1998 ರಲ್ಲಿ ನಡೆದ ರಸ್ತೆ ಗಲಾಟೆಯೊಂದರಲ್ಲಿ ಸಿಧು ಕೋಪದಿಂದ ಗುರುನಾಮ್ ಸಿಂಗ್ ಎನ್ನುವವರ ಮೇಲೆ ಹಲ್ಲೆ ನಡೆಸಿದ್ದರು. ಆಸ್ಪತ್ರೆಗೆ ದಾಖಲಿಸುವ ವೇಳೆ ಗುರು ನಾಮ್ ಸಿಂಗ್ ಸಾವಿಗೀಡಾಗಿದ್ದರು. ಈ ಘಟನೆ ಸಂಬಂಧ ಅವರಿಗೆ ಜೈಲು ಶಿಕ್ಷೆ ಎದುರಾಗುವ ಸಾಧ್ಯತೆ ಇದೆ. 

ನವದೆಹಲಿ: 1998 ರಲ್ಲಿ ನಡೆದ ರಸ್ತೆ ಗಲಾಟೆ ಪ್ರಕರಣ ದಲ್ಲಿ ಕೇವಲ 1000 ರು. ದಂಡ ಕಟ್ಟಿ ಖುಲಾಸೆಗೊಂಡಿದ್ದ ಮಾಜಿ ಸಂಸದ ನವಜೋತ್ ಸಿಂಗ್ ಸಿಧುಗೆ ಇದೀಗ ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಘಟನೆಯಲ್ಲಿ ಮೃತ ಪಟ್ಟ ವ್ಯಕ್ತಿಯ ಮಗ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಶಿಕ್ಷೆಯ ಪ್ರಮಾಣವನ್ನು ಮರುಪರಿಶೀಲಿಸಲು ಒಪ್ಪಿಗೆ ಸೂಚಿಸಿದೆ. 

1998 ರಲ್ಲಿ ನಡೆದ ರಸ್ತೆ ಗಲಾಟೆಯೊಂದರಲ್ಲಿ ಸಿಧು ಕೋಪದಿಂದ ಗುರುನಾಮ್ ಸಿಂಗ್ ಎನ್ನುವವರ ಮೇಲೆ ಹಲ್ಲೆ ನಡೆಸಿದ್ದರು. ಆಸ್ಪತ್ರೆಗೆ ದಾಖಲಿಸುವ ವೇಳೆ ಗುರು ನಾಮ್ ಸಿಂಗ್ ಸಾವಿಗೀಡಾಗಿದ್ದರು.

ಈ ಸಂಬಂಧ ಸೆಕ್ಷನ್ 323 ಅಡಿ ಸಿಧುಗೆ ಕೋರ್ಟ್1000 ರು. ದಂಡ ವಿಧಿಸಿ ಪ್ರಕ ರಣದಿಂದ ಖುಲಾಸೆ ಗೊಳಿಸಿತ್ತು.