ಚುನಾವಣೆ ಹತ್ತಿರ ಬರುತ್ತಿದ್ದಂತೆ ಕ್ಯಾಂಟೀನ್ ಪಾಲಿಟಿಕ್ಸ್ ಜೋರಾಗಿ ನಡೆಯುತ್ತಿದೆ. ಇಂದಿರಾ ಕ್ಯಾಂಟೀನ್,ಅಪ್ಪ ಕ್ಯಾಂಟೀನ್ ಆಯ್ತು. ಈಗ ಮಂಡ್ಯದಲ್ಲಿ 10 ರೂಪಾಯಿ ಕ್ಯಾಂಟೀನ್ ಆರಂಭವಾಗಿದೆ.
ಮಂಡ್ಯ (ಡಿ.14): ಚುನಾವಣೆ ಹತ್ತಿರ ಬರುತ್ತಿದ್ದಂತೆ ಕ್ಯಾಂಟೀನ್ ಪಾಲಿಟಿಕ್ಸ್ ಜೋರಾಗಿ ನಡೆಯುತ್ತಿದೆ. ಇಂದಿರಾ ಕ್ಯಾಂಟೀನ್,ಅಪ್ಪ ಕ್ಯಾಂಟೀನ್ ಆಯ್ತು. ಈಗ ಮಂಡ್ಯದಲ್ಲಿ 10 ರೂಪಾಯಿ ಕ್ಯಾಂಟೀನ್ ಆರಂಭವಾಗಿದೆ.
ಈಗಾಗಲೇ ಮಂಡ್ಯದಲ್ಲಿ ರಮ್ಯಾ ಕ್ಯಾಂಟೀನ್ ಶುರುವಾದ ಬೆನ್ನಲ್ಲೇ ಮತ್ತೊಂದು ಕ್ಯಾಂಟೀನ್ ಆರಂಭವಾಗಿದೆ. ಕಾಂಗ್ರೆಸ್ ಮುಖಂಡ ಪಿ.ರವಿಕುಮಾರ್ ಹೆಸರಲ್ಲಿ 10 ರೂ. ಕ್ಯಾಂಟೀನ್ ಶುರುವಾಗಿದೆ. ಕ್ಯಾಂಟೀನ್ ಆರಂಭಿಸಿ ಟಿಕೆಟ್ ಗಿಟ್ಟಿಸಿಕೊಳ್ಳಲು ಕಾಂಗ್ರೆಸ್ ನಾಯಕರು ತಂತ್ರ ರೂಪಿಸುತ್ತಿದ್ದಾರೆ.
ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮದಲ್ಲಿ ಕ್ಯಾಂಟೀನ್ ಆರಂಭವಾಗಿದೆ. 10 ರೂ.ಗೆ ಕ್ಯಾಂಟೀನ್ ಆರಂಭಿಸಿ ಗ್ರಾಮೀಣ ಜನರ ಮತಗಳ ಮೇಲೆ ಕಾಂಗ್ರೆಸ್ ನಾಯಕರು ಕಣ್ಣಿಟ್ಟಿದ್ದಾರೆ.
