ಕೇಂದ್ರ ಸರ್ಕಾರದ ಗೋಹತ್ಯಾ ನಿಷೇಧ ನಿಯಮ. ಕೇರಳದಲ್ಲಿ ಸಾರ್ವಜನಿಕರೆದುರೇ ಯುವ ಕಾಂಗ್ರೆಸ್ ಕಾರ್ಯಕರ್ತರು ಗೋ ಹತ್ಯೆ ಮಾಡಿರುವ ಘಟನೆ ಎಲ್ಲಾ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇದೇ ವಿಚಾರವಾಗಿ ಎನ್’ಡಿಟಿವಿ ಚರ್ಚಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಸ್ಯಾಂಬಿತ್ ಪಾತ್ರಾರವರು ಪಾಲ್ಗೊಂಡಿದ್ದರು. ತಮ್ಮ ವಾದ ಮಂಡಿಸುತ್ತಿರುವ ವೇಳೆ ಅವರು ನೇರವಾಗಿ ಎನ್ ಟಿಟಿವಿ ವಿರುದ್ಧ ಆರೋಪ ಹೊರಿಸುತ್ತಿದ್ದಂತೆ ಸಿಟ್ಟಿಗೆದ್ದ ಕಾರ್ಯಕ್ರಮದ ನಿರೂಪಕಿ, ಕಾರ್ಯ ನಿರ್ವಾಹಕ ಸಂಪಾದಕಿ ನಿಧಿ ರಾಜ್ದಾನ್ ಪಾತ್ರಾರವರನ್ನು ಕಾರ್ಯಕ್ರಮದಿಂದಲೇ ಹೊರ ಹಾಕಿದ್ದಾರೆ.
ನವದೆಹಲಿ (ಜೂ.02): ಕೇಂದ್ರ ಸರ್ಕಾರದ ಗೋಹತ್ಯಾ ನಿಷೇಧ ನಿಯಮ. ಕೇರಳದಲ್ಲಿ ಸಾರ್ವಜನಿಕರೆದುರೇ ಯುವ ಕಾಂಗ್ರೆಸ್ ಕಾರ್ಯಕರ್ತರು ಗೋ ಹತ್ಯೆ ಮಾಡಿರುವ ಘಟನೆ ಎಲ್ಲಾ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇದೇ ವಿಚಾರವಾಗಿ ಎನ್’ಡಿಟಿವಿ ಚರ್ಚಾ ಕಾರ್ಯಕ್ರಮವನ್ನು ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ವಕ್ತಾರ ಸ್ಯಾಂಬಿತ್ ಪಾತ್ರಾರವರು ಪಾಲ್ಗೊಂಡಿದ್ದರು. ತಮ್ಮ ವಾದ ಮಂಡಿಸುತ್ತಿರುವ ವೇಳೆ ಅವರು ನೇರವಾಗಿ ಎನ್ ಟಿಟಿವಿ ವಿರುದ್ಧ ಆರೋಪ ಹೊರಿಸುತ್ತಿದ್ದಂತೆ ಸಿಟ್ಟಿಗೆದ್ದ ಕಾರ್ಯಕ್ರಮದ ನಿರೂಪಕಿ, ಕಾರ್ಯ ನಿರ್ವಾಹಕ ಸಂಪಾದಕಿ ನಿಧಿ ರಾಜ್ದಾನ್ ಪಾತ್ರಾರವರನ್ನು ಕಾರ್ಯಕ್ರಮದಿಂದಲೇ ಹೊರ ಹಾಕಿದ್ದಾರೆ.
ಸ್ಯಾಂಬಿತ್ ಪಾತ್ರಾ ತಮ್ಮ ವಾದವನ್ನು ಮಂಡಿಸುತ್ತಿರುವಾಗ, ಎನ್ ಡಿಟಿವಿಗೆ ಯಾವುದೋ ಅಜೆಂಡಾ ಇದೆ. ಕಾಂಗ್ರೆಸ್ ನತ್ತ ವಾಲುತ್ತಿದೆ ಎಂದು ನೇರವಾಗಿ ವಾಹಿನಿಯ ಮೇಲೆ ಆರೋಪಿಸಿದರು. ತಮ್ಮ ಮಾತುಗಳನ್ನು ವಾಪಸ್ ಪಡೆಯುವಂತೆ ನಿರೂಪಕಿ ಹೇಳಿದಾಗ ಅದಕ್ಕೆ ಪಾತ್ರಾ ನಿರಾಕರಿಸಿದರು. ಆಗ ನೀವು ಶೋ ಬಿಟ್ಟು ಹೊರ ಹೋಗಬಹುದು ಎಂದರು.
ಮತ್ತೆ ನನ್ನನ್ಯಾಕೆ ಕರೆಸಿದ್ರಿ? ನಾನು ಹೋಗುವುದಿಲ್ಲ. ಹೀಗೆ ಹೇಳಲು ನಿಮಗೆಷ್ಟು ಧೈರ್ಯ? ಎನ್ ಡಿಟಿವಿ ಅಜೆಂಡಾವನ್ನು ಬಯಲಿಗೆಳೆಯುತ್ತೇನೆ ಪಾತ್ರಾ ನಿರೂಪಕಿಗೆ ಹೇಳಿದಾಗ ಯಾವ ಧೈರ್ಯದ ಮೇಲೆ ನಮ್ಮ ಚಾನಲ್’ಗೆ ಅಜೆಂಡಾ ಇದೆಯೆಂದು ಹೇಳುತ್ತೀರಿ ಎಂದು ನಿಧಿ ರಾಜ್ದಾನ್ ಖಾರವಾಗಿ ಪ್ರಶ್ನಿಸಿದ್ದಾರೆ.
ಇವರಿಬ್ಬರ ಮಾತಿನ ಚಕಮಕಿ ವಿಡಿಯೋ ಇಲ್ಲಿದೆ ನೋಡಿ

