ಸಮುದ್ರದ ಮಧ್ಯೆಯೇ ಯುದ್ಧ ನೌಕೆಯಲ್ಲಿ ಯೋಗಅಂತರಷ್ಟ್ರೀಯ ಯೋಗ ದಿನಾಚರಣೆ ಆಚರಣೆಕೊಚ್ಚಿ, ವಿಶಾಖಪಟ್ಟಣಂ ನೌಕಾನೆಲೆಯಲ್ಲಿ ಯೋಗಐಎನ್‌ಎಸ್ ಜಮುನಾ, ಐಎನ್‌ಎಸ್ ವಿರಾಟ್

ಕೊಚ್ಚಿ(ಜೂ.21): 4ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಿಮಿತ್ತ ವಿಶ್ವಾದ್ಯಂತ ಕೋಟ್ಯಂತರ ಮಂದಿ ಯೋಗಾಭ್ಯಾಸ ಮಾಡುತ್ತಿದ್ದು, ಕೇರಳ, ವಿಶಾಖಪಟ್ಟಣಂದಲ್ಲಿ ಭಾರತೀಯ ನೌಕಾಪಡೆಯ ಸೈನಿಕರು ಯುದ್ಧನೌಕೆಯಲ್ಲೇ ಯೋಗ ಮಾಡುವ ಮೂಲಕ ಗಮನ ಸೆಳೆದರು.

ಸುಮಾರು 40 ಮಂದಿ ಸೈನಿಕರ ಕೇರಳದ ಕೊಚ್ಚಿ ಸೇನಾಪಡೆಯ ಬಂದರಿನಲ್ಲಿ ಯೋಧ ನಡೆಸಿದರು. ಕೊಚ್ಚಿಯಲ್ಲಿ ಲಂಗರು ಹಾಕಿರುವ ಐಎನ್‌ಎಸ್ ಜಮುನಾ ನೌಕೆಯಲ್ಲಿ ಯೋಧರು ಹಲವು ಯೋಗಾಸನಗಳನ್ನು ಪ್ರದರ್ಶನ ಮಾಡಿದರು. ಯೋಧರ ಈ ಯೋಗ ಪ್ರದರ್ಶನವನ್ನು ನೋಡಲು ನೂರಾರು ಮಂದಿ ಆಗಮಿಸಿದ್ದರು.

Scroll to load tweet…

ಇನ್ನು ಐಎನ್‌ಎಸ್ ವಿರಾಟ್ ನಲ್ಲಿ ಸಾವಿರ ಯೋಧರು ಮತ್ತು ಐಎನ್ಎಸ್ ಜ್ಯೋತಿ ನೌಕೆಗಳಲ್ಲಿಯೂ ಯೋಧರು ಯೋಗ ಅಭ್ಯಾಸ ಮಾಡಿದರು. ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಐಎನ್ಎಸ್ ಜ್ಯೋತಿ ನೌಕೆಯಲ್ಲಿ ವೈಸ್ ಅಡ್ಮಿರಲ್ ಕರಂಬೀರ್ ಸಿಂಗ್ ಮತ್ತು ಫ್ಲಾಗ್ ಆಫೀಸರ್ ಗಳ ನೇತೃತ್ವದಲ್ಲಿ ಯೋಗ ಕಾರ್ಯಕ್ರಮ ನಡೆಯಿತು. ಅಂತೆಯೇ ವಿಶಾಖಪಟ್ಟಣದಲ್ಲಿರುವ ಜಲಾಂತರ್ಗಾಮಿಯೊಳಗೇ ನಾವಿಕರು ಯೋಗ ಮಾಡಿದ್ದು ವಿಶೇಷವಾಗಿತ್ತು.

Scroll to load tweet…

ಇನ್ನು ದೇಶದ ಪ್ರಬಲಣ ಯುದ್ಧನೌಕೆ ಐಎನ್ ಎಸ್ ವಿರಾಚ್ ನಲ್ಲಿ ಸುಮಾರು 1 ಸಾವಿರಕ್ಕೂ ಅಧಿಕ ಸೈನಿಕರು ಒಟ್ಟಾಗಿ ಯೋಗ ಮಾಡುವ ಮೂಲಕ ಯೋಗದ ಮಹತ್ವವನ್ನು ವಿಶ್ವಕ್ಕೆ ಸಾರಿದರು.

Scroll to load tweet…

Scroll to load tweet…