Asianet Suvarna News Asianet Suvarna News

ಗೌರಿಯನ್ನು ನಕ್ಸಲರು ಕೊಂದಿಲ್ಲ, RSSನಿಂದ ಅಪಪ್ರಚಾರ: ಕಾಮ್ರೇಡ್ ವರವರರಾವ್ ಸ್ಪಷ್ಟನೆ

‘ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಮಾವೋವಾದಿ ಬಣ ಸೇರಿ ಯಾವುದೇ ನಕ್ಸಲ್ ಸಂಘಟನೆಗಳು ಹತ್ಯೆ ಮಾಡಿಲ್ಲ. ದಮನಿತರ ಪರ ಧ್ವನಿ ಎತ್ತುವ ಚಿಂತನೆಯುಳ್ಳ ಗೌರಿ ಲಂಕೇಶ್ ನಡೆಸಿದ್ದ ಹಲವು ಹೋರಾಟಗಳಿಗೆ ನಕ್ಸಲರ ಸಹಮತ ಇತ್ತು. ಇಂತಹ ವ್ಯಕ್ತಿಯನ್ನು ನಕ್ಸಲ್ ಸಂಘಟನೆಗಳು ಕೊಂದಿಲ್ಲ.’ ಹೀಗಂತ ಹಿರಿಯ ಕಮ್ಯುನಿಸ್ಟ್ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ ಪೆಂಡ್ಯಾಲ ವರವರರಾವ್ ಸ್ಪಷ್ಟಪಡಿಸಿದ್ದಾರೆ.

Naxals are not responsible for gauri lankeshs murder says comrade varavara rao

ಬೆಂಗಳೂರು(ಸೆ.15): ‘ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ಮಾವೋವಾದಿ ಬಣ ಸೇರಿ ಯಾವುದೇ ನಕ್ಸಲ್ ಸಂಘಟನೆಗಳು ಹತ್ಯೆ ಮಾಡಿಲ್ಲ. ದಮನಿತರ ಪರ ಧ್ವನಿ ಎತ್ತುವ ಚಿಂತನೆಯುಳ್ಳ ಗೌರಿ ಲಂಕೇಶ್ ನಡೆಸಿದ್ದ ಹಲವು ಹೋರಾಟಗಳಿಗೆ ನಕ್ಸಲರ ಸಹಮತ ಇತ್ತು. ಇಂತಹ ವ್ಯಕ್ತಿಯನ್ನು ನಕ್ಸಲ್ ಸಂಘಟನೆಗಳು ಕೊಂದಿಲ್ಲ.’ ಹೀಗಂತ ಹಿರಿಯ ಕಮ್ಯುನಿಸ್ಟ್ ಹೋರಾಟಗಾರ, ಸಾಮಾಜಿಕ ಕಾರ್ಯಕರ್ತ ಪೆಂಡ್ಯಾಲ ವರವರರಾವ್ ಸ್ಪಷ್ಟಪಡಿಸಿದ್ದಾರೆ.

ಗೌರಿ ಲಂಕೇಶ್ ನಕ್ಸಲರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನ ನಡೆಸಿದ್ದರಿಂದ ಕ್ರುದ್ಧರಾಗಿದ್ದ ನಕ್ಸಲರ ಒಂದು ಗುಂಪು ಈ ಹತ್ಯೆಯಲ್ಲಿ ಪಾಲ್ಗೊಂಡಿದೆ ಎಂದು ಬಿಂಬಿಸುತ್ತಿರುವುದನ್ನು ಅವರು ಬಲವಾಗಿ ಖಂಡಿಸಿದ್ದಾರೆ. ‘ಕನ್ನಡಪ್ರಭ’ಕ್ಕೆ ದೂರವಾಣಿ ಮೂಲಕ ವಿಶೇಷ ಸಂದರ್ಶನ ನೀಡಿದ ಅವರು, ಕಮ್ಯುನಿಸ್ಟ್ ಸಿದ್ಧಾಂತಕ್ಕೆ ಮಸಿ ಬಳಿಯಲು ಎಲ್ಲ ಕಾಲಕ್ಕೂ ಹುನ್ನಾರ ನಡೆಸುತ್ತ ಬಂದಿರುವ ಆರ್‌ಎಸ್‌ಎಸ್‌ನವರೇ ಈಗಲೂ ಇಂತಹ ವದಂತಿ ಹಬ್ಬಿಸುತ್ತಿದ್ದಾರೆ. ವಿನಾಕಾರಣ ನಕ್ಸಲರ ಮೇಲೆ ಗೂಬೆ ಕೂರಿಸುತ್ತಿದ್ದಾರೆ’ ಎಂದು ಟೀಕಿಸಿದರು.

