ಇಲ್ಲಿನ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಎನ್’ಡಿಟಿವಿ ಪತ್ರಕರ್ತರೊಬ್ಬರಿಗೆ ಜೈ ಶ್ರೀರಾಮ್ ಎಂದು ಹೇಳುವಂತೆ ಗುಂಪೊಂದು ಒತ್ತಾಯಿಸಿದ್ದು ಇಲ್ಲದಿದ್ದರೆ ಕಾರಿಗೆ ಬೆಂಕಿ ಹಚ್ಚುವುದಾಗಿ ಹೆದರಿಸಿದ್ದಾರೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂತಹ ಘಟನೆಗಳನ್ನು ಸಹಿಸಲಾಗುವುದಿಲ್ಲ ಎಂದಿದ್ದಾರೆ.

ಪಟ್ನಾ (ಜು.03): ಇಲ್ಲಿನ ರಾಷ್ಟ್ರೀಯ ಹೆದ್ದಾರಿಯೊಂದರಲ್ಲಿ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಎನ್’ಡಿಟಿವಿ ಪತ್ರಕರ್ತರೊಬ್ಬರಿಗೆ ಜೈ ಶ್ರೀರಾಮ್ ಎಂದು ಹೇಳುವಂತೆ ಗುಂಪೊಂದು ಒತ್ತಾಯಿಸಿದ್ದು ಇಲ್ಲದಿದ್ದರೆ ಕಾರಿಗೆ ಬೆಂಕಿ ಹಚ್ಚುವುದಾಗಿ ಹೆದರಿಸಿದ್ದಾರೆ. ಈ ಘಟನೆಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂತಹ ಘಟನೆಗಳನ್ನು ಸಹಿಸಲಾಗುವುದಿಲ್ಲ ಎಂದಿದ್ದಾರೆ.

ಎನ್’ಡಿಟಿವಿ ಪತ್ರಕರ್ತ ಮುನ್ನೆ ಭಾರ್ತಿ ಈದ್ ಆಗಿ ಎರಡು ದಿನದ ಬಳಿಕ ತಮ್ಮ ಊರಾದ ಸಮಸ್ತಿಪುರಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಬರುವಂತಹ ಸಂದರ್ಭದಲ್ಲಿ ದೊಡ್ಡ ಟ್ರಕ್’ವೊಂದು ರಸ್ತೆಯಲ್ಲಿ ಸಿಕ್ಕಿಹಾಕಿಕೊಂಡು ವಾಹನ ಸಂಚಾರ ಬ್ಲಾಕ್ ಆಗಿದೆ. ಹಾಗಾಗಿ ಇವರಿಗೆ ವಾಪಾಸ್ ಹಿಂದಿರುಗುವಂತೆ ಕೆಲವರ ಗುಂಪೊಂದು ಗಲಾಟೆ ಮಾಡಿದೆ. ಕಾರಿನಲ್ಲಿ ಮುನ್ನೆ ಭಾರತಿಯವರ ತಂದೆ, ತಾಯಿ, ಹೆಂಡತಿಯಿದ್ದರು. ಕಾರನ್ನು ಟರ್ನ್ ಮಾಡುವಾಗ ಟ್ರಕ್ ನಿಂದ ಳಿದ ನಾಲ್ಕಾರು ಜನರು ಇವರ ಕಾರಿನತ್ತ ಬಂದಿದ್ದಾರೆ. ಭಾರ್ತಿಯವರ ತಂದೆ ಗಡ್ಡ ಬಿಟ್ಟಿರುವುದನ್ನು ನೋಡಿ, ಹೆಂಡತಿ ತಲೆಗೆ ವೇಲ್ ಸುತ್ತಿಕೊಂಡಿರುವುದನ್ನು ಗಮನಿಸಿ ಇವರು ಮುಸ್ಲಿಓರಿರಬೇಕು ಎಂದು ಭಾವಿಸಿದ್ದಾರೆ. ಇವರತ್ತ ಬಂದು ಜೈ ಶ್ರೀರಾಮ್ ಎಂದಿದ್ದಾರೆ. ಇವರಿಗೂ ಜೈ ಶ್ರೀರಾಮ್ ಎನ್ನುವಂತೆ ಒತ್ತಾಯಿಸಿದ್ದ಻ರ. ಇಲ್ಲದಿದ್ದರೆ ಕಾರಿಗೆ ಬೆಂಕಿ ಹಚ್ಚುವುದಾಗಿ ಹೆದರಿಸಿದ್ದಾರೆ.

ನಾನು ಎಲ್ಲಾ ಧರ್ಮವನ್ನು ಯಾವಾಗಲೂ ಗೌರವಿಸುತ್ತೇನೆ. ರಾಮನ ಹೆಸರನ್ನು ಹೇಳುವುದರಿಂದ ನನಗೇನೂ ಸಮಸ್ಯೆಯಿಲ್ಲ. ಜೈ ಶ್ರೀರಾಮ್ ಎಂದು ಹೇಳಿ ಕುಟುಂಬದವರ ಜೀವ ಉಳಿಸಿಕೊಂಡು ವಾಪಸ್ ಹೊರಟ್ವಿ ಎಂದು ಭಾರ್ತಿ ಹೇಳಿದ್ದಾರೆ.