‘‘ನಾವು ಎರಡು ದೇಹಗಳು, ಆದರೆ ಆತ್ಮ ಒಂದೇ. ಆತ್ಮವಿಲ್ಲದೆ ದೇಹವಿರಲಾರದು, ಅವರೂ ಇಲ್ಲಿಗೆ ಬರಲಿದ್ದಾರೆ’’- ನವಜೋತ್ ಕೌರ್

ನವದೆಹಲಿ(ನ.28): ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಪತ್ನಿ ಡಾ. ನವಜೋತ್ ಕೌರ್ ಮತ್ತು ಮಾಜಿ ಒಲಿಂಪಿಯನ್ ಪರ್ಗತ್ ಸಿಂಗ್ ಇಂದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನವದೆಹಲಿಯಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಈ ಇಬ್ಬರು ಪ್ರಮುಖರು ಸೇರ್ಪಡೆಗೊಂಡಿದ್ದಾರೆ. ಈ ಸಂದರ್ಭದಲ್ಲಿ ಪಂಜಾಬ್‌ನ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲ ಉಪಸ್ಥಿತರಿದ್ದರು. ಶೀಘ್ರದಲ್ಲೇ ಪಂಜಾಬ್ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ, ಈ ಪ್ರಮುಖ ನಾಯಕರ ಸೇರ್ಪಡೆ ಕಾಂಗ್ರೆಸ್‌ಗೆ ಮಹತ್ವದ್ದಾಗಿದೆ.

ಕೌರ್ ಪತಿ, ಬಿಜೆಪಿಯ ಮಾಜಿ ಸಂಸದ ನವಜೋತ್ ಸಿಂಗ್ ಸಿಧು ಕೂಡಾ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅಮರಿಂದರ್, ‘‘ಶ್ರೀಮತಿ ಸಿಧು ಇಲ್ಲಿರುವಾಗ, ಅವರು ಬಾರದಿರುತ್ತಾರೆಯೇ?’’ ಎಂದು ಹೇಳಿದರು. ಆಗ ಅಮರಿಂದರ್‌'ರಿಂದ ಮೈಕ್ ತೆಗೆದುಕೊಂಡ ಕೌರ್, ‘‘ನಾವು ಎರಡು ದೇಹಗಳು, ಆದರೆ ಆತ್ಮ ಒಂದೇ. ಆತ್ಮವಿಲ್ಲದೆ ದೇಹವಿರಲಾರದು, ಅವರೂ ಇಲ್ಲಿಗೆ ಬರಲಿದ್ದಾರೆ’’ ಎಂದು ಹೇಳಿದರು. ಬಿಜೆಪಿ ಮಾಜಿ ಸಂಸದರಾದ ಸಿಧು ಇತ್ತೀಚೆಗೆ ತಮ್ಮ

ರಾಜ್ಯಸಭಾ ಸದಸ್ಯತ್ವಕ್ಕೆ ರಾಜಿನಾಮೆ ನೀಡಿ, ಆವಾಜ್-ಇ-ಪಂಜಾಬ್ ಪಕ್ಷ ಸ್ಥಾಪಿಸಿದ್ದರು.