ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿದು ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿತ್ತು. ರಕ್ಷಣಾ ಕಾರ್ಯಾಚರಣೆ ನಡೆಸುವ ಸಲುವಾಗಿ ರಾಜ್ಯದಲ್ಲಿ ಎನ್ ಡಿಆರ್ ಎಫ್ ಪಡೆ ಬೀಡು ಬಿಟ್ಟಿದ್ದು ಈ ವೇಳೆ ತಂಡದಲ್ಲಿನ ಅಧಿಕಾರಿಯೋರ್ವರು ಮಗುವೊಂದನ್ನು ರಕ್ಷಣೆ ಮಾಡಿದ್ದು ಎಲ್ಲೆಡೆ ವೈರಲ್ ಆಗಿದೆ. 

ಇಡುಕ್ಕಿ : ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಅಧಿಕಾರಿ ಕನ್ಹಯ್ಯಾ ಕುಮಾರ್ ಇದೀಗ ಎಲ್ಲೆಡೆ ಹೀರೋ ಆಗಿದ್ದಾರೆ. ಕೇರಳದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು ಇಡುಕ್ಕಿ ಜಿಲ್ಲೆಯಲ್ಲಿ ಉಂಟಾದ ಪ್ರವಾಹದ ವೇಳೆ ಮಗುವೊಂದನ್ನು ರಕ್ಷಿಸುವ ಮೂಲಕ ಭಾರೀ ಸುದ್ದಿಯಾಗಿದ್ದಾರೆ. 

ಸ್ವಾರ್ಥ ವಿಲ್ಲದ ಇವರ ಸೇವೆಯನ್ನು ಎಲ್ಲರೂ ಕೂಡ ಮೆಚ್ಚಿ ಕೊಂಡಾಡಿದ್ದಾರೆ. ಭಾರೀ ಪ್ರವಾಹದಲ್ಲಿ ಸೇತುವೆಯೊಂದು ಮುಳುಗಿದ್ದು ಈ ವೇಳೆ ಮಗುವನ್ನು ರಕ್ಷಣೆ ಮಾಡಿದ್ದರು. ಅತ್ಯಂತ ಜ್ವರದಿಂದ ಬಳಲುತ್ತಿದ್ದ ಮಗುವನ್ನು ಬಳಿಕ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. 

ಕೇರಳದ ಪ್ರವಾಹ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಸಲು ಎನ್ ಡಿ ಆರ್ ಎಫ್ ಪಡೆ ಆಗಮಿಸಿತ್ತು. ಕನ್ಹಯ್ಯಾ ಕುಮಾರ್ ಎನ್ನುವ ಈ ಅಧಿಕಾರಿ ಮಗುವನ್ನು ರಕ್ಷಣೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಅವರಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 

Scroll to load tweet…