ಇಸ್ಲಾಮಾಬಾದ್(ಆ.23): ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ ಅವರ ಪತ್ನಿ ಕುಲ್ಸೂಮ್ ನವಾಜ್(60) ಅವರು ಗಂಟಲು ಕ್ಯಾನ್ಸರ್‌'ನಿಂದ ಬಳಲುತ್ತಿದ್ದಾರೆ ಎಂದು ಬ್ರಿಟನ್ ವೈದ್ಯರ ಮಾಹಿತಿ ಆಧರಿಸಿ ಪಾಕ್ ಮಾಧ್ಯಮಗಳು ವರದಿ ಮಾಡಿವೆ.

ಪನಾಮ ಪೇಪರ್ ಪ್ರಕರಣ ಸಂಬಂಧ ಪಾಕಿಸ್ತಾನ ಸುಪ್ರೀಂ ಕೋರ್ಟ್‌'ನಿಂದ ಪದಚ್ಯುತರಾದ ನವಾಜ್ ಷರೀಫ್ ಅವರಿಂದ ತೆರವಾದ ಲಾಹೋರ್‌ನ ಎನ್‌'ಎ-120 ಕ್ಷೇತ್ರದಿಂದ ಉಪಚುನಾವಣೆಗೆ ಈಗ ಕುಲ್ಸೂಮ್ ಸ್ಪರ್ಧಿಸಿದ್ದಾರೆ.

ಅವರಿಗೆ ಲಂಡನ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೇಳಲಾಗಿದೆ. ಹಾಗಾಗಿ, ಕುಲ್ಸೂಮ್ ಅನುಪಸ್ಥಿತಿಯಲ್ಲಿ ಷರೀಫ್ ಪುತ್ರಿ ಮಾರ್ಯಂ ನವಾಜ್ ಅವರುಚುನಾವಣಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.