ಎನ್‌ಡಿಎ ಮಿತ್ರಕೂಟದಲ್ಲಿ ಬಿರುಕು ಹೆಚ್ಚುತ್ತಿದ್ದು, ಶಿವಸೇನೆ, ರಾಷ್ಟ್ರೀಯ ಲೋಕಸಮತಾ ಪಕ್ಷದ  ಬಳಿಕ ಆಂಧ್ರದ ತೆಲುಗುದೇಶಂ ಪಾರ್ಟಿ, ಎನ್‌ಡಿಎದಿಂದ ಹೊರಬರುವ ಚಿಂತನೆ ಆರಂಭಿಸಿದೆ.

ಹೈದರಾಬಾದ್ : ಎನ್‌ಡಿಎ ಮಿತ್ರಕೂಟದಲ್ಲಿ ಬಿರುಕು ಹೆಚ್ಚುತ್ತಿದ್ದು, ಶಿವಸೇನೆ, ರಾಷ್ಟ್ರೀಯ ಲೋಕಸಮತಾ ಪಕ್ಷದ ಬಳಿಕ ಆಂಧ್ರದ ತೆಲುಗುದೇಶಂ ಪಾರ್ಟಿ, ಎನ್‌ಡಿಎದಿಂದ ಹೊರಬರುವ ಚಿಂತನೆ ಆರಂಭಿಸಿದೆ.

2018ರ ಕೇಂದ್ರ ಬಜೆಟ್ ನಲ್ಲಿ ರಾಜ್ಯವನ್ನು ಕಡೆಗಣಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸಿಎಂ ಚಂದ್ರಬಾಬು ನಾಯ್ಡು , ಭಾನುವಾರ ಪಕ್ಷದ ನಾಯಕರ ಸಭೆ ಕರೆದಿದ್ದಾರೆ.

ಇದರಲ್ಲಿ ಎನ್‌ಡಿಎನಲ್ಲಿ ಮುಂದುವರಿಯಬೇಕೇ ಎಂಬ ಬಗ್ಗೆ ನಿರ್ಧರಿಸಿವುದಾಗಿ ಪಕ್ಷದ ಮೂಲಗಳು ತಿಳಿಸಿವೆ. ಜೊತೆಗೆ ಗುರುವಾರ ರಾತ್ರಿಯೇ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ದೆಹಲಿಯ ಸಂಸದರ ಜೊತೆ ಚರ್ಚೆಯನ್ನೂ ನಡೆಸಿದ್ದಾರೆ. ಇದೇ ವೇಳೆ ಎನ್‌ಡಿಎದಿಂದ ಹೊರಬಂದು, ಮತ್ತೆ ತೃತೀಯ ರಂಗ ರಚಿಸಿ ಅದರ ನೇತೃತ್ವ ವಹಿಸುವ ಗಂಭೀರ ಚಿಂತನೆಯೂ ನಾಯ್ಡು ಅವರಲ್ಲಿದೆ ಎಂದು ಹೇಳಲಾಗಿದೆ.