ಮೇ 6ರಂದು ನೀಟ್‌ ಪರೀಕ್ಷೆ: ಆಧಾರ್‌ ಸಲ್ಲಿಕೆ ಕಡ್ಡಾಯ

First Published 10, Feb 2018, 10:12 AM IST
NEET exam on May 6
Highlights

ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅಗತ್ಯವಾದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಮೇ 6ರಂದು ನಡೆಯಲಿದೆ ಎಂದು ಸಿಬಿಎಸ್‌ಇ ಪ್ರಕಟಣೆ ತಿಳಿಸಿದೆ.

ನವದೆಹಲಿ: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅಗತ್ಯವಾದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಮೇ 6ರಂದು ನಡೆಯಲಿದೆ ಎಂದು ಸಿಬಿಎಸ್‌ಇ ಪ್ರಕಟಣೆ ತಿಳಿಸಿದೆ.

ಜೊತೆಗೆ ಈ ಬಾರಿ ವಿದ್ಯಾರ್ಥಿಗಳಿಗೆ ಆಧಾರ್‌ ಸಂಖ್ಯೆ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಆನ್‌ಲೈನ್‌ ಅರ್ಜಿ ಸಲ್ಲಿಕೆ ಗುರುವಾರದಿಂದ ಆರಂಭವಾಗಿದೆ. ಮಾ. 9ರ ರಾತ್ರಿ 11:50ರ ವರೆಗೂ ಆನ್‌ಲೈನ್‌ ನೋಂದಣಿ ಮಾಡಿಕೊಳ್ಳಬಹುದು. ಮಾ.10ರ ರಾತ್ರಿ 11:50ರ ವರೆಗೆ ಶುಲ್ಕ ಆನ್‌ಲೈನ್‌ನಲ್ಲಿ ಪಾವತಿಸಬಹುದು. ಅಸ್ಸಾಂ, ಜಮ್ಮು-ಕಾಶ್ಮೀರ ಮತ್ತು ಮೇಘಾಲಯ ಹೊರತುಪಡಿಸಿ, ಇತರ ಎಲ್ಲ ರಾಜ್ಯಗಳ ಅಭ್ಯರ್ಥಿಗಳಿಗೆ ಆಧಾರ್‌ ನಂಬರ್‌ ಕಡ್ಡಾಯವಾಗಿದೆ.

ಆಧಾರ್‌ ನಂಬರ್‌ನಲ್ಲಿರುವ ಜನ್ಮ ದಿನಾಂಕ ಮತ್ತಿತರ ವಿವರಗಳು ತಪ್ಪಾಗಿದ್ದಲ್ಲಿ, ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ.

loader