ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಶಿಕ್ಷಣ ಕಿರಣ ಯೋಜನೆಯಡಿಯಲ್ಲಿ 93ಲಕ್ಷ ವಿದ್ಯಾರ್ಥಿಗಳ ದಾಖಲಾತಿ, ಹಾಜರಾತಿ ನ್ನಿತರ ವಿವರಗಳನ್ನು ಆಧಾರ್ ಸಂಖ್ಯೆಯೊಂದಿಗೆ ಸಂಯೋಜಿಸಿ ಗಣಕೀಕರಣಕ್ಕೆ ಉದ್ದೇಶಿಸಿದ್ದು 75 ಲಕ್ಷ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹ ಪೂರ್ಣಗೊಂಡಿದೆ ಈ ಸಾಲಿನಲ್ಲಿ ಈ ಯೋಜನೆ ಪೂರ್ಣಗೊಳ್ಳಲಿದೆ. ಎಲ್ಲ ಜಿಲ್ಲಾಕಾರಿಗಳಿಗೂ ಮಕ್ಕಳ ಆಧಾರ್ ನೋಂದಣಿ ತ್ವರಿತವಾಗಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ದಸರಾ ರಜಾ ಕಾಲದಲ್ಲಿ ಆರಂಭಿಸಲಾಗಿರುವ ಪರಿಶಿಷ್ಟ ಜಾತಿ ಮತ್ತು ವರ್ಗದ ಮಕ್ಕಳಿಗೆ ನೀಡಲಾಗುವ ತರಬೇತಿ(ಪಿಯು) ವಿಶ್ವಾಸ ಕಿರಣವನ್ನು ಎಲ್ಲ ವರ್ಗಗಳಿಗೂ ವಿಸ್ತರಿಸಲಾಗುವುದು. ಬೇಸಗೆ ರಜೆಯಲ್ಲಿ ಸಿಇಟಿ ತರಬೇತಿಗೂ ಉದ್ದೇಶಿಸಲಾಗಿದೆ. ಪ್ರೌಢಶಾಲಾ ವಿಭಾಗದಲ್ಲಿ 17 ಜಿಲ್ಲೆಗಳ 101 ತಾಲೂಕುಗಳಲ್ಲಿ ಆರಂಭಿಸಲಾಗಿರುವ ವಿಶೇಷ ತರಗತಿಗಳಿಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಪ್ರಶ್ನೆಪತ್ರಿಕೆಗಳ ಸೋರಿಕೆ ತಡೆಗೆ ವಿಶೇಷ ಕ್ರಮಕೈಗೊಂಡು ಪ್ರಶ್ನೆ ಪತ್ರಿಕೆ ಯಾವುದೇ ಕಾರಣಕ್ಕೂ ಸೋರಿಕೆಯಾಗದೇ ಇರುವುದನ್ನು ಖಾತರಿ ಪಡಿಸುವುದೂ ಸೇರಿದಂತೆ ಶಿಕ್ಷಣದ ಹಾಗೂ ಶಿಕ್ಷಕರ ಗುಣಮಟ್ಟ ಸುಧಾರಣೆ ಕುರಿತು ವಿವಿಧ ವಿಚಾರಗಳನ್ನು ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿಷದವಾಗಿ ಚರ್ಚಿಸಲಾಯಿತು ಎಂದು ಸಚಿವ ತನ್ವೀರ್ಸೇಠ್ ಹೇಳಿದರು.
