ನೆಲ್ಲೂರು [ಆ.16]: ಭಕ್ತರ ಆರಾಧ್ಯ ದೈವ ವೆಂಕಟೇಶ್ವರನಷ್ಟೇ ಖ್ಯಾತವಾಗಿರುವ ತಿರುಪತಿ ಲಡ್ಡುವಿನಲ್ಲಿ ಸೂಜಿ ಕಂಡು ಬಂದ ಘಟನೆ ಬೆಳಕಿಗೆ ಬಂದಿದೆ. ಶಶಾಂಕ್‌ ರೆಡ್ಡಿ ಎಂಬ ಭಕ್ತರೊಬ್ಬರು ಮಂಗಳವಾರ ತಿರುಪತಿಗೆ ಭೇಟಿ ನೀಡಿ ದೇವರ ದರ್ಶನ ಬಳಿಕ ಖರೀದಿಸಿದ ಲಡ್ಡುವಿನಲ್ಲಿ ಸೂಜಿ ಪತ್ತೆಯಾಗಿದೆ. 

ಮನೆಗೆ ತೆಗೆದುಕೊಂಡು ಬಂದು ತಿನ್ನುವಾಗ ಪ್ರಸಾದದಲ್ಲಿ ಸೂಜಿ ಬಂದಿದೆ ಎಂದು ಶಶಾಂಕ್‌ ಆರೋಪಿಸಿದ್ದಾರೆ. 

ಇಬ್ಬರು ಎನ್ನಾರೈಗಳಿಂದ ತಿಮ್ಮಪ್ಪನಿಗೆ 14 ಕೋಟಿ ರೂಪಾಯಿ ದೇಣಿಗೆ!

ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಲಾಡು ತಯಾರಿಕೆ ವೇಳೆ ಸಿಬ್ಬಂದಿಯ ನಿರ್ಲಕ್ಷ್ಯ, ಅಚಾತುರ್ಯದ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ.