ಪಕ್ಷೇತರವಾಗಿ ಸ್ಪರ್ಧಿಸಿ ಶಾಸಕರಾಗಿರುವ ಈ ಇಬ್ಬರು ಸಹೋದರರು ಆಪ್ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದು, ಆಪ್ ಪಕ್ಷ ಸೇರ್ಪಡೆಯಾಗಿರುವ ಕುರಿತಂತೆ ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.

ಚಂಢೀಗಡ(ನ.21): ಕ್ರಿಕೆಟಿಗ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿಧು ಆವಾಜ್-ಇ- ಪಂಜಾಬ್ ಎಂಬ ಹೊಸ ಪಕ್ಷ ಸ್ಥಾಪಿಸಿ ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಅವರಿಗೆ ಆರಂಭಿಕ ವಿಘ್ನ ಎದುರಾಗಿದೆ.

ಆವಾಜ್-ಇ- ಪಂಜಾಬ್ ಪಕ್ಷದ ಸಂಸ್ಥಾಪಕ ಸದಸ್ಯರಾದ ಸಿಮ್ರರ್'ಜಿತ್ ಬೈನ್ಸ್ ಹಾಗೂ ಆತನ ಸಹೋದರ ಬಲ್ವಿಂದರ್ ಸಿಂಗ್ ಬೈನ್ಸ್, ಸಿಧು ಪಕ್ಷಕ್ಕೆ ಗುಡ್ ಬೈ ಹೇಳಿ ಆಮ್ ಆದ್ಮಿ ಪಕ್ಷದೊಂದಿಗೆ ಕೈಜೋಡಿಸಿದ್ದಾರೆ.

ಪಕ್ಷೇತರವಾಗಿ ಸ್ಪರ್ಧಿಸಿ ಶಾಸಕರಾಗಿರುವ ಈ ಇಬ್ಬರು ಸಹೋದರರು ಆಪ್ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿದ್ದು, ಆಪ್ ಪಕ್ಷ ಸೇರ್ಪಡೆಯಾಗಿರುವ ಕುರಿತಂತೆ ಅಧಿಕೃತ ಘೋಷಣೆಯೊಂದೇ ಬಾಕಿಯಿದೆ.

ಸೆಪ್ಟೆಂಬರ್'ನಲ್ಲಿ ನೂತನ ಪಕ್ಷ ಸ್ಥಾಪಿಸಿರುವ ಸಿಧು ಪಂಜಾಬ್ ವಿಧಾನಸಭೆಯ ಮೇಲೆ ಕಣ್ಣಿಟ್ಟಿದ್ದಾರೆ. ಬಿಜೆಪಿಗೆ ಅಧಿಕೃತವಾಗಿ ರಾಜಿನಾಮೆ ಸಲ್ಲಿಸಿ ತಮ್ಮ ಹೊಸ ಪಕ್ಷ ಕಟ್ಟುವಲ್ಲಿ ಶ್ರಮವಹಿಸುತ್ತಿರುವ ಸಿಧುಗೆ ಈ ಬೆಳವಣಿಗೆ ಯಾವ ರೀತಿಯ ಪರಿಣಾಮ ಬೀರಲಿದೆ ಎನ್ನುವುದನ್ನು ಕಾದುನೋಡಬೇಕಿದೆ.