ನವದೆಹಲಿ, [ಫೆ.16]: ಮಾಜಿ ಕ್ರಿಕೆಟಿಗ, ಪಂಜಾಬ್​ ಸಚಿವ ನವಜೋತ್​ ಸಿಂಗ್​​ ಸಿಧು ಪುಲ್ವಾಮಾ ದಾಳಿ ಬಗ್ಗೆ ನೀಡಿದ್ದ ಹೇಳಿಕೆಗೆ ಖಂಡನೆ ವ್ಯಕ್ತವಾದ ಬೆನ್ನಲ್ಲೇ 'ದಿ ಕಪಿಲ್​ ಶರ್ಮಾ' ಶೋದಿಂದ ಕಿಕ್​ಔಟ್​ ಆಗಿದ್ದಾರೆ. 

ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ 40 ಯೋಧರನ್ನು ಬಲಿ ತೆಗೆದುಕೊಂಡ ಉಗ್ರರ ದಾಳಿ ಬಗ್ಗೆ ಪ್ರತಿಕ್ರಿಯಿಸಿದ್ದ ಸಿಧು, ಪಾಕಿಸ್ತಾನದೊಂದಿಗೆ ಈ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು. ಯಾರೋ ಒಂದಷ್ಟು ಜನ ಮಾಡಿದ ತಪ್ಪಿಗೆ ಇಡೀ ದೇಶವನ್ನ ದೂಷಿಸಲು ಆಗುತ್ತಾ ಎಂದು ಪ್ರಶ್ನಿಸಿದ್ದರು. ಹಿಂಸೆ ಖಂಡನಾರ್ಹ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದರು.

ಪಾಕ್‌ಗೆ ಯಾಕೆ ಬೈಬೇಕು ಎಂದ ಸಿದ್ದುಗೆ ಬೈಬಾರದ್ದು ಬೈದ್ರು!

ಉಗ್ರರ ಪೈಶಾಚಿತ ಕೃತ್ಯದಿಂದ 40 ಯೋಧರು ಪ್ರಾಣ ಕಳೆದುಕೊಂಡಿದ್ದರೂ ಕೂತು ಮಾತನಾಡುವಂತೆ ಹೇಳ್ತಿದ್ದೀರಾ ಎಂದು ಸಿಧು ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿತ್ತು.

ಕಪಿಲ್​ ಶರ್ಮಾ ಶೋ ಕಾರ್ಯಕ್ರಮವನ್ನ ಬಹಿಷ್ಕಾರ​ ಮಾಡಬೇಕು ಎಂಬ ಕೂಗು ಕೇಳಿಬಂದಿತ್ತು. ಹೀಗಾಗಿ ಎಚ್ಚೆತ್ತುಕೊಂಡಿರುವ ಚಾನೆಲ್, 'ದಿ ಕಪಿಲ್​ ಶರ್ಮಾ' ಶೋ  ಕಾರ್ಯಕ್ರಮದಿಂದ ಹೊರನಡೆಯುವಂತೆ ಹೇಳಿದೆ.