ರೂ.500 ಹಾಗೂ ರೂ.1000 ನೋಟುಗಳನ್ನು ರದ್ದುಗೊಳಿಸಿರುವುದು ಇಡೀ ದೇಶಾದ್ಯಂತ ಸಂಚಲನ ಮೂಡಿಸಿದ್ದು ಶುಕ್ರವಾರದಿಂದ ರೂ.2000 ನೋಟುಗಳು ಲಭ್ಯವಾಗಲಿದೆ ಎಂದು ವಿತ್ತೀಯ ಕಾರ್ಯದರ್ಶಿ ಅಶೋಕ್ ಲಾವಾಸ ಹೇಳಿದ್ದಾರೆ.

ನವದೆಹಲಿ (ನ.09): ರೂ.500 ಹಾಗೂ ರೂ.1000 ನೋಟುಗಳನ್ನು ರದ್ದುಗೊಳಿಸಿರುವುದು ಇಡೀ ದೇಶಾದ್ಯಂತ ಸಂಚಲನ ಮೂಡಿಸಿದ್ದು ಶುಕ್ರವಾರದಿಂದ ರೂ.2000 ನೋಟುಗಳು ಲಭ್ಯವಾಗಲಿದೆ ಎಂದು ವಿತ್ತೀಯ ಕಾರ್ಯದರ್ಶಿ ಅಶೋಕ್ ಲಾವಾಸ ಹೇಳಿದ್ದಾರೆ.

ಆರ್ಥಿಕ ವಲಯದಲ್ಲಿ ಕ್ರಾಂತಿ ಎಂದೇ ಬಿಂಬಿಸಲಾಗುತ್ತಿರುವ ಮೋದಿ ಮಾಸ್ಟರ್ ಸ್ಟ್ರೋಕ್ ಯಿಂದ ಜನ ಸಾಮಾನ್ಯರು ಪರದಾಡುವಂತಾಗಿದೆ. ಹಾಗಾಗಿ ಎಟಿಎಂ ಮೂಲಕ ಹಣ ವಿತ್ ಡ್ರಾ ಮಾಡುವುದಕ್ಕೆ, ಬ್ಯಾಂಕುಗಳಲ್ಲಿ ನೋಟುಗಳ ವಿನಿಮಯಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ಅಶೋಕ್ ಲಾವಾಸ ಹೇಳಿದ್ದಾರೆ.