5ನೇ ಬಾರಿಗೆ ಒಡಿಶಾ ಸಿಎಂ ಆಗಿ ನವೀನ್‌ ಪಟ್ನಾಯಕ್‌ ಪದಗ್ರಹಣ| ಇಡ್ಕೋ ವಸ್ತು ಪ್ರದರ್ಶನ ಮೈದಾನದಲ್ಲಿ ಪ್ರಮಾಣ ವಚನ 

ಭುವನೇಶ್ವರ್‌[ಮೇ.30]: ನರೇಂದ್ರ ಮೋದಿ ಅವರ ಅಲೆಯ ಹೊರತಾಗಿಯೂ ಒಡಿಶಾದಲ್ಲಿ ಬಿಜೆಡಿಯನ್ನು ಸತತ 5ನೇ ಬಾರಿಗೆ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದ ನವೀನ್‌ ಪಟ್ನಾಯಕ್‌ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಡ್ಕೋ ವಸ್ತು ಪ್ರದರ್ಶನ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಗಣೇಶಿಲಾಲ್‌ ಅವರು ನೂತನ ಸಿಎಂ ಮತ್ತು 20 ಸಚಿವರಿಗೆ ಪ್ರಮಾಣ ವಚನ ಬೋಧಿಸಿದರು. ಲೋಕಸಭೆಯ ಜೊತೆಗೇ ಒಡಿಶಾ ವಿಧಾನಸಭೆಗೂ ಚುನಾವಣೆ ನಡೆದಿದ್ದು, 147 ಸದಸ್ಯ ಬಲದ ವಿಧಾನಸಭೆಯಲ್ಲಿ 112 ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಡಿ ಮತ್ತೆ ಅಧಿಕಾರಕ್ಕೆ ಬಂದಿತ್ತು.

ಉಳಿದಂತೆ ಬಿಜೆಪಿ 23, ಕಾಂಗ್ರೆಸ್‌ 9, ಪಕ್ಷೇತರರು 1, ಸಿಪಿಎಂ 1 ಸ್ಥಾನ ಗೆದ್ದುಕೊಂಡಿತ್ತು. ಒಂದು ಕ್ಷೇತ್ರದಲ್ಲಿ ಅಭ್ಯಥಿ ಸಾವಿನ ಕಾರಣ ಚುನಾವಣೆ ಮುಂದೂಡಲಾಗಿತ್ತು.