ಅಸಂಖ್ಯಾತ ರಹಸ್ಯಗಳನ್ನು ತನ್ನ ಉರಿಯೊಡಲಲ್ಲಿ ಬಚ್ಚಿಟ್ಟುಕೊಂಡಿರುವ ಸೌರಮಂಡಲದ ಕೇಂದ್ರ ಬಿಂದು ‘ಸೂರ್ಯ’ನ ನಿಕಟ ಅಧ್ಯಯನಕ್ಕೆ ಮಾನವ ಇತಿಹಾಸದಲ್ಲೇ ಮೊದಲ ಸಾಹಸವೊಂದು ಶನಿವಾರ ಆರಂಭವಾಗುತ್ತಿದೆ.  

ವಾಷಿಂಗ್ಟನ್ : ಅಸಂಖ್ಯಾತ ರಹಸ್ಯಗಳನ್ನು ತನ್ನ ಉರಿಯೊಡಲಲ್ಲಿ ಬಚ್ಚಿಟ್ಟುಕೊಂಡಿರುವ ಸೌರಮಂಡಲದ ಕೇಂದ್ರ ಬಿಂದು ‘ಸೂರ್ಯ’ನ ನಿಕಟ ಅಧ್ಯಯನಕ್ಕೆ ಮಾನವ ಇತಿಹಾಸದಲ್ಲೇ ಮೊದಲ ಸಾಹಸವೊಂದು ಶನಿವಾರ ಆರಂಭವಾಗಲಿದೆ. 

ಅಮೆರಿಕದ ರಾಷ್ಟ್ರೀಯ ವೈಮಾಂತರಿಕ್ಷ ಮತ್ತು ಬಾಹ್ಯಾಕಾಶ ನಿರ್ವಹಣಾ (ನಾಸಾ) ಸಂಸ್ಥೆ ನಿರ್ಮಿಸಿರುವ ಪಾರ್ಕರ್‌ ಸೋಲಾರ್‌ ಪ್ರೋಬ್‌ ಎಂಬ ಗಗನನೌಕೆ ಉಡಾವಣೆ ಆಗಲಿದ್ದು, ಸೂರ್ಯನ ಅತ್ಯಂತ ಸಮೀಪಕ್ಕೆ ತನ್ನ ಪ್ರಯಾಣ ಆರಂಭಿಸಲಿದೆ. 

ಕೇಪ್‌ ಕೆನವೆರಲ್‌ನಿಂದ ಅಮೆರಿಕ ಕಾಲಮಾನದ ಪ್ರಕಾರ ಶನಿವಾರ ಬೆಳಗ್ಗೆ 3.33ರ ನಂತರದ ಒಂದು ತಾಸಿನ ಅವಧಿಯೊಳಗೆ ಪಾರ್ಕರ್‌ ಸೋಲಾರ್‌ ಪ್ರೋಬ್‌ ಅನ್ನು ಹೊತ್ತ ಡೆಲ್ಟಾ-4 ಬೃಹತ್‌ ರಾಕೆಟ್‌ ನಭಕ್ಕೆ ಜಿಗಿಯಲಿದೆ. ಈ ಐತಿಹಾಸಿಕ ವಿದ್ಯಮಾನವನ್ನು ವಿಶ್ವವೇ ಎದುರು ನೋಡುತ್ತಿದೆ.


61 ಲಕ್ಷ ಕಿಮೀ: ಸೂರ್ಯ ನಾಭಿಯಿಂದ 61 ಲಕ್ಷ ಕಿ.ಮೀ.ಯಷ್ಟುಸಮೀಪ ಸಾಗಲಿದೆ ಪಾರ್ಕರ್‌ ಬಾಹ್ಯಾಕಾಶ ನೌಕೆ

7 ವರ್ಷ: ಸೂರ್ಯನ ಬಳಿ ತಲುಪಿದ ಬಳಿಕ 7 ವರ್ಷದಲ್ಲಿ 24 ಬಾರಿ ಅದರ ವಾತಾವರಣವನ್ನು ಸುತ್ತಲಿದೆ ಈ ನೌಕೆ

.10000 ಕೋಟಿ: ಈ ಸೌರಾಧ್ಯಯನ ಯೋಜನೆಗೆ ಅಮೆರಿಕ ಸರ್ಕಾರ ಮಾಡುತ್ತಿರುವ ಅಂದಾಜು ಖರ್ಚಿನ ಮೊತ್ತ

7 ಲಕ್ಷ ಕಿಮೀ: ಸೂರ‍್ಯ ಸಮೀಪಿಸುತ್ತಿದ್ದಂತೆ ನೌಕೆ ವೇಗ ಗಂಟೆಗೆ 7 ಲಕ್ಷ ಕಿ.ಮೀ. ಅತಿವೇಗದ ಮಾನವನಿರ್ಮಿತ ವಾಹನ

1 ಕೋಟಿ ಡಿಗ್ರಿ: ಹೊರವಲಯ (ಕೊರೋನಾ) 1 ಕೋಟಿ ಡಿಗ್ರಿ ವರೆಗಿನ ಶಾಖವಿದ್ದು, ನೌಕೆ ಈ ಉಷ್ಣ ತಡೆಯಬೇಕಿದೆ