ನೆರೆಯ ನೇಪಾಳಕ್ಕೂ ಚೀನಾದ ರೈಲು: ಭಾರತಕ್ಕೆ ಹೊಸ ಆತಂಕ| ಟಿಬೆಟ್‌ ಬಳಿಕ ಭಾರತದ ಮತ್ತೊಂದು ಮಗ್ಗುಲಿಗೆ ಚೀನಾ ಪ್ರವೇಶ

ಕಾಠ್ಮಂಡು[ಅ.14]: ಪ್ರಧಾನಿ ಮೋದಿ ಜೊತೆ ತಮಿಳುನಾಡಿನ ಮಹಾಬಲಿಪುರಂನಲ್ಲಲಿ 2 ದಿನಗಳ ಅನೌಪಚಾರಿಕ ಸಭೆ ನಡೆಸಿ ಸಂಬಂಧ ಸುಧಾರಣೆಯ ಮಾತನಾಡಿ ಹೋಗಿದ್ದ ಚೀನಾ ಪ್ರಧಾನಿ ಕ್ಸಿ ಜಿನ್‌ಪಿಂಗ್‌ ತಮ್ಮ ನೇಪಾಳ ಪ್ರವಾಸದ ವೇಳೆ ಭಾರತಕ್ಕೆ ಮಾರಕವಾಗುವ ಹೊಸ ಯೋಜನೆಯೊಂದನ್ನು ಘೋಷಿಸಿದ್ದಾರೆ.

ಭಾರತ ಭೇಟಿ ಬಳಿಕ ನೇರವಾಗಿ ನೇಪಾಳಕ್ಕೆ ಆಗಮಿಸಿರುವ ಕ್ಸಿ ಜಿನ್‌ಪಿಂಗ್‌, ನೇಪಾಳಕ್ಕೆ ಚೀನಾದಿಂದ ಹೊಸ ರೈಲ್ವೆ ಮಾರ್ಗ ನಿರ್ಮಾಣದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಇದು ಭಾರತದ ಪಾಲಿಗೆ ಮುಂದಿನ ದಿನಗಳಲ್ಲಿ ಸಮಸ್ಯೆಯಾಗುವ ಎಲ್ಲಾ ಸಾಧ್ಯತೆಗಳಿವೆ.

ಡ್ರ್ಯಾಗನ್, ಆನೆ ಜೋಡಿ ಕುಣಿತ ಚೆಂದ: ವರ್ಣಿಸಲಸಾಧ್ಯ ಕ್ಸಿ ಹೇಳಿಕೆಯ ಅಂದ!

ಸದ್ಯ ನೇಪಾಳ ತನ್ನೆಲ್ಲಾ ಅಗತ್ಯಗಳಿಗೆ ಭಾರತವನ್ನೇ ಅವಲಂಬಿಸಿದೆ. ಕಾರಣ, ನೇಪಾಳಕ್ಕೆ ಬೇರೆ ಯಾವುದೇ ದೇಶದೊಂದಿಗೆ ರಸ್ತೆ ಹೊಂದಿರುವ ಗಡಿ ಹೊಂದಿಲ್ಲ. ಹೀಗಾಗಿ ಆ ದೇಶಕ್ಕೆ ತನ್ನ ದೇಶದಿಂದ ರೈಲು ಮಾರ್ಗ ನಿರ್ಮಾಣ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸಿರುವುದಾಗಿ ಚೀನಾ ಭರವಸೆ ನೀಡಿದೆ. ಈ ಕ್ರಮದಿಂದ ಅರುಣಾಚಲ ಪ್ರದೇಶ, ದಕ್ಷಿಣ ಟಿಬೆಟ್‌ ಹಾಗೂ ಅಕ್ಸೈ ಚಿನ್‌ ಪ್ರಾಂತ್ಯಗಳಿಗಾಗಿ ಭಾರತದ ಜೊತೆ ಕ್ಯಾತೆ ತೆಗೆಯುವ ಚೀನಾ ಮೇಲುಗೈ ಸಾಧಿಸಿದ್ದು, ಭದ್ರತೆ ದೃಷ್ಟಿಯಿಂದ ಭಾರತಕ್ಕೆ ಆತಂಕ ಎದುರಾಗಿದೆ. ಈಗಾಗಲೇ ಟಿಬೆಟ್‌ಗೆ ಸರ್ವಋುತು ರಸ್ತೆ, ರೈಲು ಮಾರ್ಗ ನಿರ್ಮಿಸಿಕೊಂಡಿರುವ ಚೀನಾ, ಆ ಪ್ರದೇಶದಲ್ಲೂ ಭಾರತಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ.

ಕಾಶ್ಮೀರ ವಿಷಯ ಮಾತಾಡಿಲ್ಲ: ಮೋದಿ ಮುಂದೆ ಕ್ಸಿ ಕೆಮ್ಮಂಗಿಲ್ಲ!