ನವದೆಹಲಿ[ಸೆ.30]: ಮಹಾತ್ಮಾ ಗಾಂಧೀಜಿ 150 ನೇ ಜನ್ಮದಿನಾಚರಣೆ ಅಂಗವಾಗಿ 600 ಸೆರೆವಾಸಿಗಳನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಗೃಹ ಸಚಿವಾಲಯ, ಗಾಂಧೀಜಿ ಜನ್ಮದಿನ ಹಿನ್ನೆಲೆ ನಾನಾ ಕಾರಣಗಳಿಗಾಗಿ ಸೆರೆವಾಸ ಅನುಭವಿಸುತ್ತಿರುವ ಕೈದಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಲಾಗುವುದು. ಈ ಕುರಿತಂತೆ ರಾಜ್ಯಸರ್ಕಾರಗಳು, ಕೇಂದ್ರಾ ಡಳಿತ ಪ್ರದೇಶಗಳೊಂದಿಗೆ ಮಾತುಕತೆ ನಡೆಸಿ ಪಟ್ಟಿ ನೀಡಲು ಸೂಚಿಸಲಾಗಿದೆ.

ಬಿಡುಗಡೆಗೊಳ್ಳುವ ಕೈದಿಗಳ ಅಂತಿಮ ಪಟ್ಟಿಯನ್ನು ಸಚಿವಾಲಯ ಸಿದ್ಧ ಪಡಿಸುತ್ತಿದೆ ಎಂದು ತಿಳಿಸಿದೆ.