ಹೀಗಾಗಿ ಪರ್ವತ ಏರಲು ತುಂಬಾ ಸಮಯ ಹಿಡಿಯಲಿದೆ. ಪರ್ವತಾರೋಹಿಗಳ ಸಂಖ್ಯೆ ಕಡಿಮೆ ಇರುವಾಗಲೇ ತುತ್ತತುದಿಗೆ ಹೋಗಿ ಬರುವವರ ಬಳಿ ಆಮ್ಲಜನಕ ಸಂಗ್ರಹ ಪ್ರಮಾಣ ತೀರಾ ಕಡಿಮೆ ಇರುತ್ತದೆ.
ಕಾಠ್ಮಂಡು(ಏ.17): ಜಗತ್ತಿನ ಅತ್ಯಂತ ಎತ್ತರದ ಪರ್ವತ ಮೌಂಟ್ ಎವರೆಸ್ಟ್ ಏರಲು ಈ ಸಲ ಭಾರಿ ಸಂಖ್ಯೆಯಲ್ಲಿ ಪರ್ವತಾ ರೋಹಿಗಳು ಆಗಮಿಸು ತ್ತಿರುವುದರಿಂದ ‘ಟ್ರಾಫಿಕ್ ಜಾಂ' ಹಾಗೂ ಪ್ರಾಣಾಪಾಯದ ಭೀತಿ ಎದುರಾಗಿದೆ. 8848 ಮೀಟರ್ ಎತ್ತರ ವಿರುವ ಮೌಂಟ್ ಎವರೆಸ್ಟ್ ಆರೋಹಣ ಮೇ ಮಧ್ಯ ಭಾಗದಿಂದ ಆರಂಭವಾಗಲಿದೆ.
ಈ ವರ್ಷ 400 ಮಂದಿ ಪರ್ವತ ಏರಲು ಸಜ್ಜಾಗಿದ್ದಾರೆ. ಅವರ ಜತೆ ಸಹಾಯಕ ಸಿಬ್ಬಂದಿಯೂ ಸಾಕಷ್ಟುಸಂಖ್ಯೆಯಲ್ಲಿ ತೆರಳುವುದರಿಂದ ಪರ್ವತ ಏರುವವರ ಸಂಖ್ಯೆ 1000ಕ್ಕೇರಲಿದೆ. ಹೀಗಾಗಿ ಪರ್ವತ ಏರಲು ತುಂಬಾ ಸಮಯ ಹಿಡಿಯಲಿದೆ. ಪರ್ವತಾರೋಹಿಗಳ ಸಂಖ್ಯೆ ಕಡಿಮೆ ಇರುವಾಗಲೇ ತುತ್ತತುದಿಗೆ ಹೋಗಿ ಬರುವವರ ಬಳಿ ಆಮ್ಲಜನಕ ಸಂಗ್ರಹ ಪ್ರಮಾಣ ತೀರಾ ಕಡಿಮೆ ಇರುತ್ತದೆ.
ಜನ ದಟ್ಟಣೆ ಹೆಚ್ಚಾಗಿ ಪರ್ವತ ಏರುವುದು ವಿಳಂಬವಾದರೆ, ಆಮ್ಲಜನಕಕ್ಕೆ ಕೊರತೆಯಾಗಿ ಪರ್ವತಾರೋಹಿಗಳ ಜೀವಕ್ಕೇ ತೊಂದರೆಯಾಗುವ ಸಂಭವವಿರುತ್ತದೆ ಎಂದು 5 ಬಾರಿ ಪರ್ವತ ಏರಿರುವ ಸೋನಂ ತಿಳಿಸಿದ್ದಾರೆ.
