ಅಪಮೌಲ್ಯೀಕರಣ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಹಕರಿಸುತ್ತಿರುವ ಭಾರತದ ಜನತೆಗೆ ಗೃಹ ಸಚಿವ ರಾಜನಾಥ್ ಸಿಂಗ್ ಪ್ರಶಂಸಿದ್ದಾರೆ.

ನವದೆಹಲಿ (19): ಅಪಮೌಲ್ಯೀಕರಣ ನೀತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಹಕರಿಸುತ್ತಿರುವ ಭಾರತದ ಜನತೆಗೆ ಗೃಹ ಸಚಿವ ರಾಜನಾಥ್ ಸಿಂಗ್ ಪ್ರಶಂಸಿದ್ದಾರೆ.

“ಪ್ರಧಾನಿ ನರೇಂದ್ರ ಮೋದಿಯವರ ಈ ನಿರ್ಧಾರ ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಐತಿಹಾಸಿಕ, ದಿಟ್ಟ ಹೆಜ್ಜೆಯಾಗಿದೆ. ಸರ್ಕಾರ ರಚಿಸುವಲ್ಲಿ ಯಾರು ರಾಜಕೀಯ ಮಾಡಿಲ್ಲವೋ ಅಂತಹ ವ್ಯಕ್ತಿಗೆ ಮಾತ್ರ ಇಂತಹ ದಿಟ್ಟ

ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಎಂದು ನಾನು ಹೇಳುತ್ತೇನೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.

ಜೊತೆಗೆ ಈ ನಿರ್ಧಾರ ರಾಜಕೀಯ, ಕಾನೂನು, ಆಡಳಿತವನ್ನು ಸುಧಾರಿಸುತ್ತದೆ. ಭಯೋತ್ಪಾದನೆಗೆ ಅಂತ್ಯ ಹಾಡುತ್ತದೆ. ಬಡವ ಬಲ್ಲಿದ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ ಎಂದು ರಾಜನಾಥ್ ಸಿಂಗ್

ಅಭಿಪ್ರಾಯಪಟ್ಟಿದ್ದಾರೆ.