ರಾಷ್ಟ್ರೀಯ ಕಬಡ್ಡಿ ಚಾಂಫಿಯನ್ ರೋಹಿತ್ ಚಿಲ್ಲಾರ್ ಪತ್ನಿ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾನು ಇಲ್ಲಿ ಬದುಕಲು ಶಕ್ತಳಲ್ಲ, ಹಾಗಾಗಿ ಹೊರಟು ಹೋಗಲು ನಿರ್ಧರಿಸಿದ್ದೇನೆ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ನವದೆಹಲಿ (ಅ.19): ರಾಷ್ಟ್ರೀಯ ಕಬಡ್ಡಿ ಚಾಂಫಿಯನ್ ರೋಹಿತ್ ಚಿಲ್ಲಾರ್ ಪತ್ನಿ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾನು ಇಲ್ಲಿ ಬದುಕಲು ಶಕ್ತಳಲ್ಲ, ಹಾಗಾಗಿ ಹೊರಟು ಹೋಗಲು ನಿರ್ಧರಿಸಿದ್ದೇನೆ ಎಂದು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 ಸಾಯುವ ಮುನ್ನ ಆಕೆ 2 ತಾಸು ಆಡಿಯೋ ರೆಕಾರ್ಡ್ ಮಾಡಿದ್ದು ಅದರಲ್ಲಿ ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು, ಗಂಡ ಆಗಾಗ ಹೊಡೆಯುತ್ತಿದ್ದ ಎಂದು ಆರೋಪಿಸಿದ್ದಾರೆ.

ಲಲಿತಾ ಬೆಂಗಳೂರು ಬುಲ್ಸ್ ತಂಡದ ಆಟಗಾರ ರೋಹಿತ್ ರನ್ನು ಮದುವೆಯಾಗಿದ್ದು ಇದು ಆಕೆಗೆ ಎರಡನೇ ಮದುವೆಯಾಗಿತ್ತು.