Asianet Suvarna News Asianet Suvarna News

ನವೀನ್ ಪಟ್ನಾಯಕ್ ಈ ಸಾಧನೆಗಳೇ 5 ನೇ ಬಾರಿ ಸಿಎಂ ಆಗಲು ನೆರವಾಯ್ತಾ?

ನವೀನ್‌ರ ಅತಿದೊಡ್ಡ ಸಾಧನೆ ಎಂದರೆ ಯಾರೂ ಬೊಟ್ಟು ಮಾಡಿ ತೋರಿಸುವಂತಹ ತಪ್ಪು ಕೆಲಸಮಾಡಿಲ್ಲದಿರುವುದು. ಅವರು ಇಲ್ಲಿಯವರೆಗೆ 46 ಮಂತ್ರಿಗಳನ್ನು ಕಿತ್ತುಹಾಕಿದ್ದಾರೆ! ಕೆಲವೊಮ್ಮೆ ಯಾವುದೇ ನಿರ್ಧಾರ ಕೈಗೊಳ್ಳದೆ ಸಮಸ್ಯೆಗಳನ್ನು ಬಗೆಹರಿಸಿ ಅಚ್ಚರಿ ಮೂಡಿಸಿದ್ದಾರೆ. 

Naveen Patnaik 5 th consecutive win; achievements behind his success
Author
Bengaluru, First Published Jun 2, 2019, 11:29 AM IST

ನವೀನ್ ಪಟ್ನಾಯಕ್ ಅವರು ಜೀವನವನ್ನು ನೋಡುವ ವಿಧಾನವೇ ತುಂಬಾ ಸರಳ. ಅವರ ಪತ್ರಕರ್ತ ಸ್ನೇಹಿತ ವೀರ್ ಸಾಂಘ್ವಿ ದಶಕಗಳ ಹಿಂದೆ ಒಂದು ಲೇಖನದಲ್ಲಿ ಹೀಗೆ ಬರೆದಿದ್ದರು- ‘ಪಪ್ಪುವಿಗೆ (ನವೀನ್ ಪೆಟ್ ನೇಮ್) ಲೌಕಿಕದಲ್ಲಿ ಆಸಕ್ತಿಯೇ ಇಲ್ಲ.

ತಾನಂದುಕೊಂಡಂತೇ ಬದುಕುವವರು. ಅವರ ಬಳಿ ಇರುವುದು ಇಬ್ಬರು ಸೇವಕರು, ಒಂದು ಕಾರು, ಒಬ್ಬ ಕಾರು ಚಾಲಕ. ದೊಡ್ಡ ದೊಡ್ಡ ಅಲಂಕಾರಿಕ ರೆಸ್ಟೋರೆಂಟ್‌ಗಳಲ್ಲಿ ಎಂದೂ ಊಟ ಮಾಡಿದವರಲ್ಲ. ಅವರ ಮನೆಗೆ ಬರುವ ಅತಿಥಿಗಳು ಎಷ್ಟೇ ದೊಡ್ಡವರಾಗಿದ್ದರೂ ಅವರಿಗೂ ಅಡುಗೆಯವ ಮನೋಜ್ ಮಾ ಡಿಟ್ಟ ಅಡುಗೆಯೇ. ಅವರ ಬೀರುವಿನಲ್ಲಿ ತರತರಹದ ಬಟ್ಟೆಗಳಿಲ್ಲ. ಅದರ ತುಂಬಾ ಇರುವುದು ಬಿಳಿಯ ಕುರ್ತಾ-ಪೈಜಾಮಗಳು.’

