ಗುಜರಾತ್'ನ ಲ್ಯಾಬೋರೇಟರಿಯೊಂದರಲ್ಲಿ ಹೊಸ ರಕ್ತದ ಗುಂಪು ಪತ್ತೆಯಾಗಿದೆ ಎಂದು ವರದಿಯಾಗಿದೆ. ಈಗಿರುವ - A, B, O ಅಥವಾ AB- ಗುಂಪಿನೊಂದಿಗೆ ಸೇರದ ಈ ಹೊಸ ಗುಂಪನ್ನು 'INRA' ಎಂದು ಹೆಸರಿಸಲಾಗಿದೆ. 

IN- ಭಾರತವನ್ನು ಸೂಚಿಸಿದರೆ, RA ಆ ವ್ಯಕ್ತಿಯ ಹೆಸರನ್ನು ಸೂಚಿಸುತ್ತದೆ. ಸೂರತ್'ನ ಲೋಕ ಸಂಪರ್ಣ ರಕ್ತದಾನ ಲ್ಯಾಬ್'ನಲ್ಲಿ ಈ ಗುಂಪು ಪತ್ತೆಯಾಗಿದ್ದು, ವೈದ್ಯರ ತಂಡ ಕೂಡಾ ಪರೀಕ್ಷಿಸಿದೆ ಎನ್ನಲಾಗಿದೆ. 

ಈ ಗುಂಪಿನ ವ್ಯಕ್ತಿಯು ಇತರರಿಂದ ರಕ್ತ ಪಡೆಯುವ ಅಥವಾ ದಾನ ಮಾಡುವ ಹಾಗಿಲ್ಲ. ಜಗತ್ತಿನಲ್ಲಿ ಇಂತಹ ವಿಶಿಷ್ಟ ರಕ್ತ ಗುಂಪು ಹೊಂದಿದ ಕೇವಲ ಏಳು ಮಂದಿ ಇದ್ದಾರೆ ಎನ್ನಲಾಗಿದೆ.

ದೈನಿಕ ಭಾಸ್ಕರ ವರದಿಯ ಪ್ರಕಾರ ಈ ಹೊಸ ರಕ್ತದ ಗುಂಪಿಗೆ ವಿಶ್ವ ಆರೋಗ್ಯ ಸಂಘಟನೆ (WHO) ಕೂಡಾ ಮಾನ್ಯತೆ ನೀಡಿದೆ.

(ಸಾಂದರ್ಭಿಕ ಚಿತ್ರ)