Asianet Suvarna News Asianet Suvarna News

ರಾಷ್ಟ್ರೀಯ ಹೆದ್ದಾರಿ ಮೇಲೆ ಕುಸಿದ ಗುಡ್ಡ: ರಾಷ್ಟ್ರೀಯ ಹೆದ್ದಾರಿ 66 ಎರಡೂ ರಸ್ತೆ ಸಂಪೂರ್ಣ ಬಂದ್

ಉಡುಪಿಯ  ಜಿಲ್ಲೆಯ ಕುಂದಾಪುರದ ಬಳಿ ಇರುವ ಒತ್ತಿನೆಣೆಯಲ್ಲಿ  ಮತ್ತೆ  ಗುಡ್ಡ  ಕುಸಿತ ಸಂಭವಿಸಿದೆ. ಒತ್ತಿನೆಣೆಯ ಗುಡ್ಡ ಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರ ಎರಡೂ ರಸ್ತೆ ಸಂಪೂರ್ಣ ಬಂದ್ ಆಗಿದೆ.

National Highway Blocked Due To Hill Fall
  • Facebook
  • Twitter
  • Whatsapp

ಉಡುಪಿ(ಜೂ.11): ಉಡುಪಿಯ  ಜಿಲ್ಲೆಯ ಕುಂದಾಪುರದ ಬಳಿ ಇರುವ ಒತ್ತಿನೆಣೆಯಲ್ಲಿ  ಮತ್ತೆ  ಗುಡ್ಡ  ಕುಸಿತ ಸಂಭವಿಸಿದೆ. ಒತ್ತಿನೆಣೆಯ ಗುಡ್ಡ ಕುಸಿತದಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರ ಎರಡೂ ರಸ್ತೆ ಸಂಪೂರ್ಣ ಬಂದ್ ಆಗಿದೆ.

ಸುಮಾರು ಎರಡು ಕಿಲೋ ಮೀಟರ್ ನಷ್ಟು ವಾಹನಗಳು ರಸ್ತೆಯೂದಕ್ಕೂ  ಜಮಾಯಿಸಿದ್ದು, ಬಸ್ಸು, ಖಾಸಗಿ ವಾಹನಗಳಿಗೆ ಪರ್ಯಾಯ ರಸ್ತೆ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.  ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ   ಗುಡ್ಡು ಕುಸಿದಿದೆ. 

ಕಳೆದ ಒಂದೇ ವಾರದಲ್ಲಿ ಈ ಗುಟ್ಟ ಎರಡು ಬಾರಿ ಇದೇ ರೀತಿಯಾದ ಕುಸಿತ ಸಂಭಂವಿಸಿದ್ದು,  ಮೂರು ಬುಲ್ಡೋಜರ್ ಗಳಿಂದ ಮಣ್ಣು  ತೆರವುಗೊಳಿಸುವ ಕಾರ್ಯವನ್ನ ಮಾಡಲಾಗ್ತಾ ಇದೆ.

 

Follow Us:
Download App:
  • android
  • ios