ಮಿಸ್ಟರ್ ಕ್ಲೀನ್ ಪಟ್ನಾಯಕ್

ಸಾಂಘ್ವಿ ಒಮ್ಮೆ ನವೀನ್ ಅವರ ಮನೆಗೆ ಹೋದಾಗ ಕೊಂಚ ಕುಡಿದ ಸ್ಥಿತಿಯಲ್ಲಿ ಅವರ ಸರಳತೆಯ ಬಗ್ಗೆ ಕೇಳಿದ್ದರಂತೆ. ‘ಅತ್ಯಂತ ಸುಂದ ರವಾದ ವಸ್ತುಗಳನ್ನು ನಾನು ಹಲವರ ಮನೆಗಳಲ್ಲಿ ನೋಡಿದ್ದೇನೆ.

ಸೌಂದರ್ಯವನ್ನು ಪ್ರೀತಿಸಬೇಕೆಂದರೆ ಅದು ನಮ್ಮ ಸ್ವಂತದ್ದಾಗಿರ ಬೇಕೆಂದೇನೂ ಇಲ್ಲ. ನೀವು ಕೇವಲ ಅದನ್ನು ಮೆಚ್ಚಿ ಕೊಳ್ಳಬೇಕಷ್ಟೆ’ ಎಂದು ಉತ್ತರಿಸಿದ್ದರು. ನವೀನ್ ಅವರ ಜೀವನದ ತತ್ವ ಏನು, ಒಡಿಶಾದ ಜನರೇಕೆ ಅವರನ್ನು ಹೃದಯಪೂರ್ವಕವಾಗಿ ಮೇಲಿಂದ ಮೇಲೆ ಆಯ್ಕೆ ಮಾಡುತ್ತಾರೆ, ಅವರನ್ನೇಕೆ ‘ಮಿಸ್ಟರ್ ಕ್ಲೀನ್’ ಎಂದು ಕರೆಯುತ್ತಾರೆ ಎನ್ನುವುದನ್ನು ಊಹಿಸಲು ಕಷ್ಟವೇನಲ್ಲ.

ಮುಖ್ಯಮಂತ್ರಿ ನವೀನ್ ಭುವನೇಶ್ವರಕ್ಕೆ ತಮ್ಮ ದೆಹಲಿಯ ಸ್ನೇಹಿತರನ್ನು ಕರೆತರುವುದಿಲ್ಲ. ಕೆಲವೇ ಸ್ನೇಹಿತರು ಅವರ ಸಂಪರ್ಕ ದಲ್ಲಿದ್ದಾರೆ. ಅವರು ಆಗಾಗ ಒಡಿಶಾಕ್ಕೆ ಬಂದು ನವೀನ್‌ರನ್ನು ಭೇಟಿ ಮಾಡುತ್ತಾರೆ. ಆದರೆ ಅವರೆಲ್ಲರನ್ನೂ ನವೀನ್ ಮಾರು ದೂರವೇ ಇಟ್ಟಿರುತ್ತಾರೆ. ವರ್ಷದಲ್ಲಿ ಒಂದೆರಡು ಸಲ ತಾವೇ ದೆಹ ಲಿಗೆ ಹೋದಾಗ ಕೆಲ ಹಳೆಯ ಸ್ನೇಹಿತರ ಜೊತೆ ಹೋಟೆಲ್‌ಗಳಲ್ಲಿ ಸೇರುತ್ತಾರೆ.

ಜಗತ್ತಿನಾದ್ಯಂತ ನವೀನ್‌ಗೆ ಸ್ನೇಹಿತರಿದ್ದಾರೆ. ಅವರು ಇವರನ್ನು ಮಿಸ್ ಮಾಡಿಕೊಳ್ಳುತ್ತಾರೆ. ಆದರೆ ನವೀನ್ ಮಾತ್ರ ಯಾರನ್ನೂ ಮಿಸ್ ಮಾಡಿಕೊಂಡಂತೆ ಕಾಣುವುದಿಲ್ಲ. ಪ್ರತಿ ಹುಟ್ಟು ಹಬ್ಬ ಅಥವಾ ಹೊಸ ವರ್ಷಕ್ಕೆ ಸ್ನೇಹಿತರ ನೂರಾರು ಗ್ರೀಟಿಂಗ್ ಕಾರ್ಡ್‌ಗಳು ನವೀನ್‌ಗೆ ಬರುತ್ತವೆ. 

