ಇಂಥದ್ದೊಂದು ಆರೋಪ ಮಾಡಿರುವವರು ಮಾಜಿ ಶಾಸಕ ರಾಮಸ್ವಾಮಿಗೌಡ
ಇಂಧನ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಗಂಭೀರ ಆರೊಪವೊಂದು ಕೇಳಿ ಬಂದಿದೆ. ಕುಣಿಗಲ್ ವಿಧಾನ ಸಭಾ ಕ್ಷೇತ್ರದ ಮೇಲೆ ಡಿಕೆ ಶಿವಕುಮಾರ್ ಸಹೋದರರು ಸಿಕ್ಕಾಪಟ್ಟೆ ಆಸಕ್ತಿ ತೋರುತ್ತಿದ್ದಾರೆ.
ಇದಕ್ಕೆ ಕಾರಣ ಕುಣಿಗಲ್ ತಾಲೂಕಿನಲ್ಲಿ ಅಪಾರ ಪ್ರಮಾಣದ ವಿಶ್ವ ದರ್ಜೆಯ ಗ್ರಾನೈಟ್ ಕಲ್ಲು ಸಂಪತ್ತು . ಇದನ್ನು ಕೊಳ್ಳೆ ಹೊಡೆಯಲು ಡಿಕೆ ಶಿವಕುಮಾರ್ ತಮ್ಮ ಆಪ್ತ ಡಾ. ರಂಗನಾಥ್ ಅವರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿ ಕ್ಷೇತ್ರವನ್ನು ತಮ್ಮ ಕೈ ವಶ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರಂತೆ. ಇಂಥದ್ದೊಂದು ಆರೋಪ ಮಾಡಿರುವವರು ಮಾಜಿ ಶಾಸಕ ರಾಮಸ್ವಾಮಿಗೌಡ. ಇನ್ನೂ ಕಾಂಗ್ರೆಸ್ ಸಮಾವೇಶಕ್ಕೆ ಕಾಂಗ್ರೆಸ್ ನಕಲಿ ಕಾರ್ಯಕರ್ತರನ್ನ ಕರೆತಂದು ಸಮಾವೇಶ ಯಶಸ್ವಿಯಾಗೊಳಸಿದೆ ಅನ್ನೋ ಆರೋಪ ಕೂಡ ಕೇಳಿ ಬಂದಿತ್ತು. ಇದು ರಾಮಸ್ವಾಮಿಯವರ ಆರೋಪಕ್ಕೆ ಪುಷ್ಟಿ ನೀಡುತ್ತಿದೆ.
