ದುಬೈನಲ್ಲಿ ನವಾಜ್ ಷರೀಫ್ ಬಂಧನ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 13, Jul 2018, 11:05 AM IST
Nawaz, Maryam arrested at abu dhabi airport
Highlights

  • ಷರೀಫ್‌ಗೆ 10 ವರ್ಷ ಜೈಲು ಹಾಗೂ 8 ಮಿಲಿಯನ್‌ ಪೌಂಡ್‌ ದಂಡ ಕೂಡ ವಿಧಿಸಲಾಗಿತ್ತು
  • ಲಾಹೋರ್ ಬಂದ ತಕ್ಷಣ ಹೆಲಿಕಾಪ್ಟರ್ ಮೂಲಕ ಅಡಿಯಾಲ ಸೆರೆಮನೆಗೆ ಕಳಿಸಲಾಗುತ್ತದೆ

ಲಾಹೋರ್ [ಜು.13]: ಭ್ರಷ್ಟಾಚಾರ ಆರೋಪದ ಮೇಲೆ 10 ವರ್ಷ ಜೈಲು ಶಿಕ್ಷೆಗೆ ಒಳಗಾಗಿರುವ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಆತನ ಪುತ್ರಿ ಮರ್ಯಾಮ್ ರನ್ನು ದುಬೈ ಏರ್ ಪೋರ್ಟ್ ನಲ್ಲಿ ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧನಕ್ಕೂ ಮುನ್ನ ಷರೀಫ್  ಸಂಬಂಧಿಕರು ಭಾವನಾತ್ಮಕ ಬೀಳ್ಕೊಡುಗೆ ನೀಡಿದ್ದಾರೆ. ಷರೀಪ್ ಪುತ್ರಿ ಮರ್ಯಾಮ್  ಲಂಡನ್ನಿಂದ ಹೊರಡುವ ಮುನ್ನ ತಮ್ಮ ಮಕ್ಕಳಿಗೆ ಟ್ವೀಟ್ ಮಾಡಿ ಧೈರ್ಯದಿಂದ ಇರುವಂತೆ ತಿಳಿಸಿದ್ದಾರೆ. 

ತಂದೆ. ಮಗಳು ಲಾಹೋರ್ ಗೆ ಬಂದ ತಕ್ಷಣ ಹೆಲಿಕಾಪ್ಟರ್ ಮೂಲಕ ಅಡಿಯಾಲ ಸೆರೆಮನೆಗೆ ಕಳಿಸಲಾಗುತ್ತದೆ. ಷರೀಫ್ ಪಾಕ್  ಪ್ರಧಾನಿ ಆಗಿದ್ದ ಸಮಯದಲ್ಲಿ ಹಾಗೂ ನಂತರದಲ್ಲಿ ನಡೆಸಿರುವ ಭ್ರಷ್ಟಾಚಾರಗಳಲ್ಲಿ ಭಾಗಿಯಾಗಿರುವ ಹಿನ್ನಲೆಯಲ್ಲಿ ಶಿಕ್ಷೆ ನೀಡಲಾಗಿದೆ. ಷರೀಫ್‌ಗೆ 10 ವರ್ಷ ಜೈಲು ಹಾಗೂ 8 ಮಿಲಿಯನ್‌ ಪೌಂಡ್‌ ದಂಡ ಕೂಡ ವಿಧಿಸಲಾಗಿತ್ತು. ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಪನಾಮಾ ಪೇಪರ್ ಹಗರಣದಲ್ಲಿ ಷರೀಫ್‌ ಹೆಸರು ಬಹಿರಂಗಗೊಂಡಿತ್ತು.

ಲಂಡನ್‌ನಲ್ಲಿರುವ ಐಷಾರಾಮಿ ಬಂಗಲೆ ಮಾಲೀಕತ್ವದ ವಿಚಾರವಾಗಿ ಹಲವು ಬಾರಿ ವಿಚಾರಣೆ ನಡೆದಿದ್ದು ಕೋರ್ಟ್‌ ನಾಲ್ಕು ಬಾರಿ ಶಿಕ್ಷೆ ಪ್ರಮಾಣ ಪ್ರಕಟಿಸುವುದನ್ನು ಮುಂದೂಡಿತ್ತು. ತಮ್ಮ ಪತ್ನಿ ತೀವ್ರ ಅನಾರೋಗ್ಯಗೊಂಡಿದ್ದು, ಲಂಡನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ತೀರ್ಪು ಪ್ರಕಟಿಸುವುದನ್ನು ಮುಂದೂಡಬೇಕೆಂದು ಷರೀಫ್‌ ಮನವಿ ಸಲ್ಲಿಸಿದ್ದರು. ಆದರೆ ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್  ತೀರ್ಪು ಪ್ರಕಟಿಸಿತ್ತು. ಷರೀಫ್‌ ಇಂಗ್ಲೆಂಡ್ ಸೇರಿದಂತೆ ಹಲವು ದೇಶಗಳಲ್ಲಿ ಆದಾಯಕ್ಕೂ ಮೀರಿ ಆಸ್ತಿ ಹೊಂದಿರುವುದು ಸಾಬೀತಾಗಿದೆ. 

loader