ಕೆಲವರು ಉದ್ದುದ್ದ ಪತ್ರ ಬರೆ ದಿರುತ್ತಾರೆ. ಕಳೆದ ವರ್ಷ ಮೊನಾಕೊ ದೇಶದ ರಾಜ ವಂಶಸ್ಥರೊಬ್ಬರು ಸಂದೇಶ ಕಳುಹಿಸಿದ್ದರು. ಮುಖ್ಯಮಂತ್ರಿಗಳು ಎಲ್ಲ ಸಂದೇಶವನ್ನೂ ಓದುತ್ತಾರೆ. ಆದರೆ ಯಾವುದಕ್ಕೂ ಪ್ರತಿಕ್ರಿಯಿಸುವುದಿಲ್ಲ. ಯಾಕಿರಬಹುದು? ಅವರ ನಿಲುವು ತುಂಬಾ ಸರಳ: ‘ನಾನು ಚೆನ್ನಾಗಿದ್ದೇನೆ, ಅವರೂ ಚೆನ್ನಾಗಿದ್ದಾರೆ. ಮತ್ತೇಕೆ ಚಿಂತೆ?’

ನವೀನ್ ಎಲ್ಲರಿಗಿಂತ ಭಿನ್ನ

ನವೀನ್‌ಗೆ ಅವರ ಸಹೋದರಿ ಗೀತಾ ಎಂದರೆ ಬಹಳ ಪ್ರೀತಿ. ಆಕೆ ಅಮೆರಿಕದಲ್ಲಿದ್ದಾರೆ. ಅಣ್ಣನ ಆರೋಗ್ಯ ವಿಚಾರಿಸಲು ಆಗಾಗ ಭುವನೇಶ್ವರಕ್ಕೆ ಬರುತ್ತಾರೆ. ಆಗ ನವೀನ್‌ರ ಮನೆಯಲ್ಲಿಯೇ ಉಳಿಯುತ್ತಾರೆ. ಇನ್ನೊಬ್ಬ ಸೋದರ ಪ್ರೇಮ್ ದೆಹಲಿಯಲ್ಲಿದ್ದಾರೆ. ಅವರ ಜೊತೆ ನವೀನ್ ಭೇಟಿ ಅಷ್ಟಕ್ಕಷ್ಟೆ. ಈ ಹಿಂದೆ ಅವರು ಭುವನೇಶ್ವರದಲ್ಲಿ ಕಾಣಿಸಿಕೊಂಡಿದ್ದು ಗ್ಯಾನ್ ಪಟ್ನಾಯಕ್ (ತಾಯಿ) ಅವರ ಅಂತ್ಯಸಂಸ್ಕಾರದಲ್ಲಿ. ಅರುಣ್ ಪಟ್ನಾಯಕ್, ಪ್ರೇಮ್ ಅವರ ಕಿರಿಯ ಮಗ.

2 ವರ್ಷದ ಹಿಂದೆ ಒಡಿಶಾದ ಕಟಕ್ ನಲ್ಲಿ ಕಾಣಿಸಿಕೊಂಡಿದ್ದರು. ಆಗ ಅರುಣ್, ನವೀನ್‌ರ ಉತ್ತರಾಧಿ ಕಾರಿಯಾಗಬಹುದು ಎಂಬ ಊಹಾಪೋಹ ಹರಡಿತ್ತು. ಆದರೆ ಆ ಹುಡುಗ ಮತ್ತೆಂದೂ ಒಡಿಶಾದಲ್ಲಿ ಕಂಡಿಲ್ಲ. ಅಧಿಕಾರದಲ್ಲಿರುವ ರಾಜಕಾರಣಿಯೊಬ್ಬರು ಇಡೀ ಕುಟುಂಬವನ್ನು ಸೇರಿಸಿಕೊಂಡು ಸಾಮ್ರಾಜ್ಯ ಕಟ್ಟಲು ಮುಂದಾಗುವಾಗ ನವೀನ್ ಈ ವಿಷಯದಲ್ಲಿ ಎಲ್ಲರಿಗಿಂತ ಭಿನ್ನರು.