ಅಲ್ಲದೆ, ಸಂಗಾತಿ ಗೌರಿ ಹತ್ಯೆ ಹಿಂದೆ ಆರ್‌ಎಸ್‌ಎಸ್ ಕೈವಾಡ ಇದೆ. ಅದನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ಗೌರಿ ಹತ್ಯೆ ಬಳಿಕ ಖುಷಿ ಪಡುತ್ತಿರುವವರು ಯಾರು? ಒಂದು ಹತ್ಯೆಯ ಬಳಿಕ ಖುಷಿ ಆಗುವುದು ಹಂತಕರಿಗೇ ಹೊರತು ಸಂಗಾತಿಗಳಿಗಲ್ಲ. ಕೊಲೆಗಾರರೇ ತಮ್ಮ ಅಪರಾ‘ವನ್ನು ಮರೆಮಾಚಲು ಕೊಲೆಯ ಆರೋಪವನ್ನು ಮತ್ತೊಬ್ಬರ ಮೇಲೆ ಹಾಕುತ್ತಿದ್ದಾರೆ ಎಂದು ಆರೋಪ ಮಾಡಿದರು.

ಗೌರಿ ಲಂಕೇಶ್ ದಮನಿತರ ಪರ ಧ್ವನಿ ಎತ್ತುವ ಮನೋಗುಣದವರು. ಬಾಬಾಬುಡನ್‌'ಗಿರಿ ಚಳವಳಿ ಯಿಂದ ಲಿಂಗಾಯತ ಚಳವಳಿ ತನಕ ಅನೇಕ ವಿಚಾರಗಳಲ್ಲಿ ಗೌರಿ ಲಂಕೇಶ್ ನಡೆಸಿಕೊಂಡು ಬಂದಿದ್ದ ಹೋರಾಟಗಳಿಗೆ ನಕ್ಸಲರ ಸಹಮತ ಇದ್ದೇ ಇತ್ತು. ಆದರೆ ಸ್ವತಃ ಗೌರಿ ಲಂಕೇಶ್ ಯಾವತ್ತೂ ನಕ್ಸಲ್ ಆಗಿರಲಿಲ್ಲ, ಮಾರ್ಕ್ಸವಾದಿ ಕೂಡ ಆಗಿರಲಿಲ್ಲ. ಅವಳು ಯಾರನ್ನೂ ಕೊಂದಿರಲಿಲ್ಲ, ಕೊಲ್ಲುವವರೊಂದಿಗೆ ಕೈ ಜೋಡಿಸಿರಲಿಲ್ಲ. ಅವಳಿಗೆ ಜಾತ್ಯತೀತ ಸಿದ್ಧಾಂತ, ಪ್ರಜಾಪ್ರಭುತ್ವವಾದ ಮತ್ತು ದಮನಿತರ ಪರವಾದ ಚಿಂತನೆಗಳಿದ್ದವು. ಒಬ್ಬ ಪತ್ರಕರ್ತೆಯಾಗಿ ಹಾಗೂ ಸಾಮಾಜಿಕ ಹೋರಾಟ ಗಾರ್ತಿಯಾಗಿ ತಮ್ಮ ಕೆಲಸವನ್ನು ತಾವು ಮಾಡುತ್ತ ಬಂದಿದ್ದರು. ಅವರ ಹತ್ಯೆ ಆಗಿರುವುದು ದುರದೃಷ್ಟಕರ ಎಂದು ಹೇಳಿದರು.

ಮಾವೋವಾದಿಗಳಲ್ಲ:

ಕರ್ನಾಟಕದ ನಕ್ಸಲ್ ಚಳವಳಿಯ ಸಂದರ್ಭದಲ್ಲಿ ಮಾವೋವಾದಿ ಚಳವಳಿಯಿಂದ ಕೆಲವರು ಹೊರ ಹೋಗಿದ್ದರು. ಅಂಥವರನ್ನು ಮುಖ್ಯವಾಹಿನಿಗೆ ಸೇರಿಸಬೇಕೆಂಬ ಸರ್ಕಾರದ ನಿಲುವಿಗೆ ಸ್ಪಂದಿಸಿ, ಗೌರಿ ಲಂಕೇಶ್ ಅವರು ನಕ್ಸಲರ ಮನವೊಲಿಸುವ ಕೆಲಸ ಮಾಡಿದ್ದರು. ವೈಚಾರಿಕ ಭಿನ್ನಾಭಿಪ್ರಾಯಕ್ಕೆ ದ್ವೇಷ ಇರುವುದಾದರೆ ಚಳವಳಿಯಿಂದ ಹೊರ ಹೋಗಿರುವವರ ವಿರುದ್ಧ ದ್ವೇಷ ಇರಬಹುದು. ಆದರೆ ಗೌರಿ ಲಂಕೇಶ್ ವಿರುದ್ಧ ಮಾವೋವಾದಿಗಳಿಗಾಗಲಿ, ಭಿನ್ನ ವಿಚಾರಗಳಿರುವ ಇತರ ನಕ್ಸಲರಿಗಾಗಲಿ ಕೋಪ-ದ್ವೇಷ ಇರಲು ಸಾಧ್ಯವೇ ಇಲ್ಲ. ಈ ವಿಚಾರವಾಗಿ ಮಾವೋವಾದಿ ಸಂಘಟನೆಯ ಕೇಂದ್ರ ಸಮಿತಿಯ ವಕ್ತಾರ ಅಭಯ್ ಈಗಾಗಲೇ ಅಧಿಕೃತವಾಗಿ ಸ್ಪಷ್ಟನೆ ನೀಡಿದ್ದಾರೆ ಎಂದು ತಿಳಿಸಿದರು.

