ಓಖಿ ಚಂಡಮಾರುತದ ಬಳಿಕ ರಕ್ಷಣೆ ಮತ್ತು ಶೋಧ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತೀಯ ನೌಕಾಪಡೆ ಲಕ್ಷದ್ವೀಪ ಕರಾವಳಿಯಲ್ಲಿ 180 ಜನರನ್ನೊಳಗೊಂಡ 17 ಬೋಟ್’ಗಳನ್ನು ಪತ್ತೆಹಚ್ಚಿದೆ.

ಕೊಚ್ಚಿ(ಡಿ.9): ಓಖಿ ಚಂಡಮಾರುತದ ಬಳಿಕ ರಕ್ಷಣೆ ಮತ್ತು ಶೋಧ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತೀಯ ನೌಕಾಪಡೆ ಲಕ್ಷದ್ವೀಪ ಕರಾವಳಿಯಲ್ಲಿ 180 ಜನರನ್ನೊಳಗೊಂಡ 17 ಬೋಟ್’ಗಳನ್ನು ಪತ್ತೆಹಚ್ಚಿದೆ.

 ಐಎನ್ಎಸ್ ಕಲ್ಪೇನಿ ಹಡಗನ್ನು ಲಕ್ಷದ್ವೀಪದ ಕರಾವಳಿಗೆ ಶೋಧ ಕಾರ್ಯಚರಣೆಗೆ ರವಾನಿಸಲಾಗಿತ್ತು. ಆದರೆ ಚಂಡಮಾರುತದ ವೇಳೆ ನಾಪತ್ತೆಯಾದ 100 ಮೀನುಗಾರರು ಪತ್ತೆಯಾಗಿರುವ 180 ಜನರಲ್ಲಿ ಸೇರಿದ್ದಾರೆಯೇ ಎಂಬುದು ತಿಳಿದುಬಂದಿಲ್ಲ.

 ಚಂಡಮಾರುತದಿಂದ ಹಾನಿಗೀಡಾಗದ ಬೋಟಿನಲ್ಲಿರುವವರು ಮೀನುಗಾರಿಕೆ ಮುಂದುವರಿಸಿದ್ದಾರೆ. ಲಕ್ಷದ್ವೀಪದ ಕರಾವಳಿ ಸಾಮಾನ್ಯ ಸ್ಥಿತಿಯತ್ತ ಮರಳುತ್ತಿದೆ.