ನವೀನ್‌ಗೂ ಮೊದಲು, ಜೆ.ಬಿ. ಪಟ್ನಾಯಕ್ ಮುಖ್ಯಮಂತ್ರಿ ಆಗಿದ್ದಾಗ ಅವರು ಸಾಕಷ್ಟು ದುಡ್ಡು ಮಾಡಿದ್ದರು. ಅವರ ಅಧಿಕಾರ ಕೇಂದ್ರದ ಸುತ್ತಮುತ್ತ ಯಾವಾಗಲೂ ಕುಟುಂಬ ದವರೇ ನೆರೆದಿರುತ್ತಿದ್ದರು. ಎಷ್ಟೆಂದರೆ, ಒಡಿಶಾದಲ್ಲಿ ಎಲ್ಲೇ ಒಂದು ಕಲ್ಲು ಎಸೆದರೂ ಪಟ್ನಾಯಕ್ ಮನೆಯ ಮೇಲೆ ಬೀಳುತ್ತದೆ ಎಂಬ ಮಾತು ಚಾಲ್ತಿಯಲ್ಲಿತ್ತು. ಆದರೆ ನವೀನ್ ಅದಕ್ಕೆ ತದ್ವಿರುದ್ಧ ವ್ಯಕ್ತಿತ್ವದವರು.

ನೋ-ನಾನ್‌ಸೆನ್ಸ್ ಚೀಫ್ ಮಿನಿಸ್ಟರ್

ನವೀನ್ ಯಾರೊಂದಿಗೂ ಸಾಫ್ಟ್ ಕಾರ್ನರ್ ಅಥವಾ ಬಾಂಧವ್ಯ ಇಟ್ಟುಕೊಂಡಿಲ್ಲ. ಅದೇ ಅವರು ರಾಜಕೀಯದಲ್ಲಿ ಗಳಿಸಿದ ಅತಿದೊಡ್ಡ ಆಸ್ತಿ. ನವೀನ್ ಅತಿ ಹೆಚ್ಚು ಅವಲಂಬಿಸುವ ಮತ್ತು ಅವರ ಮುಖ್ಯಮಂತ್ರಿ ಸಚಿವಾಲಯದಲ್ಲಿ ಕಾರ‌್ಯನಿರ್ವ ಹಿಸುವ ಉನ್ನತ ಅಧಿಕಾರಿಯೊಬ್ಬರು ಒಂದು ಇಂಟರೆಸ್ಟಿಂಗ್ ಸಂಗತಿ ಹೇಳಿದ್ದರು.

ಮುಖ್ಯಮಂತ್ರಿ ಕಾರ‌್ಯಾಲಯದ ಉನ್ನತ ಅಧಿಕಾರಿಯೊಬ್ಬರು ರಿಟೈರ್ ಆದರಂತೆ. ಆ ಅಧಿಕಾರಿ ಸೌಜನ್ಯಕ್ಕಾಗಿ ಮುಖ್ಯಮಂತ್ರಿಗೆ ಗುಡ್‌ಬೈ ಹೇಳಲು ಹೋದರು. ಅವರು ಮುಖ್ಯಮಂತ್ರಿಗಳ ಕೋಣೆಯ ಒಳಗೆ ಹೋಗಿ ಹೊರಬರಲು ಕೇವಲ 30 ಸೆಕೆಂಡ್ ತೆಗೆದುಕೊಂಡರು. ಅಂದರೆ, ಇಂತಹದುಕ್ಕೆಲ್ಲ ನವೀನ್ ಗಮನ ಕೊಡುವವರೇ ಅಲ್ಲ. ಆ ಅಧಿಕಾರಿ ನಿವೃತ್ತರಾಗುತ್ತಾರೆ, ಅವರ ಜೊತೆಗಿನ ಸಂಬಂಧ ಮುಗಿಯಿತು, ಇಷ್ಟೇ ನವೀನ್ ಯೋಚನೆ.

