ಇಸ್ಲಮಾಬಾದ್(ಜು.28): ಪನಾಮಾ ದಾಖಲೆ ಹಗರಣ ವಿಚಾರದಲ್ಲಿ ಪಾಕ್'ನ ಸರ್ವೋಚ್ಛ ನ್ಯಾಯಾಲಯದಲ್ಲಿ ಪಾಕ್ ಪ್ರಧಾನಿ ನವಾಜ್ ಷರೀಫ್'ಗೆ ಭಾರೀ ಮುಖಭಂಗವಾಗಿದೆ. ನ್ಯಾಯಾಲಯದಲ್ಲಿ ಪಾಕ್ ಪ್ರಧಾನಿಯ ಭ್ರಷ್ಟಾಚಾರ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ  ಪಾಕಿಸ್ತಾನ ರಾಜಕೀಯದಲ್ಲಿ ಹೊಸ ಬಿರುಗಾಳಿ ಎದ್ದಿದೆ.

ಪನಾಮಾ ದಾಖಲೆ ಸೋರಿಕೆ ಹಗರಣ ವಿಚಾರವಾಗಿ ತೀರ್ಪು ನೀಡಿರುವ ಪಾಕ್ ಸುಪ್ರೀಂಕೋರ್ಟ್ ಪಾಕ್ ಪ್ರಧಾನಿ ಷರೀಫ್ ವಿರುದ್ಧ ಕ್ರಿಮಿನಲ್ ಕೇಸ್​ ದಾಖಲಿಸಲು ಸೂಚನೆ ನೀಡಿದೆ. ಅಲ್ಲದೆ ನವಾಜ್ ಷರೀಫ್ ತಕ್ಷಣ ರಾಜೀನಾಮೆ ನೀಡಲೂ ಸೂಚಿಸಿದೆ. ಇದರಿಂದಾಗಿ ಪಾಕಿಸ್ತಾನ ಪ್ರಧಾನಿಗೆ ಸುಪ್ರೀಂಕೋರ್ಟ್​ನಿಂದ ಭಾರೀ ಮುಖಭಂಗವಾಗಿದೆ.