ಖಾಸಗಿ ವಾಹಿನಿಯೊಂದರ ಜಾಹೀರಾತು ಸಲುವಾಗಿ ಟೀಮ್ ಇಂಡಿಯಾದ ಮೂವರು ಆಟಗಾರರು ನಟಿಸಿರುವ ಒಂದು ಜಾಹೀರಾತು ಎಲ್ಲರ ಹೃದಯ ಮುಟ್ಟುವಂತಿದೆ. ತಮ್ಮ ಜರ್ಸಿ ಹಿಂದೆ ಅವರವರ ಅಮ್ಮಂದಿರ ಹೆಸರಿನೊಂದಿಗೆ ಕಾಣಿಸಿಕೊಳ್ಳುವ ಆಟಗಾರರು, ಜೀವನದಲ್ಲಿ ತಾಯಿಯ ಮಹತ್ವವನ್ನು ಸಾರಿದ್ದಾರೆ. ತಮ್ಮ ಯಶಸ್ಸಿನಲ್ಲಿ ಅವರ ಪಾಲು ತುಂಬಾ ಇದೆ. ಹೊಸ ರೀತಿ ಯೋಚಿಸೋಣ ಎಂಬುವುದು ಈ ಜಾಹೀರಾತಿನ ತಿರುಳಾಗಿದೆ.
ಮುಂಬೈ(ಅ.17): ಭಾರತ-ನ್ಯೂಜಿಲೆಂಡ್ ಮೊದಲ ಏಕದಿನ ಪಂದ್ಯದ ವೇಳೆ ಎಲ್ಲರ ಗಮನ ಸೆಳೆದಿದ್ದು, ಒಂದು ಜಾಹೀರಾತು. ತಾಯಿಯ ಮಹತ್ವದ ಬಗ್ಗೆ ಹೇಳುವ ಈ ಜಾಹೀರಾತು ಎಲ್ಲರನ್ನ ಆಕರ್ಷಿಸಿತು. ಕೊಹ್ಲಿ, ಧೋನಿ ಮತ್ತು ರಹಾನೆ ಅಭಿನಯಿಸಿರುವ ಅದ್ಭುತವಾದ ಜಾಹೀರಾತು ಇದು.
ಖಾಸಗಿ ವಾಹಿನಿಯೊಂದರ ಜಾಹೀರಾತು ಸಲುವಾಗಿ ಟೀಮ್ ಇಂಡಿಯಾದ ಮೂವರು ಆಟಗಾರರು ನಟಿಸಿರುವ ಒಂದು ಜಾಹೀರಾತು ಎಲ್ಲರ ಹೃದಯ ಮುಟ್ಟುವಂತಿದೆ. ತಮ್ಮ ಜರ್ಸಿ ಹಿಂದೆ ಅವರವರ ಅಮ್ಮಂದಿರ ಹೆಸರಿನೊಂದಿಗೆ ಕಾಣಿಸಿಕೊಳ್ಳುವ ಆಟಗಾರರು, ಜೀವನದಲ್ಲಿ ತಾಯಿಯ ಮಹತ್ವವನ್ನು ಸಾರಿದ್ದಾರೆ. ತಮ್ಮ ಯಶಸ್ಸಿನಲ್ಲಿ ಅವರ ಪಾಲು ತುಂಬಾ ಇದೆ. ಹೊಸ ರೀತಿ ಯೋಚಿಸೋಣ ಎಂಬುವುದು ಈ ಜಾಹೀರಾತಿನ ತಿರುಳಾಗಿದೆ.
ಇದುವರೆಗೆ ಕ್ರಿಕೆಟರ್ಸ್ ತಮ್ಮ ಹೆಸರಿನ ಮಧ್ಯ ತಂದೆಯ ಹೆಸರಿನಿಂದ ಗುರುತಿಸುತ್ತಿದ್ರು. ಆದರೆ ಅವರಷ್ಟೇ ಅಲ್ಲ, ತಂದೆಯ ಶ್ರಮದಷ್ಟೇ ತಾಯಿಯ ಪಾತ್ರವೂ ಮಹತ್ವದ್ದು ಎಂದು ತಮ್ಮ ಮನದಾಳದ ಮಾತನ್ನು ಹೊರಹಾಕುವ ಜಾಹೀರಾತು ಸದ್ಯ ಸಖತ್ ಸದ್ದು ಮಾಡುತ್ತಿದೆ.
