ದೇಶಾದ್ಯಂತ ವಿಜಯ್ ದಿವಸ್ ಆಚರಣೆ| 1971ರ ಪಾಕ್ ವಿರುದ್ಧದ ಐತಿಹಾಸಿಕ ವಿಜಯ| ಭಾರತೀಯ ಸೇನೆ ಮುಂದೆ 93 ಸಾವಿರ ಪಾಕ್ ಯೋಧರ ಶರಣಾಗತಿ| ಭಾರತೀಯ ಸೇನೆಯ ಹೋರಾಟ ನೆನೆದ ಪ್ರಧಾನಿ ಮೋದಿ| ಹುತಾತ್ಮ ಯೋಧರಿಗೆ ರಾಷ್ಟ್ರಪತಿಒ ಕೋವಿಂದ್ ನಮನ| ತನ್ನ ಸ್ವಾತಂತ್ರ್ಯಕ್ಕಾಗಿ ಭಾರತದ ಸಹಾಯ ನೆನೆದ ಬಾಂಗ್ಲಾದೇಶ
ನವದೆಹಲಿ(ಡಿ.16): 1971ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಗೆಲುವು ಸಾಧಿಸಿದ ಅಂಗವಾಗಿ ದೇಶಾದ್ಯಂತ ಇಂದು ವಿಜಯ್ ದಿವಸ್ ಆಚರಿಸಲಾಗುತ್ತಿದ್ದು, ಹುತಾತ್ಮ ಯೋಧರನ್ನು ಸ್ಮರಿಸಲಾಗುತ್ತಿದೆ.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಸೇನೆಯ ಉಪ ಮುಖ್ಯಸ್ಥ ಲೆಪ್ಟಿನೆಟ್ ಜನರಲ್ ದೇವರಾಜ್ ಅಂಬು, ನೌಕದಳದ ಮುಖ್ಯಸ್ಥ ಆಡ್ಮೀರಲ್ ಸುನೀಲ್ ಲಾಂಬಾ, ಏರ್ ಚೀಪ್ ಮಾರ್ಷಲ್ ಬಿೇಂದ್ರ ಸಿಂಗ್ ದಾನೊಹಾ ಅಮರ್ ಜ್ಯೋತಿ ಬಳಿ ಹುತಾತ್ಮ ಯೋಧರಿಗೆ ಶ್ರದ್ದಾಂಜಲಿ ಆರ್ಪಿಸಿದರು.
ಪ್ರಧಾನಿ ಟ್ವೀಟ್:
ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಯೋಧರನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿದ್ದಾರೆ. ಅವರ ಅಪ್ರತಿಮ ಧೈರ್ಯ, ದೇಶ ಭಕ್ತಿ ನಮ್ಮ ದೇಶಕ್ಕೆ ಸುರಕ್ಷತೆ ಒದಗಿಸಿದ್ದು, ಅವರ ಸೇವೆ ಯಾವಾಗಲು ಪ್ರತಿಯೊಬ್ಬ ಭಾರತೀಯರನ್ನು ಸ್ಪೂರ್ತಿ ತುಂಬಲಿದೆ ಎಂದು ಟ್ವೀಟರ್ ಸಂದೇಶ ಮಾಡಿದ್ದಾರೆ.
ರಾಷ್ಟ್ರಪತಿ ನಮನ:
1971ರಲ್ಲಿ ಸಶಸ್ತ್ರ ಪಡೆಗಳು ದೇಶಕ್ಕಾಗಿ ಹೋರಾಡಿ ವಿಶ್ವದಾದ್ಯಂತ ಮಾನವ ಸ್ವಾತಂತ್ರ್ಯ ತತ್ವಗಳನ್ನು ಹರಡಿದ್ದಾರೆ. ದೇಶಕ್ಕಾಗಿ ಹೋರಾಡಿ ಪ್ರಾಣ ತ್ಯಾಗ ಮಾಡಿದ ಯೋದರಿಗೆ ನಾವೆಲ್ಲ ಸಂತಾಪ ಸೂಚಿಸಬೇಕಾಗಿದೆ ಎಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸ್ಮರಿಸಿದ್ದಾರೆ.

1971 ಡಿಸೆಂಬರ್ 16 ರಂದು ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಅಮಿರ್ ಅಬ್ದುಲ್ಲಾ ಖಾನ್ ನೈಯಾಜಿ ಸೇರಿದಂತೆ 93 ಸಾವಿರ ಸೈನಿಕರು ಭಾರತೀಯ ಸೈನಿಕರ ಮುಂದೆ ಶರಣಾಗಿದ್ದರು.
ಭಾರತದ ಸಹಾಯ ನೆನೆದ ಬಾಂಗ್ಲಾ:
1971ರ ಯುದ್ಧದಲ್ಲಿ ಭಾರತೀಯ ಸೇನೆಯ ನೆರವಿಲ್ಲದೆ ಹೋಗಿದ್ದರೆ ನಾವು ಪಾಕ್ ಹಿಡಿತದಿಂದ ಬಿಡಿಸಿಕೊಂಡು ಸ್ವತಂತ್ರ ರಾಷ್ಟ್ರವಾಗಲು ಸಾಧ್ಯವಾಗುತ್ತಿರಲಿಲ್ಲ ಎಂದು ಬಾಂಗ್ಲಾದೇಶ ನಿಯೋಗದ ಮುಖ್ಯಸ್ಥ ಎಂಪಿ ಕ್ವಾಜಿ ರೊಸಿ ಹೇಳಿದ್ದಾರೆ.