‘ಕೊಯಿಮತ್ತೂರು ನ್ಯಾಶನಲ್ ಪಾರ್ಕ್ ಚಳವಳಿ, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ಹೋರಾಟ, ಜಾಗತಿಕರಣದ ವಿರುದ್ಧದ ಹೋರಾಟಗಳಲ್ಲಿ ನಾನು ಗೌರಿ ಲಂಕೇಶ್ ಜತೆ ಕೆಲಸ ಮಾಡಿದ್ದೇನೆ. ಅತ್ಯಂತ ಪ್ರಜಾಸತ್ತಾತ್ಮಕ ವಿಚಾರಧಾರೆಗಳುಳ್ಳ ವ್ಯಕ್ತಿಯಾಗಿದ್ದ ಅವರು, ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತಿದ್ದರು. ಅಷ್ಟು ಮಾತ್ರಕ್ಕೆ, ಕಮ್ಯುನಿಸ್ಟ್ ಸಿದ್ಧಾಂತದಲ್ಲಿ ನಂಬಿಕೆ ಇದ್ದ ಮಾತ್ರಕ್ಕೆ ಯಾರೂ ನಕ್ಸಲರೇ ಆಗುವುದಿಲ್ಲ. ಸಮಾನ ವಿಚಾರಧಾರೆಗಳು ಹೊಂದಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡುವ ಪ್ರವೃತ್ತಿ ಯಾವ ನಾಗರಿಕ ಸಮಾಜವನ್ನೂ ನಿರ್ಮಾಣ ಮಾಡುವುದಿಲ್ಲ’ ಎಂದು ವಿಶ್ಲೇಷಿಸಿದರು.

ಹತ್ಯೆ ಹಿಂದೆ ನಾವಿಲ್ಲ ಎಂದಿದೆ ಮಾವೋ ಸಂಘಟನೆ:ರಾವ್

ಸೆ.5ರಂದು ರಾತ್ರಿ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸದ ಎದುರು ಪತ್ರಕರ್ತೆ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳ ಗುಂಡಿಟ್ಟು ಬರ್ಬರವಾಗಿ ಹತ್ಯೆ ಮಾಡಿದ್ದರು. ಅದಾದ ಬಳಿಕ ಹತ್ಯೆಯ ಕಾರಣಗಳನ್ನು ಬೆನ್ನಟ್ಟಿದ ಪೊಲೀಸರು ಬಲಪಂಥೀಯ, ಎಡಪಂಥೀಯ ಹಾಗೂ ವೈಯಕ್ತಿಕ ನೆಲೆಯಲ್ಲಿ ಹತ್ಯೆಗೆ ಕಾರಣಗಳನ್ನು ಹುಡುಕಲು ಆರಂಭಿಸಿದ್ದರು. ನಕ್ಸಲೀಯ ನಾಯಕ ವಿಕ್ರಂಗೌಡ ಸೇರಿದಂತೆ ಹಲವು ಮುಖಂಡರು ಹೆಸರುಗಳನ್ನು ಆ‘ರಿಸಿ ಮಾಧ್ಯಮಗಳಲ್ಲಿ ವರದಿ ಪ್ರಕಟಗೊಂಡಿದ್ದವು. ಆದರೆ ಇದೇ ಮೊದಲ ಬಾರಿಗೆ ಗೌರಿ ಲಂಕೇಶ್ ಹತ್ಯೆಯ ಹಿಂದೆ ನಕ್ಸಲೀಯರ, ಅದರಲ್ಲೂ ಮಾವೋವಾದಿ ಸಂಘಟನೆಯ ಕೈವಾಡ ಇಲ್ಲವೇ ಇಲ್ಲ, ಆ ಬಗ್ಗೆ ಮಾವೋವಾದಿ ಸಂಘಟನೆ ಕೇಂದ್ರ ಸಮಿತಿಯ ಸದಸ್ಯ ಅಭಯ್ ಅಧಿಕೃತವಾಗಿಯೇ ಹೇಳಿದ್ದಾರೆ ಎಂದು ಆಂಧ್ರಪ್ರದೇಶದ ಕಮ್ಯುನಿಸ್ಟ್ ಚಳವಳಿ ಹಿರಿಯ ನೇತಾರ ಪೆಂಡ್ಯಾಲ ವರವರ ರಾವ್ ಅಧಿಕೃತವಾಗಿ ‘ಕನ್ನಡಪ್ರಭಕ್ಕೆ ಹೇಳಿಕೆ ನೀಡಿದ್ದಾರೆ.

ವರದಿ: ಶಿವಕುಮಾರ್ ಮೆಣಸಿನಕಾಯಿ

Follow Us:
Download App:
  • android
  • ios