ನವದೆಹಲಿ (ಸೆ. 30): ಮಾಜಿ ಪ್ರಧಾನಿ ಜವಾಹರಲಾಲ್‌ ನೆಹರು ಅವರು ಜಮ್ಮು- ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆಗೆ ಒಯ್ದಿದ್ದು, ಹಿಮಾಲಯನ್‌ ಬ್ಲಂಡರ್‌ (ಅತಿ ದೊಡ್ಡ ಪ್ರಮಾದ)ಕ್ಕಿಂತಲೂ ದೊಡ್ಡ ತಪ್ಪು. ಭಾರತ ಕಾಶ್ಮೀರದ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370ನೇ ವಿಧಿ ರದ್ದು ಮಾಡಿದ್ದನ್ನು ಇಡೀ ವಿಶ್ವವೇ ಬೆಂಬಲಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದ್ದಾರೆ.

ಬೆಲೆ ಏರಿಕೆಗೆ ಬ್ರೇಕ್; ಈರುಳ್ಳಿ ರಫ್ತಿಗೆ ಕೇಂದ್ರದ ನಿಷೇಧ

ಕಾಶ್ಮೀರ ಕಣಿವೆಯಲ್ಲಿ ಈಗ ಯಾವುದೇ ನಿರ್ಬಂಧ ಇಲ್ಲ. ಮೋದಿ ಅವರು ಕೈಗೊಂಡ ದಿಟ್ಟನಿರ್ಧಾರದಿಂದಾಗಿ ಜಮ್ಮು- ಕಾಶ್ಮೀರ ಮುಂದಿನ 10 ವರ್ಷಗಳಲ್ಲಿ ಅತಿ ಹೆಚ್ಚು ಅಭಿವೃದ್ಧಿ ಹೊಂದಲಿದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಇಲ್ಲಿನ ನೆಹರು ಸ್ಮಾರಕ ವಸ್ತು ಸಂಗ್ರಹಾಲಯ ಹಾಗೂ ಗ್ರಂಥಾಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾ, 1948ರಲ್ಲಿ ನೆಹರು ಕಾಶ್ಮೀರ ವಿಷಯವನ್ನು ವಿಶ್ವಸಂಸ್ಥೆಗೆ ಒಯ್ದಿದ್ದು ದೋಷ ಪೂರಿತವಾಗಿದೆ. ಅದು ಹಿಮಾಲಯನ್‌ ಬ್ಲಂಡರ್‌ಗಿಂತಲೂ ಅತಿದೊಡ್ಡ ತಪ್ಪು ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ತಂಬಾಕು, ಗುಟ್ಕಾ ಉತ್ಪನ್ನ ನಿಷೇಧ?

ಇದೇ ವೇಳೆ ವಿಪಕ್ಷಗಳು ಕಾಶ್ಮೀರದಲ್ಲಿ ನಿರ್ಬಂಧ ಹೇರಲಾಗಿದೆ ಎಂದು ಅಪಪ್ರಚಾರ ಮಾಡುತ್ತಿವೆ. ಕಾಶ್ಮೀರದಲ್ಲಿ ನಿರ್ಬಂಧ ಎಲ್ಲಿದೆ? ಅದು ಕೇವಲ ನಿಮ್ಮ ಮನಸ್ಸಿನಲ್ಲಿದೆ? ಕಾಶ್ಮೀರದಲ್ಲಿ ಯಾವುದೇ ನಿರ್ಬಂಧ ಇಲ್ಲ. ಎಲ್ಲಾ 196 ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲೂ ಕಫä್ರ್ಯ ಹಿಂಪಡೆಯಲಾಗಿದೆ. ಕಾಶ್ಮೀರದಲ್ಲಿ ಜನರು ಎಲ್ಲಿ ಬೇಕಾದರೂ ಮುಕ್ತವಾಗಿ ಓಡಾಡಬಹುದಾಗಿದೆ ಎಂದು ಹೇಳಿದ್ದಾರೆ.