ಲೋಕಸಭಾ ಚುನಾವಣೆಗೆ ಎನ್‌ಡಿಎ ಭರ್ಜರಿ ತಯಾರಿ! 50-50 ಸೀಟು ಹಂಚಿಕೆಗೆ ಜೆಡಿಯು, ಬಿಜೆಪಿ ಒಪ್ಪಿಗೆ! ಬಿಜೆಪಿಯಿಂದ ಮಿತ್ರಪಕ್ಷಗಳಿಗೂ ನ್ಯಾಯ ಒದಗಿಸುವ ಭರವಸೆ! ಅಮಿತ್ ಶಾ, ನಿತೀಶ್ ಕುಮಾರ್ ಜಂಟಿ ಪತ್ರಿಕಾಗೋಷ್ಠಿ  

ಪಾಟ್ನಾ(ಅ.26): ಮುಂದಿನ ಲೋಕಸಭೆ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ಆಡಳಿತಾರೂಢ ಬಿಜೆಪಿ, ಎನ್ ಡಿಎ ಮಿತ್ರಪಕ್ಷಗಳನ್ನು ತಲುಪುವ ಕಾರ್ಯಕ್ಕೆ ಅಧಿಕೃತವಾಗಿ ಕೈ ಹಾಕಿದೆ.

ಇದರ ಮೊದಲ ಹಂತವಾಗಿ ಬಿಹಾರದಲ್ಲಿ ಸೀಟು ಹಂಚಿಕೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಜೆಡಿಯು ಮತ್ತು ಬಿಜೆಪಿ ಲೋಕಸಭಾ ಸೀಟುಗಳನ್ನು ಸಮಾನವಾಗಿ ಹಂಚಿಕೊಂಡಿವೆ.

Scroll to load tweet…

ಬಿಹಾರದಲ್ಲಿ 40 ಲೋಕಸಭಾ ಕ್ಷೇತ್ರಗಳಿದ್ದು, ಮಿತ್ರಪಕ್ಷಗಳಿಗೆ ಕೊಡಬೇಕಾದ ಸೀಟುಗಳನ್ನು ಹೊರತುಪಡಿಸಿ ಉಳಿದ ಕ್ಷೇತ್ರಗಳಲ್ಲಿ ಜೆಡಿಯು ಮತ್ತು ಬಿಜೆಪಿ ಸಮಾನವಾಗಿ ಸ್ಪರ್ಧಿಸಲಿವೆ.

ಅದರಂತೆ ಎಷ್ಟು ಸೀಟುಗಳ ಹಂಚಿಕೆ ನಡೆಯಲಿದೆ ಎಂಬುದರ ಕುರಿತು ಕೆಲವೇ ದಿನಗಳಲ್ಲಿ ನಿರ್ಧಾರ ಪ್ರಕಟಿಸಲಿದ್ದು, ಸಮಾನ ಸೀಟು ಹಂಚಿಕೆಗೆ ಎರಡೂ ಪಕ್ಷಗಳು ಒಪ್ಪಿಗೆ ನೀಡಿವೆ ಎನ್ನಲಾಗಿದೆ.

Scroll to load tweet…

ಬಿಹಾರ ರಾಜಧಾನಿ ಪಾಟ್ನಾದಲ್ಲಿ ಇಂದು ನಡೆದ ಎನ್ ಡಿಎ ಸಭೆಯಲ್ಲಿ ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಭಾಗವಹಿಸಿದ್ದರು.

ಈ ಹಿಂದೆ ಬಿಜೆಪಿ 22 ಲೋಕಸಭಾ ಕ್ಷೇತ್ರಗಳನ್ನು ಕೇಳಿತ್ತಾದರೂ, ಜೆಡಿಯು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಅದರಂತೆ ಸೀಟು ಹಂಚಿಕೆ ಪ್ರಕ್ರಿಯೆನ್ನು ಅಂತಿಮಗೊಳಿಸಿರುವ ಮಿತ್ರ ಪಕ್ಷಗಳು ಸಮಾನ ಸೀಟು ಹಂಚಿಕೆಗೆ ಒಪ್ಪಿಗೆ ಸೂಚಿಸಿವೆ.