ಪಕ್ಷದ ಸಹೋದ್ಯೋಗಿಗಳು ಮತ್ತು ಹತ್ತಿರದ ಸಂಬಂಧಿಗಳನ್ನೂ ಅವರು ಬಹುಬೇಗ ದೂರ ಸರಿಸುತ್ತಾರೆ. ಬಹಳ ಸಂದರ್ಭದಲ್ಲಿ ಯಾವುದಾದರೂ ತಪ್ಪಿಗೆ ತಮ್ಮ ಜೊತೆಗಿರುವವರ ತಲೆದಂಡ ನೀಡಿ ಜನರಿಂದ ಚಪ್ಪಾಳೆ ಗಿಟ್ಟಿಸುತ್ತಾರೆ. ಇಂತಹ ನಿರ್ಧಾರಗಳಿಂದಾಗಿಯೇ ‘ನೋ-ನಾನ್‌ಸೆನ್ಸ್ ಚೀಫ್ ಮಿನಿಸ್ಟರ್’ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

46 ಮಂತ್ರಿಗಳ ವಜಾ!

ನವೀನ್ ಇಲ್ಲಿಯವರೆಗೆ ತಮ್ಮ ಸಂಪುಟದ 46 ಮಂತ್ರಿಗಳನ್ನು ವಜಾಗೊಳಿಸಿದ್ದಾರೆಂಬ ಒಂದು ಲೆಕ್ಕಾಚಾರವಿದೆ. ಪಕ್ಷದ ಅಧ್ಯಕ್ಷೆ ಯಾಗಿದ್ದ ನಳಿನಿಕಾಂತ ಮೊಹಂತಿಯನ್ನೇ ಅವರು ವಜಾಗೊಳಿ ಸಿದ್ದರು. ಇಬ್ಬರು ಪ್ರಭಾವಿ ಹಾಗೂ ಆಪ್ತ ಸಚಿವರಾದ ಪ್ರಶಾಂತ್ ನಂದ ಮತ್ತು ಕಮಲಾ ದಾಸ್‌ರನ್ನೂ ಹೊರದಬ್ಬಿದ್ದಾರೆ. ಅದಾದ ಬಳಿಕ ಭ್ರಷ್ಟಾಚಾರದ ಆರೋಪದ ಮೇಲೆ ದೇಬಿ ಪ್ರಸಾದ್ ಮಿಶ್ರಾ, ಅಮರ್ ಪ್ರಸಾದ್ ಸತ್ಯಪತಿ, ದುರ್ಯೋಧನ ಮಜ್ಹಿ ಮತ್ತು ಅದ್ವತ್ ಪ್ರಸಾದ್ ಸಿಂಗ್‌ರನ್ನು ಕಿತ್ತುಹಾಕಿದ್ದಾರೆ.