ದೇವಕಿ ಪುತ್ರ ಮಹಿ
ಮಹೇಂದ್ರ ಸಿಂಗ್ ಧೋನಿ ಇಲ್ಲಿಯ ತನಕ ಪಾನ್ ಸಿಂಗ್ ಧೋನಿ ಅವರ ಪುತ್ರನೆಂದೇ ಎಲ್ಲೆಡೆ ಗುರುತಿಸಿಕೊಂಡಿದ್ದರು. ಆದರೆ ತಮ್ಮ ಜರ್ಸಿ ಮೇಲೆ ದೇವಕಿ ಎಂದು ಬರೆಸಿಕೊಳ್ಳುವ ಮೂಲಕ ಮಹಿ, ಅಪ್ಪನಷ್ಟೇ ತಾಯಿ ಪಾತ್ರವೂ ಮಹತ್ವದ್ದು. ನನ್ನ ಎಲ್ಲ ಯಶಸ್ಸಿನಲ್ಲೂ ತಾಯಿಯ ಪಾತ್ರವೂ ಮುಖ್ಯ ಎಂದಿದ್ದಾರೆ. ತಾವು ಕ್ರಿಕೆಟರ್ ಆಗಲು ಅಪ್ಪನ ವಿರೋಧವಿದ್ರೂ ತಮ್ಮ ತಾಯಿ ದೇವಕಿ ಸಹಾಯವೇ ಇದಕ್ಕೆ ಕಾರಣವೆಂಬುದನ್ನು ಮಹಿ ಮೆಲಕು ಹಾಕಿದ್ದಾರೆ.
ಕೊಹ್ಲಿ ಶಕ್ತಿ ತಾಯಿ ಸರೋಜ
ವಿರಾಟ್ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ಮೊದಲೇ ಅವರ ತಂದೆ ಇಹಲೋಕ ತ್ಯಜಿಸಿದ್ರು. ಪ್ರೇಮ್ ಕೊಹ್ಲಿ ಪ್ರೀತಿಯ ಅಪ್ಪನಾದ್ರೂ ವಿರಾಟ್ ಯಶಸ್ಸಿಗೆ ಬೆನ್ನಾಗಿ ನಿಂತಿದ್ದು ತಾಯಿ. ಅದನ್ನು ಸ್ಮರಿಸುವುದು ನನ್ನ ಧರ್ಮ ಎಂದಿರುವ ವಿರಾಟ್, ತಮ್ಮ ತಾಯಿಯ ತ್ಯಾಗವನ್ನು ಸ್ಮರಿಸಿದ್ದಾರೆ.
ರಹಾನೆ ಕಿಟ್ ಎತ್ತುತ್ತಿದ್ದ ತಾಯಿ ಸುಜಾತ
ಅಜಿಂಕ್ಯಾ ರಹಾನೆ ತಾಯಿ ಸುಜಾತ ಅವರ ತ್ಯಾಗ ಎಲ್ಲರಿಗಿಂತ ಹೆಚ್ಚು. ಒಂದು ಕೈಯಲ್ಲಿ ರಹಾನೆ ಸಹೋದರ ಮತ್ತೊಂದು ಕೈಯಲ್ಲಿ ರಹಾನೆ ಕಿಟ್ ಹಿಡಿದುಕೊಂಡು ರಹಾನೆ ಕ್ರಿಕೆಟ್ ಪ್ರ್ಯಾಕ್ಟಿಸ್ ಮಾಡಲು ಸಹಾಯವಾದವರು. ಹಾಗಾಗಿ ರಹಾನೆ ಕೂಡ ತಮ್ಮ ತಾಯಿ ಸುಜಾತ ಅವರಿಂದಲೇ ಇಂದು ಕ್ರಿಕೆಟರ್ ಆಗಲು ಸಾಧ್ಯ. ತಮ್ಮ ಯಶಸ್ಸು ತಾಯಿಗೆ ಸಮರ್ಪಿಸಿದ್ದಾರೆ.
ಪ್ರತಿಯೊಬ್ಬ ಪುರುಷರ ಯಶಸ್ಸಿನ ಹಿಂದೆ ತಾಯಿಯ ಶ್ರಮ ಹೆಚ್ಚಿರುತ್ತದೆ. ಆದರೆ ಪುರುಷ ಪ್ರಧಾನ ಸಮಾಜದಲ್ಲಿ ತಾಯಿಯನ್ನು ಕಡೆಗಣಿಸುವುದು ಸಾಮಾನ್ಯವಾಗಿದೆ. ಈಗ ಈ ಜಾಹೀರಾತು ಹೊಸ ಕ್ರಾಂತಿಕಾರಿ ವಿಷಯದೊಂದಿಗೆ ಹೊರಬಂದಿದ್ದು, ಆರಂಭದಲ್ಲೇ ಹೆಚ್ಚು ಸುದ್ದಿ ಮಾಡುತ್ತಿದೆ.
