Asianet Suvarna News Asianet Suvarna News

ಸೆರೆಯಾಯ್ತು ಕ್ಷುದ್ರಗ್ರಹ ಅಪ್ಪಳಿಸುವ ವಿಡಿಯೋ..!

ಇದೇ ಮೊದಲ ಬಾರಿಗೆ ಕ್ಷುದ್ರಗ್ರಹವೊಂದು ಭೂಮಿಗೆ ಬಂದು ಅಪ್ಪಳಿಸುವ ದೃಶ್ಯವನ್ನು ನಾಸಾ ಸೆರೆ ಹಿಡಿದಿದೆ. 2018 LA ಎಂಬ ಬುಲ್ಡೋಜರ್ ಗಾತ್ರದ ಕ್ಷುದ್ರಹ್ರಹ ದ.ಆಫ್ರಿಕಾ ಸಮೀಪ ಭೂಮಿಗೆ ಅಪ್ಪಳಿಸುತ್ತಿರುವ ದೃಶ್ಯವನ್ನು ಸೆರೆ ಹಿಡಿಯಲಾಗಿದೆ.

NASA spots asteroid on crash course with Earth

ಬೆಂಗಳೂರು(ಜೂ.5): ಇದೇ ಮೊದಲ ಬಾರಿಗೆ ಕ್ಷುದ್ರಗ್ರಹವೊಂದು ಭೂಮಿಗೆ ಬಂದು ಅಪ್ಪಳಿಸುವ ದೃಶ್ಯವನ್ನು ನಾಸಾ ಸೆರೆ ಹಿಡಿದಿದೆ. 2018 LA ಎಂಬ ಬುಲ್ಡೋಜರ್ ಗಾತ್ರದ ಕ್ಷುದ್ರಹ್ರಹ ದ.ಆಫ್ರಿಕಾ ಸಮೀಪ ಭೂಮಿಗೆ ಅಪ್ಪಳಿಸುತ್ತಿರುವ ದೃಶ್ಯವನ್ನು ಸೆರೆ ಹಿಡಿಯಲಾಗಿದೆ.

ಈ ಕುರಿತು ಮಾಹಿತಿ ಬಿಡುಗಡೆ ಮಾಡಿರುವ ನಾಸಾ, 6 ಅಡಿ ಉದ್ದದ ಬುಲ್ಡೋಜರ್ ಗಾತ್ರದ ಕ್ಷುದ್ರಗ್ರಹ ಅತ್ಯಂತ ವೇಗವಾಗಿ ಭೂಮಿಗೆ ಅಪ್ಪಳಿಸಿತು ಎಂದು ಹೇಳಿದೆ. ಆದರೆ ಈ ಅಪ್ಪಳಿಸುವಿಕೆಯಿಂದ ಭುಮಿಗೆ ಯಾವುದೇ ಹಾನಿ ಆಗಿಲ್ಲ ಎಂದೂ ನಾಸಾ ಸ್ಪಷ್ಟಪಡಿಸಿದೆ.  ಅರಿಝೋನಾ ವಿಶ್ವವಿದ್ಯಾಲಯದ ಟಕ್ಸನ್ ನ ಕ್ಯಾಟಲಿನಾ ಸ್ಕೈ ಸಮೀಕ್ಷೆ ಮೂಲಕ ಈ ಕ್ಷುದ್ರಗ್ರಹದ ಚಲನೆಯನ್ನು ಕಂಡುಹಿಡಿಯಲಾಗಿತ್ತು.

ಈ ಕುರಿತು ಮಾಹಿತಿ ನೀಡಿರುವ ನಾಸಾದ ಪ್ಲಾನೆಟರಿ ಡಿಫೆನ್ಸ್ ಅಧಿಕಾರಿ ಲಿಂಡ್ಲಿ ಜಾನ್ಸನ್, ಯಾವುದೇ ಮುನ್ಸೂಚನೆ ಅಥವಾ ಎಚ್ಚರಿಕೆ ನೀಡಬಹುದಾಗಿದ್ದ ಅಪಾಯವನ್ನೇನು ಈ ಕ್ಷುದ್ರಗ್ರಹ ಹೊತ್ತು ತಂದಿರಲಿಲ್ಲ ಎಂದು ಹೇಳಿದ್ದಾರೆ. ಇದು ಸಾಮಾನ್ಯ ವಿದ್ಯಮಾನವಾಗಿದ್ದು, ನಿರ್ದಿಷ್ಟ ಕ್ಷುದ್ರಗ್ರಹವೊಂದು ಭೂಮಿಗೆ ಅಪ್ಪಳಿಸುವ ಮಾಹಿತಿ ಮೊದಲೇ ಗೊತ್ತಾಗಿದ್ದು ಇದೇ ಮೊದಲು ಎಂದು ಜಾನ್ಸನ್ ಸ್ಪಷ್ಟಪಡಿಸಿದ್ದಾರೆ. 

Follow Us:
Download App:
  • android
  • ios