ತಮ್ಮ ವಿರುದ್ಧ ದಾಖಲಾಗಿದ್ದ ಕೇಸಿನ ಬಗ್ಗೆ ಚುನಾವಣಾ ಅಫಿಡವಿಟ್‌ನಲ್ಲಿ ವಿವರಣೆ ನೀಡಿರಲಿಲ್ಲ ಎಂಬ ಆರೋಪದ ಇನ್ನೊಬ್ಬ ಮಂತ್ರಿಯನ್ನು ವಜಾಗೊಳಿಸಿದ್ದಾರೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ನವೀನ್ ಯಾವುದಾರೂ ಒಂದು ಸಣ್ಣ ಆರೋಪ ತಮ್ಮ ಸರ್ಕಾರದ ಮೇಲೆ ಬಂದರೂ ಅದನ್ನು ಇನ್ನೊಬ್ಬರ ಮೇಲೆ ಹಾಕುವ ಮೂಲಕ ಅಥವಾ ಅವರನ್ನು ಕಿತ್ತುಹಾಕುವ ಮೂಲಕ ವಿವಾದವನ್ನು ತಣ್ಣಗಾಗಿಸುತ್ತಾರೆ. ಒಬ್ಬ ವ್ಯಕ್ತಿ ಎಷ್ಟೇ ದೊಡ್ಡವನಾಗಿರಬಹುದು. ಆದರೆ ಅವರ ತಪ್ಪುಗಳನ್ನು ನವೀನ್ ಸಹಿಸಿಕೊಳ್ಳುವವರಲ್ಲ. ಅವರೊಂದಿಗೆ ನಿಕಟ ಸಂಬಂಧ ಹೊಂದಿರುವ ಅತ್ಯುನ್ನತ ಅಧಿಕಾರಿಯೊಬ್ಬರು ಹೇಳುತ್ತಾರೆ, ‘ಅವರ ಅತಿದೊಡ್ಡ ಸಾಧನೆ ಎಂದರೆ ಯಾರೂ ಬೊಟ್ಟು ಮಾಡಿ ತೋರಿಸುವಂತ ತಪ್ಪು ಕೆಲಸ ಮಾಡಿಲ್ಲದಿರುವುದು. ರಾಜ್ಯದ ಈ ಹಿಂದಿನ ಮುಖ್ಯಮಂತ್ರಿಗಳು ಒಂದಾದರ ಮೇಲೊಂದು ಪ್ರಮಾದ ಎಸಗಿದ್ದರು. ಆದರೆ ನವೀನ್ ಯಾವುದೇ ತಪ್ಪು ನಿರ್ಧಾರ ಕೈಗೊಳ್ಳದೆ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.’

ಯಾವುದಕ್ಕೂ ಡೋಂಟ್ ಕೇರ್

ನವೀನ್‌ರ ಕಾರ್ಯಶೈಲಿ ಹೇಗೆ ಎಂಬುದಕ್ಕೆ ಇನ್ನೊಂದು ಉದಾ ಹರಣೆ ಕುತೂಹಲಕರವಾಗಿದೆ. ಒಮ್ಮೆ ಸಾವಿರಾರು ಅಂಗನವಾಡಿ ಕಾರ‌್ಯಕರ್ತೆಯರು ವೇತನ ಏರಿಕೆಗಾಗಿ ಭುವನೇಶ್ವರದಲ್ಲಿ ಧರಣಿ ಹೂಡಿದ್ದರು. ನವೀನ್ ಅದರ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳಲಿಲ್ಲ. ಬದಲಿಗೆ, ಮಹಿಳೆಯರು ನಡುರಸ್ತೆಯಲ್ಲಿ ಕುಳಿತು ಪ್ರತಿಭಟಿಸಲು ಯಾವುದೇ ಅಡ್ಡಿ ಮಾಡಲಿಲ್ಲ. ತಾವೇ ಬೇರೆ ದಾರಿಯಲ್ಲಿ ಓಡಾಡತೊಡಗಿದರು. ಹೀಗೆ ಒಂದು ತಿಂಗಳು ಧರಣಿ ನಡೆಯಿತು. ಕೊನೆಗೆ ಕಾರ‌್ಯಕರ್ತೆಯರು ಸುಸ್ತಾಗಿ, ಕೋಪ ತಣ್ಣಗಾಗಿ ವಾಪಸ್ ಹೋದರು. ಆಮೇಲೆ ಅವರ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಭಾಗಶಃ ಈಡೇರಿಸಿದರು.

- ರುಬೆನ್ ಬ್ಯಾನರ್ಜಿ ಬರೆದ ನವೀನ್ ಪಟ್ನಾಯಕ್ ಪುಸ್ತಕದ ಆಯ್ದ ಭಾಗ

Follow Us:
Download App:
  • android
  • ios