ಕೆಟ್ಟ ವಾತಾವರಣದ ಹಿನ್ನೆಲೆ ದೆಹಲಿಯಲ್ಲಿ ಮತ್ತೆ 3 ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೆಲಸಕ್ಕಾಗಿ ಕಚೇರಿಗೆ ತೆರಳುವವರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸಿಎಂ ಕೇಜ್ರಿವಾಲ್ ಸೂಚಿಸಿದ್ದಾರೆ.

ನವದೆಹಲಿ(ನ.06): ಬೆಳಕನ್ನ ಹಬ್ಬಿಸಬೇಕಾದ ದೀಪಾವಳಿ ರಾಜಧಾನಿ ದೆಹಲಿಯನ್ನ ಕತ್ತಲ ಕೂಪಕ್ಕೆ ತಳ್ಳಿದೆ. ದೀಪಾವಳಿ ಹಬ್ಬದಂದು ಸಿಡಿದ ಭಾರೀ ಪ್ರಮಾಣದ ಪಟಾಕಿಗಳಿಂದಾಗಿ ದೆಹಲಿಯಲ್ಲಿ ಭೀಕರ ವಾಯುಮಾಲಿನ್ಯ ಉಂಟಾಗಿದೆ. ಕಳೆದ 17 ವರ್ಷಗಳಲ್ಲೇ ದಾಖಲೆ ಎನ್ನಬಹುದಾದಷ್ಟು ಮಟ್ಟಕ್ಕೆ ವಾತಾವರಣ ಹದಗೆಟ್ಟಿದೆ. ಮನೆ ಬಿಟ್ಟು ಹೊರಬರಲು ಜನ ಹೆದರುತ್ತಿದ್ದಾರೆ. ವಾತಾವರಣಕ್ಕೆ ಬಂದರೆ ಕೆಮ್ಮು, ಕಣ್ಣಿನ ಉರಿ ಜನರನ್ನ ಬಾಧಿಸುತ್ತಿದೆ. \

ಕೆಟ್ಟ ವಾತಾವರಣದ ಹಿನ್ನೆಲೆ ದೆಹಲಿಯಲ್ಲಿ ಮತ್ತೆ 3 ದಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೆಲಸಕ್ಕಾಗಿ ಕಚೇರಿಗೆ ತೆರಳುವವರಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸಿಎಂ ಕೇಜ್ರಿವಾಲ್ ಸೂಚಿಸಿದ್ದಾರೆ.

ನಗರದ ಹಲವೆಡೆ ಸರ್ಕಾರದಿಂದಲೇ ನೀರನ್ನ ಚುಮುಕಿಸುವ ಕಾರ್ಯ ನಡೆಯುತ್ತಿದೆ. ಕೃತಕ ಮಳೆಯಿಂದ ಸಮಸ್ಯೆ ಬಗೆಹರಿಸಲು ಕೇಂದ್ರದ ನೆರವು ಕೇಳುವುದಾಗಿ ಸಿಎಂ ಕೇಜ್ರಿವಾಲ್ ತಿಳಿಸಿದ್ದಾರೆ.