ಕಾನ್ಪುರದಲ್ಲಿ 100 ಕೋಟಿ ಮೌಲ್ಯದ ಹಳೆಯ ನೋಟುಗಳ ವಶ

First Published 17, Jan 2018, 12:18 PM IST
Nearly Rs 100 Crore In Banned Notes In Kanpur Home
Highlights

ಉತ್ತರ ಪ್ರದೇಶದ ಕಾನ್ಪುರದ ಮನೆಯೊಂದರ ಮೇಲೆ ದಾಳಿ ಮಾಡಿದ ಪೊಲೀಸರು ಕೊಟ್ಯಂತರ ಮೌಲ್ಯದ ಹಳೆಯ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

ಕಾನ್ಪುರ (ಜ.17): ಉತ್ತರ ಪ್ರದೇಶದ ಕಾನ್ಪುರದ ಮನೆಯೊಂದರ ಮೇಲೆ ದಾಳಿ ಮಾಡಿದ ಪೊಲೀಸರು ಕೊಟ್ಯಂತರ ಮೌಲ್ಯದ ಹಳೆಯ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ.

ಸುಮಾರು 97 ಕೋಟಿ ರು. ವಶಪಡಿಸಿಕೊಂಡ ನೋಟುಗಳನ್ನು ಇದುವರೆಗೂ ಎಣಿಕೆ ಮಾಡಲಾಗಿದೆ. ಅಶೋಕ್ ಕತ್ರಿ ಎನ್ನುವ ವ್ಯಕ್ತಿಯ ಮನೆಯಲ್ಲಿ  ಅಮಾನ್ಯಗೊಂಡ 500 ಹಾಗೂ 1000 ರು.ಮೌಲ್ಯದ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ಪ್ರದೇಶದಲ್ಲಿ ಕೋಟ್ಯಂತರ ಮೌಲ್ಯದ ಹಳೆಯ ನೋಟುಗಳು ಇರುವ ಬಗ್ಗೆ ಮಾಹಿತಿ ಲಭ್ಯವಾಗುತ್ತಿದ್ದಂತೆ  ದಾಳಿ ಮಾಡಿ ಹಳೆಯ ನೋಟುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

2016ರ ನವೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ 500 ಹಾಗೂ 1000 ರು. ಮೌಲ್ಯದ ಹಳೆಯ ನೋಟುಗಳನ್ನು ಅಮಾನ್ಯಗೊಳಿಸಿ ಆದೇಶ ಹೊರಡಿಸಿತ್ತು.

loader